ಕ್ರೀಡೆ

ಯುರೋ ಕಪ್‌ನಲ್ಲಿ ಇಂದು ಸ್ವಿಸ್, ಡೆನ್ಮಾರ್ಕ್, ಬೆಲ್ಜಿಯಂ ಕಣಕ್ಕೆ

ಬಾಕು: ಪ್ರತಿಷ್ಠಿತ ಯುರೋ ಕಪ್ ಫುಟ್‌ಬಾಲ್ ಟೂರ್ನಿಯ 2ನೇ ದಿನವಾದ ಶನಿವಾರ 3 ಪಂದ್ಯಗಳು ನಡೆಯಲಿವೆ. ಎ ಗುಂಪಿನಲ್ಲಿ ವೇಲ್ಸ್-ಸ್ವಿಜರ್ಲೆಂಡ್ ತಂಡಗಳು ಸೆಣಸಲಿದ್ದರೆ, ಬಿ ಗುಂಪಿನಲ್ಲಿ ಡೆನ್ಮಾರ್ಕ್-ಫಿನ್‌ಲ್ಯಾಂಡ್ ಮತ್ತು ಬೆಲ್ಜಿಯಂ-ರಷ್ಯಾ ತಂಡಗಳು ಮುಖಾಮುಖಿ ಆಗಲಿವೆ. ಕರೊನಾ ಕಾಲದ ಮೊದಲ ಅಂತಾರಾಷ್ಟ್ರೀಯ ಫುಟ್‌ಬಾಲ್ ಟೂರ್ನಿ ಮತ್ತು ಬಹುರಾಷ್ಟ್ರಗಳ ಕ್ರೀಡಾಕೂಟ ಇದಾಗಿದೆ.

2016ರಲ್ಲಿ ಪದಾರ್ಪಣೆಯ ವರ್ಷವೇ ಸೆಮಿಫೈನಲ್‌ಗೇರಿ ಅಚ್ಚರಿ ಮೂಡಿಸಿದ್ದ ವೇಲ್ಸ್ ಮತ್ತೆ ಅದೇ ಸಾಧನೆಯ ಹಂಬಲದಲ್ಲಿದೆ. ವೇಲ್ಸ್‌ಗೆ ಗರೆತ್ ಬೇಲ್ ಪ್ರಮುಖ ಬಲವಾಗಿದ್ದಾರೆ. ಫಿನ್‌ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಡೆನ್ಮಾರ್ಕ್ ಫೇವರಿಟ್ ತಂಡವೆನಿಸಿದ್ದು, ಹಿಂದಿನ ದಾಖಲೆಗಳು ವಿಶ್ವಾಸ ತುಂಬಿವೆ. ರೆಡ್ ಡೆವಿಲ್ಸ್ ಖ್ಯಾತಿಯ ಬೆಲ್ಜಿಯಂ, ಗಾಯದ ಸಮಸ್ಯೆಯಿಂದಾಗಿ ಕೆಲ ಸ್ಟಾರ್ ಆಟಗಾರರ ಗೈರಿನಲ್ಲಿ ರಷ್ಯಾವನ್ನು ಎದುರಿಸಲಿದೆ.

ಇಂದಿನ ಪಂದ್ಯಗಳು:

*ವೇಲ್ಸ್-ಸ್ವಿಜರ್ಲೆಂಡ್

ಆರಂಭ: ಸಂಜೆ 6.30

ಎಲ್ಲಿ: ಬಾಕು (ಅಜರ್‌ಬೈಜಾನ್)

*ಡೆನ್ಮಾರ್ಕ್-ಫಿನ್‌ಲ್ಯಾಂಡ್

ಆರಂಭ: ರಾತ್ರಿ 9.30

ಎಲ್ಲಿ: ಕೋಪನ್‌ಹೆಗನ್ (ಡೆನ್ಮಾರ್ಕ್)

*ಬೆಲ್ಜಿಯಂ-ರಷ್ಯಾ

ಆರಂಭ: 12.30

ಎಲ್ಲಿ: ಸೇಂಟ್ ಪೀಟರ್ಸ್‌ಬರ್ಗ್ (ರಷ್ಯಾ)

ನೇರಪ್ರಸಾರ: ಸೋನಿ ಸಿಕ್ಸ್, ಸೋನಿ ಟೆನ್ 2