ಕ್ರೀಡೆ

Bengaluru Stampede: ವಿರಾಟ್​​ ಕೊಹ್ಲಿ ವಿರುದ್ಧ ದೂರು!

Bengaluru Stampede: ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಜೂ.4ರಂದು ನಡೆದ ಭೀಕರ ಕಾಲ್ತುಳಿತದಲ್ಲಿ 11 ಜನರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಆರ್​ಸಿಬಿ ಆಟಗಾರ ವಿರಾಟ್​ ಕೊಹ್ಲಿ ವಿರುದ್ಧ ಕಬ್ಬನ್​​ ಪಾರ್ಕ್​ ಪೊಲೀಸ್​ ಠಾಣೆಯಲ್ಲಿ ಸಾಮಾಜಿಕ ಹೋರಾಟಗಾರ ಎಚ್​​.ಎಂ.ವೆಂಕಟೇಶ್​​ ಎಂಬುವವರು ದೂರು ಸಲ್ಲಿಸಿದ್ದಾರೆ.

ಅತಿಯಾದ ಜನಸಂದಣಿಯಿಂದಾಗಿ 11 ಮಂದಿ ಯುವ ಅಭಿಮಾನಿಗಳು ದುರ್ಮರಣ ಹೊಂದಿದ್ದು, ಈ ಅವ್ಯವಸ್ಥೆಗೆ ವಿರಾಟ್ ಕೊಹ್ಲಿ ಕೂಡ ನೇರವಾಗಿ ಹೊಣೆಗಾರರು ಎಂದು ದೂರಿನಲ್ಲಿ ಆರೋಪಿಸಲಾಗಿದೆ ಎಂದು ವರದಿ ಉಲ್ಲೇಖಿಸಿದೆ.

ಹಲವರ ತಲೆದಂಡ

ಇನ್ನು ಪ್ರಕರಣಕ್ಕೆ ಸಂಬಂಧಪಟ್ಟಯಂತೆ ಸರ್ಕಾರ ಬೆಂಗಳೂರು ನಗರ ಪೊಲೀಸ್ ಆಯುಕ್ತ ದಯಾನಂದ್ ಸೇರಿದಂತೆ ಡಿಸಿಪಿ, ಎಸಿಪಿ, ಕಬ್ಬನ್​​ಪಾರ್ಕ್​ ಪೊಲೀಸ್ ಇನ್ಸ್‌ಪೆಕ್ಟರ್ ಹಾಗೂ ಹಿರಿಯ ಅಧಿಕಾರಿಗಳನ್ನು ಅಮಾನತು ಮಾಡಿದೆ.ಅಲ್ಲದೆ, ಆರ್​ಸಿಬಿ ಸೇರಿ ಡಿಎನ್​​ಎ ಹಾಗೂ ಕೆಎಸ್​​ಸಿಎ ಮುಖ್ಯಸ್ಥರ ವಿರುದ್ಧವೂ ಪ್ರಕರಣ ದಾಖಲಾಗಿದೆ.