ಮುಂಬೈ: 14ನೇ ಆವೃತ್ತಿಯ ಐಪಿಎಲ್ ಅನಿದಿರ್ಷ್ಟಾವಧಿವರೆಗೂ ಮುಂದೂಡಿಕೆಯಾಗಿರುವುದರಿಂದ ಭಾರತ ತಂಡದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಹಾಗೂ ನತಾಶಾ ಸ್ಟ್ಯಾನ್ಕೊವಿಕ್ ದಂಪತಿ ಸಂಪೂರ್ಣ ರಿಲ್ಯಾಕ್ಸ್ ಮೂಡ್ನಲ್ಲಿದ್ದಾರೆ. ಈ ದಂಪತಿ ಹೆಚ್ಚಿನ ಸಮಯವನ್ನು ಪುತ್ರ ಅಗಸ್ತ್ಯನೊಂದಿಗೆ ಕಳೆಯುತ್ತಿದೆ. ಕಳೆದ ವರ್ಷ ಜುಲೈನಲ್ಲಿ ಈ ದಂಪತಿಗೆ ಅಗಸ್ತ್ಯ ಜನಿಸಿದ. ಪುಟ್ಟ ಹೆಜ್ಜೆಗಳೊಂದಿಗೆ ತಂದೆಯಿಂದ ತಾಯಿ ಬಳಿ, ತಾಯಿಯಿಂದ ತಂದೆ ಬಳಿಕ ಮಗ ಓಡಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮುಂಬೈ ಇಂಡಿಯನ್ಸ್ ತಂಡದ ಅಧಿಕೃತ ಟ್ವಿಟರ್ ಪುಟದಲ್ಲೂ ಈ ವಿಡಿಯೋ ಹಾಕಲಾಗಿದೆ.
ಮಗ ಹೆಜ್ಜೆ ಹಾಕುತ್ತಿರುವುದಕ್ಕೆ ಪಾಂಡ್ಯ ದಂಪತಿಯ ಸಂತೋಷಕ್ಕೆ ಪಾರವೇ ಇಲ್ಲ ಎಂದು ಕೆಲಮಂದಿ ಪ್ರತಿಕ್ರಿಯಿಸಿದ್ದಾರೆ. ಇನ್ನು ಕೆಲಮಂದಿಗೆ ಶಿವಂ ದುಬೆ, ಅಗಸ್ತ್ಯ ನ ದೊಡ್ಡಪ್ಪ (ಕೃನಾಲ್ ಪಾಂಡ್ಯ) ಅವರಿಗಿಂತ ಫುಟ್ವರ್ಕ್ ಚೆನ್ನಾಗಿದೆ ಎಂದು ಹೇಳಿದ್ದಾರೆ. ಮುಂಬರುವ ಇಂಗ್ಲೆಂಡ್ ಪ್ರವಾಸಕ್ಕೆ ಬಿಸಿಸಿಐ ಪ್ರಕಟಿಸಿದ 20 ಸದಸ್ಯರ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಸ್ಥಾನ ಪಡೆಯಲು ವಿಲರಾಗಿದ್ದಾರೆ.
ಮುಂದಿನ ಜುಲೈನಲ್ಲಿ ಪಾಂಡ್ಯ ಶ್ರೀಲಂಕಾ ಪ್ರವಾಸಕ್ಕೆ ಭಾರತ ತಂಡಕ್ಕೆ ವಾಪಸಾಗುವ ಸಾಧ್ಯತೆಗಳಿವೆ. 2021ರ ಐಪಿಎಲ್ನಲ್ಲಿ ಪಾಂಡ್ಯ ರನ್ ಬರ ಎದುರಿಸಿದ್ದರು. ಕೇವಲ 52 ರನ್ ಪೇರಿಸಲಷ್ಟೇ ಶಕ್ತರಾಗಿದ್ದರು.
VI