ಕ್ರೀಡೆ

16.25 ಕೋಟಿ ರೂ.ಗೆ ಧೋನಿ ತಂಡವನ್ನು ಕೂಡಿಕೊಂಡ ಸ್ಟಾರ್ ಆಲ್​ರೌಂಡರ್!

ಕೊಚ್ಚಿ: 2023ರ ಐಪಿಎಲ್ ಋತುವಿಗಾಗಿ ಮಿನಿ ಹರಾಜು ಪ್ರಕ್ರಿಯೆಯಲ್ಲಿ ಇಂಗ್ಲೆಂಡ್ ಟೆಸ್ಟ್ ತಂಡದ ನಾಯಕ ಸ್ಟಾರ್ ಆಲ್​ರೌಂಡರ್ ಬೆನ್​ಸ್ಟೋಕ್ಸ್​ ಭಾರೀ ಮೊತ್ತಕ್ಕೆ ಹರಾಜಾಗಿ ಹೋಗಲಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ನಿರೀಕ್ಷೆಯಂತೆಯೇ ಮೊದಲ ದಿನವೇ ಬೆನ್​​ ಸ್ಟೋಕ್ಸ್ 16.25 ಕೋಟಿ ರೂ.ಗೆ ಚೆನ್ನೈ ಸೂಪರ್​​ ಕಿಂಗ್ಸ್​ ತಂಡದ ಪಾಲಾಗಿದ್ದಾರೆ.

ಬೆನ್​​ಸ್ಟೋಕ್ಸ್​ 2 ಕೋಟಿ ರೂ. ಮೂಲ ಬೆಲೆ ಹೊಂದಿದ್ದರು. ಸ್ಟಾರ್ ಆಲ್​​ರೌಂಡರನ್ನು ಖರೀದಿಸಿಲು ಆರ್​​ಸಿಬಿ ತಂಡ ಕೂಡಾ ಉತ್ಸಾಹ ತೋರಿತ್ತು. ಕೊನೆಗೆ ಬಿಡ್ ಮೊತ್ತ 7 ಕೋಟಿ ರೂ. ದಾಡುತ್ತಿದ್ದಂತೆ ಹೈದರಾಬಾದ್- ಲಕ್ನೋ ನಡುವೆ ಸ್ಟೋಕ್ಸ್​ ಖರೀದಿಸಲು ಪೈಪೋಟಿ ಏರ್ಪಟ್ಟಿತು. 13 ಕೋಟಿ ಬಿಡ್ ದಾಟುತ್ತಿದ್ದಂತೆ ಚೆನ್ನೈ ಸೂಪರ್ ಕಿಂಗ್ಸ್​ ತಂಡ 16.25 ಕೋಟಿ. ರೂ ಬಿಡ್​ನೊಂದಗೆ ಆಲ್​​ರೌಂಡರ್​ ಬೆನ್​ಸ್ಟೋಕ್ಸ್​ನ್ನು ತನ್ನ ಪಾಲಾಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

2018ರಲ್ಲಿ ರಾಜಸ್ಥಾನ್ ರಾಯಲ್ಸ್‌ನಿಂದ ಐಪಿಎಲ್ ಹರಾಜಿನಲ್ಲಿ ಬೆನ್​ಸ್ಟೋಕ್ಸ್ ಕೊನೆಯದಾಗಿ 12.5 ಕೋಟಿ ರೂ.ಗೆ ಮಾರಾಟವಾಗಿದ್ದರು. ಟಿ-20 ಕ್ರಿಕೆಟ್​ಗೆ ಹೇಳಿ ಮಾಡಿಸಿದಂತಹ ಆಟಗಾರ ಬೆನ್​​ಸ್ಟೋಕ್ಸ್​. ಇತ್ತೀಚೆಗೆ ಮುಕ್ತಾಯವಾದ ಟಿ-20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ತಂಡ ಚಾಂಪಿಯನ್ ಆಗುವಲ್ಲಿ ಆಲ್​ರೌಂಡರ್ ಬೆನ್​ಸ್ಟೋಕ್ಸ್​ ಪ್ರಮುಖ ಕಾರಣವಾಗಿದ್ದರು. ಹೀಗಾಗಿ ಈ ಬಾರಿಯ ಹರಾಜಿನಲ್ಲಿ ಬೆನ್​​ಸ್ಟೋಕ್ಸ್​ ಖರೀದಿಸಲು ಬಹುತೇಕ ಪ್ರಾಂಚೈಸಿಗಳು ಮೊದಲೇ ಯೋಜನೆ ಹಾಕಿಕೊಂಡಿದ್ದವು. ಇದೀಗ ಬರೋಬ್ಬರಿ 16.5 ಕೋಟಿ. ರೂ. ಸ್ಟೋಕ್ಸ್​ ಧೋನಿ ತಂಡದ ಭಾಗವಾಗಿದ್ದಾರೆ.