ಕ್ರೀಡೆ

ಜಸ್​ಪ್ರೀತ್​ ಬುಮ್ರಾಗೆ ಇಶಾ ಗುಹಾ ಜನಾಂಗೀಯ ನಿಂದನೆ! ವಿವಾದದಲ್ಲಿ ಇಂಗ್ಲೆಂಡ್​ ಮಾಜಿ ಕ್ರಿಕೆಟರ್​...

ಬ್ರಿಸ್ಬೇನ್: ಆಸ್ಟ್ರೇಲಿಯಾ ವಿರುದ್ಧದ 3ನೇ ಟೆಸ್ಟ್​ ಪಂದ್ಯದ 2ನೇ ದಿನ ಭಾರತದ ಸ್ಟಾರ್​ ವೇಗಿ ಜಸ್​ಪ್ರೀತ್​ ಬುಮ್ರಾ ಬಗ್ಗೆ ಜನಾಂಗೀಯ ಸೂಕ್ಷ್ಮತೆಯ ಟಿಪ್ಪಣಿ ನೀಡುವ ಮೂಲಕ ಇಂಗ್ಲೆಂಡ್​ ಮಾಜಿ ಮಹಿಳಾ ಕ್ರಿಕೆಟರ್​ ಹಾಗೂ ವೀಕ್ಷಕ ವಿವರಣೆಗಾರ್ತಿ ಇಶಾ ಗುಹಾ ತೀವ್ರ ಟೀಕೆಗಗಳಿಗೆ ಗುರಿಯಾಗಿದ್ದಾರೆ. ಜತೆಗೆ ಇದು 2008ರ "ಮಂಕಿಗೇಟ್​' ವಿವಾದವನ್ನು ನೆನಪಿಸಿದೆ.

ಭಾನುವಾರ ಬೆಳಗ್ಗೆ ಬುಮ್ರಾ ಬೇಗನೆ ಎರಡು ವಿಕೆಟ್​ಗಳನ್ನು ಕಬಳಿಸಿದ ಬಳಿಕ ಅವರ ಬಗ್ಗೆ ಮೆಚ್ಚುಗೆ ಸೂಚಿಸುವ ಭರದಲ್ಲಿ ಇಶಾ, "ಪ್ರೈಮೇಟ್​' (ವಾನರ, ಸಸ್ತನಿ ಪ್ರಾಣಿ) ಎಂದು ಕರೆದರು. ಬುಮ್ರಾ ಬೆಳಗ್ಗೆ 5 ಓವರ್​ಗಳಲ್ಲಿ 4 ರನ್​ಗಳಿಗೆ 2 ವಿಕೆಟ್​ ಕಬಳಿಸಿದ ಬಗ್ಗೆ "ಫಾಕ್ಸ್​ ಸ್ಪೋರ್ಟ್ಸ್​' ಚಾನಲ್​ನ ಕಾಮೆಂಟರಿ ಬಾಕ್ಸ್​ನಲ್ಲಿ ಮಾಜಿ ವೇಗಿ ಬ್ರೆಟ್​ ಲೀ, ಇಶಾ ಅಭಿಪ್ರಾಯ ಕೇಳಿದರು. ಆಗ ಇಶಾ, "ಬುಮ್ರಾ ಅವರೊಬ್ಬ ಅತ್ಯಂತ ಅಮೂಲ್ಯವಾದ ಫ್ರೈಮೇಟ್​' ಎಂದರು. ಇದರ ಬೆನ್ನಲ್ಲೇ ಸಾಮಾಜಿಕ ಜಾಲತಾಣದಲ್ಲಿ ಅಭಿಮಾನಿಗಳು ಇಶಾ ವಿರುದ್ಧ ಜನಾಂಗೀಯ ನಿಂದನೆಯ ಆರೋಪಗಳನ್ನು ಮಾಡಿದರು.