ಕ್ರೀಡೆ

ಇದೇ ಪಾಕಿಸ್ತಾನದಲ್ಲಿ ಜನರು... ಆರ್​ಆರ್​ ಯುವ ಬ್ಯಾಟರ್​ ಕುರಿತು ಬಸಿತ್​ ಅಲಿ ಓಪನ್​ ಟಾಕ್​ | Vaibhav Suryavanshi

Vaibhav Suryavanshi: ಏ.19ರಂದು ನಡೆದ ರಾಜಸ್ಥಾನ ರಾಯಲ್ಸ್ ಮತ್ತು ಲಖನೌ ಸೂಪರ್ ಜೈಂಟ್ಸ್​ ನಡುವಿನ ಪಂದ್ಯದಲ್ಲಿ ಎಲ್​ಎಸ್​ಜಿ 2 ರನ್​ಗಳ ಜಯ ಸಾಧಿಸಿತು. ಎರಡು ತಂಡಗಳ ಆಟಗಾರರ ಪೈಕಿ 14 ವರ್ಷದ ಯುವ ಬ್ಯಾಟರ್​ ವೈಭವ್ ಸೂರ್ಯವಂಶಿ ತೋರಿದ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ಎಲ್ಲರ ಅಚ್ಚರಿಗೆ ಕಾರಣವಾಯಿತು.

ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಬ್ಯಾಟಿಂಗ್​ಗಿಳಿದ ಸೂರ್ಯವಂಶಿ, ಎದುರಿಸಿದ 20 ಎಸೆತಗಳಲ್ಲಿ 34 ರನ್ ಸಿಡಿಸಿ, ಕ್ರಿಕೆಟ್​ ಪ್ರಿಯರ ಗಮನ ಸೆಳೆದರು. 14 ವರ್ಷದ ಬಾಲಕ ಅಂತಾರಾಷ್ಟ್ರೀಯ ಬೌಲರ್​ಗಳಿಗೆ ಆಡುತ್ತಿರುವ ರೀತಿ ಗಮನಾರ್ಹ. ಈ ವಿಷಯಕ್ಕೆ ಯುವ ಬ್ಯಾಟರ್​ನನ್ನು ಅನೇಕರು ಕೊಂಡಾಡಿದ್ದಾರೆ. ಅವೇಶ್ ಖಾನ್ ಎಸೆದ ಬಾಲ್​ಗೆ ಅದ್ಭುತ ಸಿಕ್ಸರ್ ಬಾರಿಸಿದ ವೈಭವ್​, ಆಡಿದ ಮೊದಲ ಎಸೆತದಲ್ಲೇ ಸಿಕ್ಸ್ ಹೊಡೆದರು. ಇದು ಮಾಜಿ ಕ್ರಿಕೆಟಿಗರಲ್ಲಿ ಯುವ ಆಟಗಾರನ ಮೇಲೆ ಭಾರೀ ಭರವಸೆ ಮೂಡಿಸಿದೆ.

ವೈಭವ್ ಪ್ರದರ್ಶನಕ್ಕೆ ಮೆಚ್ಚಿದ ಪಾಕಿಸ್ತಾನ ಕ್ರಿಕೆಟ್ ತಂಡದ ಮಾಜಿ ಕ್ರಿಕೆಟಿಗ ಬಸಿತ್ ಅಲಿ, "ಸೂರ್ಯವಂಶಿಗೆ ಉತ್ತಮ ವ್ಯವಸ್ಥೆ ನೀಡುವ ಮೂಲಕ ಟೀಮ್ ಇಂಡಿಯಾ ಆತನನ್ನು ಬೆಂಬಲಿಸಬೇಕು. ಅವರು ಆಡಿದ ಮೊದಲ ಬಾಲ್​ ಸಿಕ್ಸರ್​ಗೆ ಹೋಯಿತು. ಇದು ನಿಜಕ್ಕೂ ದೊಡ್ಡ ವಿಷಯ. ಇದೇ ಆತ ಪಾಕಿಸ್ತಾನದಲ್ಲಿ ಮೊದಲ ಬಾಲ್ ಸಿಕ್ಸ್ ಬಾರಿಸಲು ಹೋಗಿ ವಿಕೆಟ್​ ಕಳೆದುಕೊಂಡಿದ್ದರೆ, ಖಂಡಿತ ಇಲ್ಲಿನ ಜನರು ಮೊದಲು ಆತನನ್ನು ಇಲ್ಲಿಂದ ಹೊರಗೆ ಕಳುಹಿಸಿ ಎನ್ನುತ್ತಿದ್ದರು. ಅವರಲ್ಲಿ ಒಳ್ಳೆಯ ಆತ್ಮವಿಶ್ವಾಸವಿದೆ" ಎಂದು ಬಸಿತ್​ ತಮ್ಮ ಯುಟ್ಯೂಬ್ ಚಾನೆಲ್​ನಲ್ಲಿ ಈ ವಿಷಯ ಹಂಚಿಕೊಂಡಿದ್ದಾರೆ,(ಏಜೆನ್ಸೀಸ್).