ಹೈದರಾಬಾದ್: ಪ್ರೊ ಕಬಡ್ಡಿ ಲೀಗ್ 10ನೇ ಆವೃತ್ತಿಯಲ್ಲಿ ಸೋಮವಾರದಿಂದ ಪ್ಲೇಆಫ್ ಹಂತದ ಪಂದ್ಯಗಳು ನಡೆಯಲಿವೆ. ಮೊದಲ ಎಲಿಮಿನೇಟರ್ ಪಂದ್ಯದಲ್ಲಿ ಲೀಗ್ ಹಂತದ ಅಂಕಪಟ್ಟಿಯಲ್ಲಿ 3 ಮತ್ತು 6ನೇ ಸ್ಥಾನ ಪಡೆದಿದ್ದ ದಬಾಂಗ್ ದೆಹಲಿ-ಪಟನಾ ಪೈರೇಟ್ಸ್ ಮುಖಾಮುಖಿ ಆಗಲಿದ್ದು, ಇದರಲ್ಲಿ ಗೆದ್ದ ತಂಡ ಬುಧವಾರ ಟೇಬಲ್ ಟಾಪರ್ ಪುಣೇರಿ ಪಲ್ಟಾನ್ ಎದುರು ಸೆಮಿೈನಲ್ ಪಂದ್ಯ ಆಡಲಿದೆ.
2ನೇ ಎಲಿಮಿನೇಟರ್ನಲ್ಲಿ 4-5ನೇ ಸ್ಥಾನಿ ತಂಡಗಳಾದ ಗುಜರಾತ್ ಜೈಂಟ್ಸ್-ಹರಿಯಾಣ ಸ್ಟೀಲರ್ಸ್ ಸೆಣಸಲಿದ್ದು, ಗೆದ್ದ ತಂಡ ಸೆಮೀಸ್ನಲ್ಲಿ ಹಾಲಿ ಚಾಂಪಿಯನ್ ಹಾಗೂ ಲೀಗ್ ಹಂತದ 2ನೇ ಸ್ಥಾನಿ ಜೈಪುರ ಪಿಂಕ್ಪ್ಯಾಂಥರ್ಸ್ ವಿರುದ್ಧ ಆಡಲಿದೆ.
ಮಾರ್ಚ್ 1ರಂದು ಹೈದರಾಬಾದ್ನಲ್ಲೇ ಫೈನಲ್ ಪಂದ್ಯ ನಡೆಯಲಿದೆ.
ಆರಂಭ: ರಾತ್ರಿ 8, ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್