ಕ್ರೀಡೆ

ಕಿರಿಯರ ಏಷ್ಯಾಕಪ್​ ಸೆಮೀಸ್​ನಲ್ಲಿ ಸೋತ ಭಾರತ; ಪಾಕಿಸ್ತಾನಕ್ಕೂ ಆಘಾತ; ಹೊಸ ಚಾಂಪಿಯನ್ಸ್ ನಿರೀಕ್ಷೆ...

ದುಬೈ: ಎಂಟು ಬಾರಿಯ ಚಾಂಪಿಯನ್​ ಭಾರತ ತಂಡ 10ನೇ ಆವೃತ್ತಿಯ 19 ವಯೋಮಿತಿ ಏಷ್ಯಾಕಪ್​ ಏಕದಿನ ಕ್ರಿಕೆಟ್​ ಟೂರ್ನಿಯ ಸೆಮಿಫೈನಲ್​ನಲ್ಲಿ ಬಾಂಗ್ಲಾದೇಶ ವಿರುದ್ಧ 4 ವಿಕೆಟ್​ಗಳಿಂದ ಆಘಾತಕಾರಿ ಸೋಲು ಅನುಭವಿಸಿದೆ. ಇದರೊಂದಿಗೆ ಮುಂದಿನ ವರ್ಷದ ಕಿರಿಯರ ವಿಶ್ವಕಪ್​ ಪೂರ್ವಸಿದ್ಧತೆಯಲ್ಲಿ ಭಾರತ ಹಿನ್ನಡೆ ಅನುಭವಿಸಿದೆ.

ಐಸಿಸಿ ಅಕಾಡೆಮಿ ಮೈದಾನದಲ್ಲಿ ಶುಕ್ರವಾರ ನಡೆದ ಉಪಾಂತ್ಯ ಕಾದಾಟದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್​ಗೆ ಇಳಿದ ಭಾರತ ತಂಡ 42.4 ಓವರ್​ಗಳಲ್ಲಿ 188 ರನ್​ಗಳಿಗೆ ಆಲೌಟ್​ ಆಯಿತು. ಪ್ರತಿಯಾಗಿ ಬಾಂಗ್ಲಾ ಆರಂಭಿಕ ಆಘಾತ ಎದುರಿಸಿದರೂ, ಅರಿುಲ್​ ಇಸ್ಲಾಂ (94) ಮತ್ತು ಅಹ್ರಾರ್​ ಅಮಿನ್​ (44) ಹೋರಾಟದಿಂದ 42.5 ಓವರ್​ಗಳಲ್ಲಿ 6 ವಿಕೆಟ್​ಗೆ 189 ರನ್​ ಪೇರಿಸಿ ಜಯಿಸಿತು.

ಭಾರತ: 42.4 ಓವರ್​ಗಳಲ್ಲಿ 188 (ಪ್ರಿಯಾಂಶು 19, ಉದಯ್​ 0, ಮುಶೀರ್​ ಖಾನ್​ 50, ಎಂ. ಅಭಿಷೇಕ್​ 62, ಮರ್​ು ಮೃಧ 41ಕ್ಕೆ 4, ಬೊರ್ಸೊನ್​ 39ಕ್ಕೆ 2, ಜಿಬೋನ್​ 29ಕ್ಕೆ 2). ಬಾಂಗ್ಲಾದೇಶ: 42.5 ಓವರ್​ಗಳಲ್ಲಿ 6 ವಿಕೆಟ್​ಗೆ 189 (ಆರಿುಲ್​ ಇಸ್ಲಾಂ 94, ಅಹ್ರಾರ್​ ಅಮಿನ್​ 44, ನಮನ್​ 35ಕ್ಕೆ 3, ಲಿಂಬಾನಿ 47ಕ್ಕೆ 2).

ಪಾಕ್​ಗೂ ಶಾಕ್​

ಲೀಗ್​ ಹಂತದಲ್ಲಿ ಭಾರತಕ್ಕೆ ಸೋಲುಣಿಸಿ ಎ ಗುಂಪಿನ ಅಗ್ರಸ್ಥಾನ ಸಂಪಾದಿಸಿದ್ದ ಪಾಕ್​, ಮತ್ತೊಂದು ಸೆಮಿಫೈನಲ್​ನಲ್ಲಿ ಬಿ ಗುಂಪಿನ 2ನೇ ಸ್ಥಾನಿ ಯುಎಇ ವಿರುದ್ಧ 11 ರನ್​ಗಳಿಂದ ಆಘಾತಕಾರಿ ಸೋಲು ಅನುಭವಿಸಿತು. ಬಾಂಗ್ಲಾ-ಯುಎಇ ಫೈನಲ್​ ಪ್ರವೇಶದಿಂದಾಗಿ ಕಿರಿಯರ ಏಷ್ಯಾಕಪ್​ನಲ್ಲಿ ಮೊದಲ ಬಾರಿಗೆ ಭಾರತ (8), ಪಾಕ್​ (1), ಅಫ್ಘಾನಿಸ್ತಾನ (1) ಹೊರತಾದ ತಂಡವೊಂದು ಚಾಂಪಿಯನ್​ ಪಟ್ಟವೇರುವುದು ಖಚಿತಗೊಂಡಿದೆ.

ಫೈನಲ್​ ಪಂದ್ಯ

ಯುಎಇ-ಬಾಂಗ್ಲಾದೇಶ

ಯಾವಾಗ: ಭಾನುವಾರ

ಆರಂಭ: ಬೆಳಗ್ಗೆ 11.00