GT vs CSK: ಇಂದು (ಮೇ.25) ಅಹಮದಾಬಾದ್ನ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಜಿಟಿ ಮತ್ತು ಸಿಎಸ್ಕೆ ನಡುವಿನ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಪಡೆ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ.
ಇದನ್ನೂ ಓದಿ: ತನ್ನದೇ ಕುಟುಂಬವನ್ನು ಸರ್ವನಾಶ ಮಾಡಿದ ಅಫಾನ್ ಸಾಯುವ ನಿರ್ಧಾರ! ಜೈಲಿನೊಳಗೆ ಆತ್ಮಹತ್ಯೆಗೆ ಯತ್ನ | Venjaramoodu Case
ಕಳೆದ ಪಂದ್ಯಗಳಲ್ಲಿ ಸಿಎಸ್ಕೆ ಪರ ಅದ್ಭುತ ಓಪನಿಂಗ್ ಪ್ರದರ್ಶನ ನೀಡಿರುವ 17 ವರ್ಷದ ಆಯುಷ್ ಮಾತ್ರೆ, ಇಂದಿನ ಗುಜರಾತ್ ವಿರುದ್ಧದ ಪಂದ್ಯದಲ್ಲಿಯೂ ಸ್ಫೋಟಕ ಇನ್ನಿಂಗ್ಸ್ ಕೊಡುವತ್ತ ಸಾಗಿದ್ದೇ ಆದರೂ ಪ್ರಸಿದ್ಧ ಕೃಷ್ಣ ಬೌಲಿಂಗ್ನಲ್ಲಿ ವಿಕೆಟ್ ಕಳೆದುಕೊಂಡರು. ಒಂದೇ ಓವರ್ನಲ್ಲಿ 6, 6, 4, 4, 6 ಸಿಡಿಸಿದ ಯುವ ಬ್ಯಾಟರ್ ಮತ್ತೊಮ್ಮೆ ಕ್ರಿಕೆಟ್ ಪ್ರಿಯರನ್ನು ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕ ಬೆರಗಾಗಿಸಿದರು.
ಇದೊಂದು ಪಂದ್ಯ ಗುಜರಾತ್ ಟೈಟನ್ಸ್ ಅಭಿಮಾನಿಗಳಿಗಿಂತ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಯಾನ್ಸ್ ಬಳಗಕ್ಕೆ ಕುತೂಹಲಕಾರಿ ಪಂದ್ಯವಾಗಿದೆ. ಕಾರಣ, ಈ ನಿರ್ಣಾಯಕ ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ಸೋತರೆ ಆರ್ಸಿಬಿಗೆ ಐಪಿಎಲ್ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನ ಗಿಟ್ಟಿಸಿಕೊಳ್ಳುವ ಅವಕಾಶ ಇನ್ನೂ ಜೀವಂತವಾಗಲಿದೆ. ಇದು ಆರ್ಸಿಬಿ ಫ್ಯಾನ್ಸ್ಗಳ ಹಪಾಹಪಿಯಾಗಿದೆ. ಸಿಎಸ್ಕೆ ಹೇಗಾದರೂ ಮಾಡಿ ಜಿಟಿ ತಂಡವನ್ನು ಮಣಿಸಲಿ ಎಂದು ಕುಳಿತಲ್ಲೇ ಬೇಡಿಕೊಳ್ಳುತ್ತಿದ್ದಾರೆ ಎಂದೇ ಹೇಳಬಹುದು.
ಅಸಲಿಗೆ ಯಾರಿಗೆ ಇಂದಿನ ಪಂದ್ಯದಲ್ಲಿ ಗೆಲುವು ಸಿಗಲಿದೆ ಎಂಬುದನ್ನು ಪಂದ್ಯದ ಕೊನೆಯವರೆಗೂ ನೋಡಿ ತಿಳಿಯಬೇಕಿದೆ. ಆರ್ಸಿಬಿ ಅಭಿಮಾನಿಗಳ ಆಶಯದಂತೆ ಜಿಟಿ ಧೋನಿ ಪಡೆ ಎದುರು ಮಂಡಿಯೂರಲಿದೆಯೇ ಅಥವಾ ಗೆದ್ದು ಅಂಕಪಟ್ಟಿಯಲ್ಲಿ ತನ್ನ ಮೊದಲ ಸ್ಥಾನವನ್ನು ಭದ್ರಪಡಿಸಿಕೊಳ್ಳಲಿದೆಯಾ ಎಂಬುದನ್ನು ಕಾದು ನೋಡಬೇಕಿದೆ,(ಏಜೆನ್ಸೀಸ್).