ಜೊಹಾನ್ಸ್ರ್ಬಗ್: ಪ್ರವಾಸಿ ಭಾರತ ತಂಡದ ವಿರುದ್ಧ ಮುಂದಿನ ಭಾನುವಾರದಿಂದ ನಡೆಯಲಿರುವ ಮೂರೂ ಮಾದರಿಯ ಕ್ರಿಕೆಟ್ ಸರಣಿಗಳಿಗೆ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಸೋಮವಾರ ಪ್ರಕಟಿಸಲಾಗಿದೆ. ನಾಯಕ ಟೆಂಬಾ ಬವುಮಾ ಮತ್ತು ವೇಗಿ ಕಗಿಸೊ ರಬಾಡಗೆ ಸೀಮಿತ ಓವರ್ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಟಿ20 ಮತ್ತು ಏಕದಿನ ತಂಡಗಳಿಗೆ ಏಡನ್ ಮಾರ್ಕ್ರಮ್ ಹಂಗಾಮಿ ನಾಯಕರಾಗಿ ನೇಮಕಗೊಂಡಿದ್ದಾರೆ. ಟೆಸ್ಟ್ ಸರಣಿಗೆ ಬವುಮಾ ಮತ್ತು ರಬಾಡ ಮರಳಲಿದ್ದಾರೆ.
ಪ್ರವಾಸದಲ್ಲಿ ಭಾರತ ತಂಡ 3 ಟಿ20, 3 ಏಕದಿನ ಮತ್ತು 2 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ಷಿಪ್ನ ಭಾಗವಾಗಿರುವ ಫ್ರೀಡಂ ಟ್ರೋಫಿ ಸರಣಿಯ ಮೊದಲ ಪಂದ್ಯ ಡಿಸೆಂಬರ್ 26ರಿಂದ ಸೆಂಚುರಿಯನ್ನಲ್ಲಿ ನಡೆಯಲಿದೆ.
ಏಕದಿನ ವಿಶ್ವಕಪ್ನಲ್ಲಿ ಆಡಿದ್ದ ವೇಗಿಗಳಾದ ಗೆರಾಲ್ಡ್ ಕೋಟ್ಜೀ, ಮಾಕೋರ್ ಜಾನ್ಸೆನ್ ಮತ್ತು ಲುಂಗಿ ಎನ್ಗಿಡಿಗೆ ಏಕದಿನ ಸರಣಿಯಿಂದ ವಿಶ್ರಾಂತಿ ನೀಡಲಾಗಿದ್ದು, ಟಿ20 (ಮೊದಲ 2 ಮಾತ್ರ) ಮತ್ತು ಟೆಸ್ಟ್ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಎಡಗೈ ವೇಗಿ ನಂಡ್ರೆ ರ್ಬಗರ್ ಮೂರೂ ತಂಡಗಳಲ್ಲಿ ಸ್ಥಾನ ಪಡೆದಿರುವ ಹೊಸಮುಖವಾಗಿದ್ದರೆ, ಮಧ್ಯಮ ವೇಗಿ ಒಟ್ನಿಯೆಲ್ ಬಾರ್ಟ್ಮನ್ ಟಿ20 ಮತ್ತು ಏಕದಿನ ತಂಡಕ್ಕೆ ಹೊಸಮುಖವಾಗಿದ್ದಾರೆ. ಆಲ್ರೌಂಡರ್ ಮಿಹ್ಲಾಲಿ ಎಂಪೊಂಗ್ವಾನಾ ಏಕದಿನ ಮತ್ತು ಬ್ಯಾಟರ್ ಡೇವಿಡ್ ಬೆಡಿಂಗ್ಹ್ಯಾಂ ಟೆಸ್ಟ್ ತಂಡಕ್ಕೆ ಹೊಸಬರಾಗಿದ್ದಾರೆ.
ದಕ್ಷಿಣ ಆಫ್ರಿಕಾ ಟಿ20 ತಂಡ: ಮಾರ್ಕ್ರಮ್ (ನಾಯಕ), ಒಟ್ನಿಯೆಲ್ ಬಾರ್ಟ್ಮನ್, ಮ್ಯಾಥ್ಯೂ ಬ್ರಿಟ್ಜೆ, ನಂಡ್ರೆ ರ್ಬಗರ್, ಡೋನೊವನ್ ೆರೆರಾ, ರೀಜಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ್ ಮಹಾರಾಜ್, ಡೇವಿಡ್ ಮಿಲ್ಲರ್, ಆಂಡಿಲ್ ಪೆಹ್ಲುಕ್ವಾಯೊ, ತಬರೇಜ್ ಶಮ್ಸಿ, ಟ್ರಿಸ್ಟಾನ್ ಸ್ಟಾಬ್ಸ್, ಲಿಜಾಡ್ ವಿಲಿಯಮ್ಸ್, 1-2ನೇ ಟಿ20ಗೆ ಮಾತ್ರ: ಗೆರಾಲ್ಡ್ ಕೋಟ್ಜೀ, ಮಾಕೋರ್ ಜಾನ್ಸೆನ್, ಲುಂಗಿ ಎನ್ಗಿಡಿ.
ಏಕದಿನ ತಂಡ: ಮಾರ್ಕ್ರಮ್ (ನಾಯಕ), ಬಾರ್ಟ್ಮನ್, ರ್ಬಗರ್, ಟೋನಿ ಡಿ ಜೋರ್ಜಿ, ರೀಜಾ ಹೆಂಡ್ರಿಕ್ಸ್, ಕ್ಲಾಸೆನ್, ಕೇಶವ್, ಮಿಹ್ಲಾಲಿ ಎಂಪೊಂಗ್ವಾನಾ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ಡರ್, ಪೆಹ್ಲುಕ್ವಾಯೊ, ಶಮ್ಸಿ, ವಾನ್ ಡರ್ ಡುಸೆನ್, ಕೈಲ್ ವೆರ್ರೆನ್ನೆ, ಲಿಜಾಡ್ ವಿಲಿಯಮ್ಸ್.
ಟೆಸ್ಟ್: ಬವುಮಾ (ನಾಯಕ), ಡೇವಿಡ್ ಬೆಡಿಂಗ್ಹ್ಯಾಂ, ರ್ಬಗರ್, ಕೋಟ್ಜೀ, ಜೋರ್ಜಿ, ಎಲ್ಗರ್, ಜಾನ್ಸೆನ್, ಕೇಶವ್, ಮಾರ್ಕ್ರಮ್, ಮುಲ್ಡರ್, ಎನ್ಗಿಡಿ, ಕೀಗನ್ ಪೀರ್ಟಸೆನ್, ರಬಾಡ, ಸ್ಟಾಬ್ಸ್, ವೆರ್ರೆನ್ನೆ.