ಕ್ರೀಡೆ

ಮಹಿಳಾ ತಂಡದ ಕೋಚ್​ ಹುದ್ದೆಯಿಂದ ರಾಮನ್​ ಪದಚ್ಯುತಿಗೆ ಬೇಸರ ಹೊರಹಾಕಿದ ಸೌರವ್​ ಗಂಗೂಲಿ

ನವದೆಹಲಿ: ಭಾರತ ಮಹಿಳಾ ತಂಡದ ಕೋಚ್​ ಹುದ್ದೆಯಿಂದ ಏಕಾಏಕಿ ಡಬ್ಲ್ಯುವಿ ರಾಮನ್​ ಅವರನ್ನು ಪದಚ್ಯುತಿಗೊಳಿಸಿದ್ದಕ್ಕೆ ಭಾರತೀಯ ಕ್ರಿಕೆಟ್​ ನಿಯಂತ್ರಣ ಮಂಡಳಿ (ಬಿಸಿಸಿಐ) ಅಧ್ಯ ಸೌರವ್​ ಗಂಗೂಲಿ ಬೇಸರ ಹೊರಹಾಕಿದ್ದಾರೆ. ಆದರೆ, ಬಿಸಿಸಿಐ ನೇಮಿಸಿರುವ ಕ್ರಿಕೆಟ್​ ಸಲಹಾ ಸಮಿತಿಯೂ (ಸಿಎಸಿ) ಕಳೆದ ವಾರ ರಾಮನ್​ ಬದಲಿಗೆ ರಮೇಶ್​ ಪವಾರ್​ ಅವರನ್ನು ನೂತನ ಕೋಚ್​ ಆಗಿ ನೇಮಿಸಿತ್ತು. ಭಾರತ ಮಹಿಳಾ ಕ್ರಿಕೆಟ್​ ವಲಯದಲ್ಲಿ ಸಿಎಸಿ ನಿರ್ಧಾರ ಚರ್ಚೆಗೆ ಗ್ರಾಸವಾಗಿದ್ದು, ಗಂಗೂಲಿ ಕೂಡ ಬೇಸರ ಹೊರಹಾಕಿದ್ದಾರೆ ಎಂದು ತಿಳಿದು ಬಂದಿದೆ.

ರಾಮನ್​ ಮಾರ್ಗದರ್ಶನದಲ್ಲಿ ಭಾರತದಲ್ಲಿ ಟಿ20 ವಿಶ್ವಕಪ್​ ಫೈನಲ್​ ಪ್ರವೇಶಿಸಿತ್ತು. ಆದರೆ, ಏಕಾಏಕಿ ರಾಮನ್​ ಅವರನ್ನು ಕೈಬಿಟ್ಟಿರುವುದು ಸ್ವತಃ ಗಂಗೂಲಿ ಬೇಸರಕ್ಕೂ ಕಾರಣವಾಗಿದೆ. ರಾಮನ್​ ಮಾರ್ಗದರ್ಶನದಲ್ಲಿ 2018 ರಿಂದ 2020ರವರೆಗೆ ಭಾರತ ತಂಡ ಆಡಿದ 5 ಏಕದಿನ ಕ್ರಿಕೆಟ್​ ಸರಣಿಗಳ ಪೈಕಿ 4 ರಲ್ಲಿ ಜಯ ದಾಖಲಿಸಿತ್ತು. 2021ರಲ್ಲಿ ತವರಿನಲ್ಲಿ ದಣ ಆಫ್ರಿಕಾ ಎದುರು ಸೋಲು ಕಂಡಿತ್ತು. 2020ರ ಟಿ20 ವಿಶ್ವಕಪ್​ ಫೈನಲ್​ನಲ್ಲಿ ಭಾರತ ತಂಡ ಫೈನಲ್​ ಪ್ರವೇಶಿಸಿತ್ತು.

ಮುಂಬರುವ ಇಂಗ್ಲೆಂಡ್​ ಪ್ರವಾಸದಿಂದ ರಮೇಶ್​ ಪವಾರ್​ ಭಾರತ ತಂಡದೊಂದಿಗೆ ಕಾರ್ಯನಿರ್ವಹಿಸಲಿದ್ದಾರೆ. ಇಂಗ್ಲೆಂಡ್​ ಪ್ರವಾಸದಲ್ಲಿ ಭಾರತ ತಂಡ ಏಕೈಕ ಟೆಸ್ಟ್​, ತಲಾ 3 ಏಕದಿನ ಹಾಗೂ 3 ಟಿ20 ಪಂದ್ಯಗಳನ್ನಾಡಲಿದ್ದಾರೆ. ಪವಾರ್​ ಇದಕ್ಕೂ 2018ರಲ್ಲಿ ಭಾರತ ಮಹಿಳಾ ತಂಡದೊಂದಿಗೆ ಕಾರ್ಯನನಿರ್ವಹಿಸಿದ್ದರು.