ಕ್ರೀಡೆ

ಭಾರತದ ವಿಶ್ವಕಪ್​ ಗೆಲುವಿಗೆ ಗಣ್ಯರು, ತಾರೆಯರಿಂದ ಶುಭ ಹಾರೈಕೆ...

ಬೆಂಗಳೂರು: ಆಸ್ಟ್ರೇಲಿಯಾ ತಂಡದ ವಿರುದ್ಧ ಭಾನುವಾರ ಅಹಮದಾಬಾದ್​ನಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್​ ಟೂರ್ನಿಯ ಫೈನಲ್​ ಪಂದ್ಯದಲ್ಲಿ ಗೆಲ್ಲುವ ಮೂಲಕ ಭಾರತ 3ನೇ ಬಾರಿ ಏಕದಿನ ವಿಶ್ವ ಚಾಂಪಿಯನ್​ ಪಟ್ಟಕ್ಕೇರಲಿ ಎಂದು ಹಲವು ಗಣ್ಯರು ಮತ್ತು ತಾರೆಯರು ಶುಭ ಹಾರೈಸಿದ್ದಾರೆ.

*ಭಾರತ ತಂಡಕ್ಕೆ ಎಂಥಾ ಅದ್ಭುತ ರನ್​! ನಮ್ಮ ತಂಡವು ಆಟವನ್ನು ಸಂಪೂರ್ಣವಾಗಿ ಹೊಸ ಮಟ್ಟಕ್ಕೆ ಕೊಂಡೊಯ್ದಿದೆ. 10ಕ್ಕೆ 10 ಪಂದ್ಯದಲ್ಲೂ ಗೆದ್ದಿದೆ. ಅನುಕರಣೀಯ ನಾಯಕತ್ವ ಮತ್ತು ಆಟಗಾರರ ವೈಯಕ್ತಿಕ ಶ್ರೇಷ್ಠ ಪ್ರದರ್ಶನಗಳ ಬಲ ಹೊಂದಿರುವ ಅಸಾಧಾರಣ ತಂಡ ಫೈನಲ್​ನಲ್ಲೂ ಯಾವುದೇ ಚಿಂತೆ ಹೊಂದಿರಬಾರದು. ಭಾರತ ವಿಶ್ವಕಪ್​ ಗೆಲ್ಲುವ ಬಗ್ಗೆ ನನಗೆ ಖಾತ್ರಿ ಇದೆ. ನಮ್ಮ ಹುಡುಗರು ಇಡೀ ದೇಶಕ್ಕೆ ಹೆಮ್ಮೆ ಮತ್ತು ಸಂತೋಷ ತರುವ ವಿಶ್ವಾಸ ನನಗಿದೆ.

| ಸದ್ಗುರು

ಗಿಲ್​ ಮೇಲೆ ಕ್ರಷ್​!

ವಿಶ್ವಾದ್ಯಂತ ನೆಲೆಸಿರುವ ಭಾರತೀಯರೆಲ್ಲರೂ ಈ ಪಂದ್ಯಕ್ಕೆ ಕಾಯುತ್ತಿದ್ದೇವೆ. ಈ ತಂಡ ಅದ್ಭುತ ಾಮ್​ರ್ನಲ್ಲಿದೆ. ಈ ಬಾರಿಯ ವಿಶ್ವಕಪ್​ನ ಬೆಸ್ಟ್​ ತಂಡ ಎನ್ನಬಹುದು. ಒಬ್ಬರು ಆಡಿಲ್ಲ, ಆಡಲ್ಲ ಅಂತ ಹೇಳುವಂತೆಯೇ ಇಲ್ಲ. ಎಲ್ಲರೂ ಚೆನ್ನಾಗಿ ಆಡಿದ್ದಾರೆ. ಕೆಲ ಆಟಗಾರರು ವೈಯಕ್ತಿಕ ದಾಖಲೆಗಳನ್ನು ನಿರ್ಮಿಸಿದ್ದಾರೆ. ಭಾರತ ತಂಡಕ್ಕೆಂದೇ ಬರೆದಿಟ್ಟಿರುವ ವಿಶ್ವಕಪ್​ ಇದು. ಪ್ರತಿಯೊಬ್ಬ ಭಾರತೀಯನ ಗೆಲುವು. ಈ ಬಾರಿ ಎಲ್ಲ 10 ಪಂದ್ಯಗಳನ್ನೂ ನೋಡಿದ್ದೇನೆ. ಫೈನಲ್ಸ್​ ಗೆಲ್ಲೋದು ಪಕ್ಕಾ ಆದರೆ ಹೇಗೆ ಗೆಲ್ಲುತ್ತಾರೆ ಎಂಬುದನ್ನು ನೋಡಬೇಕಷ್ಟೇ. ನನಗಂತೂ ನಮ್ಮ ಬೌಲರ್​ಗಳ ಮೇಲೆ ಕ್ರಷ್​ ಆಗಿದೆ. ರೋಹಿತ್​, ಶುಭ್​ಮಾನ್​, ವಿರಾಟ್​, ಶಮಿ, ಬುಮ್ರಾ ಎಲ್ಲರೂ ಅತ್ಯುತ್ತಮ ಫಾಮ್​ರ್ನಲ್ಲಿದ್ದಾರೆ.

| ಕೃಷಿ ತಾಪಂಡ, ನಟಿ

ಪಕ್ಕಾ ನಾವೇ ಗೆಲ್ತೀವಿ...

ಫೈನಲ್​ ಪಂದ್ಯ ವೀಸಲು 15 ಮಂದಿ ಫ್ರೆಂಡ್ಸ್​ ರೆಸ್ಟೋರೆಂಟ್​ನಲ್ಲಿ ಸೇರಲು ಪ್ಲಾನ್​ ಮಾಡಿಕೊಂಡಿದ್ದೇವೆ. ನಮ್ಮ ತಂಡದ ನೀಲಿ ಜರ್ಸಿ ಧರಿಸಿ ಮಧ್ಯಾಹ್ನ 2.30ರಿಂದ ಮ್ಯಾಚ್​ ಮುಗಿಯವವರೆಗೂ ಎಂಜಾಯ್​ ಮಾಡಲಿದ್ದೇವೆ. ಭಾರತ ಪಕ್ಕಾ ಗೆಲ್ಲಲಿದೆ. ಶುಭ್​ಮಾನ್​ ಗಿಲ್​ ಸ್ಮಾರ್ಟ್​ ಮತ್ತು ಹ್ಯಾಂಡ್ಸಮ್​ ಆಗಿದ್ದಾರೆ. ಎಲ್ಲರಿಗೂ ಅವರ ಮೇಲೆ ಕ್ರಷ್​ ಇರುವಂತೆ ನನಗೂ ಕ್ರಷ್​ ಇದೆ. ಆದರೆ, ವಿರಾಟ್​ ಕೊಹ್ಲಿ ಆಲ್​ ಟೈಮ್​ ಫೇವರಿಟ್​ ಆಟಗಾರ. ಶಮಿ ಉತ್ತಮ ಫಾಮ್​ರ್ನಲ್ಲಿದ್ದಾರೆ. ಆಸ್ಟ್ರೆಲಿಯಾ, ಭಾರತ ಎರಡೂ ಸಮಬಲ ಹೊಂದಿರುವ ತಂಡಗಳೇ. ಮೊದಲು ಬ್ಯಾಟಿಂಗ್​ ಸಿಕ್ಕರೆ, 350 ಪ್ಲಸ್​ ಸ್ಕೋರ್​ ಮಾಡಿದರೆ ಉತ್ತಮ.

|ದೀಪ್ತಿ ಮೋಹನ್​, ನಟಿ

ಕೊಹ್ಲಿ, ರಾಹುಲ್​ ಬೆಸ್ಟ್​

ಇವತ್ತು ಮನೆಯಲ್ಲಿ ಮ್ಯಾಚ್​ ನೋಡಲಿದ್ದೇನೆ. ಭಾರತವೇ ಗೆಲ್ಲುತ್ತದೆ. ಎಲ್ಲ ಆಟಗಾರರು ತುಂಬ ಒಳ್ಳೆ ಫಾಮ್​ರ್ನಲ್ಲಿದ್ದಾರೆ. ಬ್ಯಾಟಿಂಗ್​, ಬೌಲಿಂಗ್​ ಎರಡೂ ಕಡೆಗಳಲ್ಲಿ ಉತ್ತಮ ಪ್ರದರ್ಶನ ತೋರಿದ್ದಾರೆ. ಆಸ್ಟ್ರೆಲಿಯಾ ಫೈನಲ್ಸ್​ ಆಡಿರುವುದರಲ್ಲಿ ಹೆಚ್ಚು ಅನುಭವಿ. ಭಾರತ ಮೊದಲ ಬ್ಯಾಟ್​ ಮಾಡಿದರೆ ಗೆಲ್ಲುವ ಅವಕಾಶ ಹೆಚ್ಚು. ವಿರಾಟ್​ ಕೊಹ್ಲಿ ಮತ್ತು ಕೆಎಲ್​ ರಾಹುಲ್​ ಇಬ್ಬರೂ ನನಗಿಷ್ಟ. ಒಂದು ಇನ್ನಿಂಗ್ಸ್​ ಕಟ್ಟುವ ಶಕ್ತಿಯಿರುವ ಆಟಗಾರರು. ತಾಂತ್ರಿಕವಾಗಿ ರಾಹುಲ್​ ಚೆನ್ನಾಗಿ ಆಡುತ್ತಾರೆ. ವಿರಾಟ್​ ಕೊಹ್ಲಿ ಈಗಿನ ಜನರೇಷನ್​ನ ಅತ್ಯುತ್ತಮ ಒನ್​ ಡೇ ಪ್ಲೇಯರ್​.

| ನಿರೂಪ್​ ಭಂಡಾರಿ, ನಟ

ವಿಶ್ವಕಪ್​ ನಮ್ಮದೇ

ಭಾರತ ಗೆಲ್ಲುತ್ತದೆ ಬೇರೆ ಯೋಚನೆಯೇ ಇಲ್ಲ. ಮೊದಲು ಬ್ಯಾಟಿಂಗ್​ ಮಾಡಿಯೂ ಗೆದ್ದಿದ್ದೇವೆ, ಚೇಸ್​ ಮಾಡಿ ಕೂಡ ಗೆದ್ದಿದ್ದೇವೆ. ಬೆಸ್ಟ್​ ಬೌಲಿಂಗ್​ ಅಟ್ಯಾಕ್​ ಇದೆ. ಜಹೀರ್​ ಖಾನ್​, ಜಾವಗಲ್​ ಶ್ರೀನಾಥ್​, ಅನಿಲ್​ ಕುಂಬ್ಳೆ, ವೆಂಕಟೇಶ್​ ಪ್ರಸಾದ್​ ಇದ್ದಾಗ ಹೇಗಿತ್ತೋ ಹಾಗಿದೆ ಈಗಿನ ಬೌಲಿಂಗ್​ ಲೈನಪ್​. ಗಿಲ್​ ಬ್ಯಾಟಿಂಗ್​ ಬಗ್ಗೆ ನಿರೀೆಯಿದೆ. ಅತ್ಯುತ್ತಮ ತಂಡಗಳಲ್ಲೊಂದು. ಇಂದು ಮನೆಯಲ್ಲೇ ಲಾಕ್​ ಆಗಿಬಿಡುತ್ತೇನೆ. ಕುಟುಂಬದವರೆಲ್ಲರೂ ಒಟ್ಟಿಗೆ ಮ್ಯಾಚ್​ ಎಂಜಾಯ್​ ಮಾಡುತ್ತೇನೆ.

| ಚಂದನ್​, ನಟ

ಫೈನಲ್​ನಲ್ಲೂ ರೋಹಿತ್​ ಸಿಡಿಯಲಿ

ಭಾರತ ತಂಡದ ಬೌಲಿಂಗ್​ ವಿಭಾಗ ಆಸ್ಟ್ರೆಲಿಯಾಕ್ಕಿಂತ ಹೆಚ್ಚು ಸಮತೋಲನದಿಂದ ಕೂಡಿದೆ. ಟೂರ್ನಿಯಲ್ಲಿ ಆಸೀಸ್​ ಬೌಲಿಂಗ್​ ನಿರ್ವಹಣೆಯೂ ಅಸ್ಥಿರವಾಗಿದೆ. ನಾಯಕ ರೋಹಿತ್​ ಶರ್ಮ ಅವರ ಆಕ್ರಮಣಕಾರಿ ಬ್ಯಾಟಿಂಗ್​ ಭಾರತದ ಯಶಸ್ಸಿನಲ್ಲಿ ಪ್ರಮುಖ ಪಾತ್ರ ನಿರ್ವಹಿಸಿದೆ. ಫೈನಲ್​ನಲ್ಲೂ ಅವರು ಅದೇ ರೀತಿ ಸಿಡಿಯಬೇಕು. ಆಸೀಸ್​ ಬ್ಯಾಟಿಂಗ್​ ವಿಭಾಗವೂ ಬಲಿಷ್ಠವಾಗಿದೆ. ಹೀಗಾಗಿ ಭಾರತಕ್ಕೆ ಫೈನಲ್​ನಲ್ಲಿ ಗೆಲುವು ಸುಲಭವಾಗಿ ಸಿಗದು.

| ಜಿಆರ್​ ವಿಶ್ವನಾಥ್​, ಮಾಜಿ ಕ್ರಿಕೆಟಿಗ