ಕ್ರೀಡೆ

ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿ ಟಿ20 ನಾಕೌಟ್​ಗೆ ಬೆಂಗಳೂರು ಆತಿಥ್ಯ; ಆದರೂ ಕಾಡುತ್ತಿದೆ ನಿರಾಸೆ!

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ದೇಶೀಯ ಟಿ20 ಟೂರ್ನಿ ಸಯ್ಯದ್​ ಮುಷ್ತಾಕ್​ ಅಲಿ ಟ್ರೋಫಿಯ ಲೀಗ್​ ಹಂತ ಮುಕ್ತಾಯಗೊಂಡಿದ್ದು, ನಾಕೌಟ್​ ಪಂದ್ಯಗಳು ಡಿಸೆಂಬರ್​ 9ರಿಂದ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿವೆ. ಆತಿಥೇಯ ಕರ್ನಾಟಕ ತಂಡ ನಾಕೌಟ್​ ಹಂತಕ್ಕೇರದಿರುವುದು ಮಾತ್ರ ನಿರಾಸೆಯ ವಿಷಯವಾಗಿದೆ.

ಮಧ್ಯಪ್ರದೇಶ (ಎ1), ಸೌರಾಷ್ಟ್ರ (ಬಿ2), ಬರೋಡ (ಬಿ1), ಮುಂಬೈ (ಇ1), ವಿದರ್ಭ (ಡಿ1) ಮತ್ತು ದೆಹಲಿ (ಸಿ1) ತಂಡಗಳು ನೇರವಾಗಿ ಕ್ವಾರ್ಟರ್​ಫೈನಲ್​ಗೇರಿದ್ದರೆ, ಬಂಗಾಳ (ಎ2), ಚಂಡೀಗಢ (ಡಿ2), ಆಂಧ್ರ (ಇ2), ಉತ್ತರ ಪ್ರದೇಶ (ಸಿ2) ತಂಡಗಳು ಪ್ರಿ ಕ್ವಾರ್ಟರ್​ಫೈನಲ್​ನಲ್ಲಿ ಆಡಲಿವೆ. ಡಿಸೆಂಬರ್​ 13ರಂದು 2 ಸೆಮಿಫೈನಲ್ಸ್​ ಮತ್ತು ಡಿಸೆಂಬರ್​ 15ರಂದು ಫೈನಲ್​ ಪಂದ್ಯ ನಡೆಯಲಿದೆ.

ನಾಕೌಟ್​ ವೇಳಾಪಟ್ಟಿ: ಪ್ರಿ ಕ್ವಾರ್ಟರ್​ಫೈನಲ್ಸ್​: ಬೆಳಗ್ಗೆ 11: ಬಂಗಾಳ-ಚಂಡೀಗಢ, ಆರಂಭ: ಸಂಜೆ 4.30: ಆಂಧ್ರ-ಉತ್ತರ ಪ್ರದೇಶ; ಕ್ವಾರ್ಟರ್​ಫೈನಲ್ಸ್​: ಬೆಳಗ್ಗೆ 9: ಮಧ್ಯಪ್ರದೇಶ-ಸೌರಾಷ್ಟ್ರ, ಬೆಳಗ್ಗೆ 11: ಬರೋಡ-ಪ್ರಿ ಕ್ವಾರ್ಟರ್​ ವಿಜೇತರು; ಮಧ್ಯಾಹ್ನ 1.30: ಮುಂಬೈ-ವಿದರ್ಭ, ಸಂಜೆ 4.30: ದೆಹಲಿ-ಪ್ರಿ ಕ್ವಾರ್ಟರ್​ ವಿಜೇತರು.