ಕ್ರೀಡೆ

ಹ್ಯಾಟ್ರಿಕ್ ಗೆಲುವಿನ ಗುರಿಯಲ್ಲಿ ಬೆಂಗಳೂರು ಎಫ್ ಸಿ

ಮಾರ್ಗೋವಾ: ಹ್ಯಾಟ್ರಿಕ್ ಗೆಲುವಿನ ಗುರಿಯಲ್ಲಿರುವ ಬೆಂಗಳೂರು ಎ್ಸಿ ತಂಡ ಇಂಡಿಯನ್ ಸೂಪರ್ ಲೀಗ್ ( ಐಎಸ್‌ಎಲ್) ುಟ್‌ಬಾಲ್ ಟೂರ್ನಿಯಲ್ಲಿ ಸೋಮವಾರ ನಡೆಯಲಿರುವ ತನ್ನ 7ನೇ ಪಂದ್ಯದಲ್ಲಿ ಬಲಿಷ್ಠ ಎಟಿಕೆ ಮೋಹನ್ ಬಾಗನ್ ತಂಡವನ್ನು ಎದುರಿಸಲಿದೆ.

ಹಿಂದಿನ ಎರಡು ಪಂದ್ಯಗಳಲ್ಲಿ ಕೇರಳ ಬ್ಲಾಸ್ಟರ್ಸ್‌ ಹಾಗೂ ಒಡಿಶಾ ಎ್ಸಿ ತಂಡಗಳ ಎದುರು ಸುಲಭ ಜಯ ದಾಖಲಿಸಿರುವ ಬಿಎ್ಸಿ, ಮತ್ತೊಂದು ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೇರುವ ತವಕದಲ್ಲಿದೆ. ಇದುವರೆಗೂ ಆಡಿರುವ 6 ಪಂದ್ಯಗಳಲ್ಲಿ ತಲಾ 3ರಲ್ಲಿ ಗೆಲುವು ಹಾಗೂ ಡ್ರಾ ಸಾಧಿಸಿರುವ ಸುನೀಲ್ ಛೇಟ್ರಿ ಬಳಗ ಲೀಗ್‌ನಲ್ಲಿ ಇದುವರೆಗೆ ಅಜೇಯ ಸಾಧನೆ ಮಾಡಿದೆ.

‘ಎಟಿಕೆ ಮೋಹನ್ ಬಾಗನ್ ತಂಡದ ದೈಹಿಕ ಸವಾಲಿಗೆ ತಂಡ ಸಜ್ಜಾಗಿದ್ದು, ಅಜೇಯ ಸಾಧನೆ ಕಾಯ್ದುಕೊಳ್ಳುವುದೇ ತಂಡದ ಗುರಿಯಾಗಿದೆ’ ಎಂದು ಬಿಎ್ಸಿ ಕೋಚ್ ಕಾರ್ಲೆಸ್ ಕ್ರೌಡ್ರಾಟ್ ತಿಳಿಸಿದ್ದಾರೆ. ಮೋಹನ್ ಬಾಗನ್ ಬಲಿಷ್ಠ ಆಟಗಾರರನ್ನು ಹೊಂದಿದ್ದು, ಹಿಂದಿನ ಪಂದ್ಯದಲ್ಲಿ ಗೋವಾ ಎ್ಸಿ ವಿರುದ್ಧದ ಹೋರಾಟವನ್ನು ಗಮನಿಸಿದ್ದೇವೆ ಎಂದಿದ್ದಾರೆ. ಲೀಗ್‌ನಲ್ಲಿ ಇದುವರೆಗೆ ಅಜೇಯ ಸಾಧನೆ ಮಾಡಿರುವ ಏಕೈಕ ತಂಡ ಎನಿಸಿಕೊಂಡಿರುವ ಬಿಎ್ಸಿ ಹ್ಯಾಟ್ರಿಕ್ ಗೆಲುವಿನ ಕನಸಿನಲ್ಲಿದೆ.

ಎಟಿಕೆ ಮೋಹನ್ ಬಾಗನ್ ತಂಡ ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ 4ರಲ್ಲಿ ಗೆದ್ದು, 1 ಡ್ರಾ, 1 ಸೋಲಿನೊಂದಿಗೆ 2ನೇ ಸ್ಥಾನದಲ್ಲಿದೆ. ಪಂದ್ಯ ಆರಂಭ: ರಾತ್ರಿ 7.30, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್ ನೆಟ್‌ವರ್ಕ್.