ಕ್ರೀಡೆ

ವಿರಾಟ್​ ಬಲಿಷ್ಠ ಬ್ಯಾಟರ್ ಆಗಿ ಕಂಡಿದ್ದೇ ಆದ್ರೂ... ಕೊಹ್ಲಿ ವಿಕೆಟ್ ಕೈಚೆಲ್ಲಿದ​ ಬಗ್ಗೆ ಮಾಜಿ ಆಸೀಸ್​ ಆಟಗಾರ ವ್ಯಂಗ್ಯ | Virat Kohli

Virat Kohli : ಬಾರ್ಡರ್ ಗವಾಸ್ಕರ್​ ಟ್ರೋಫಿಯ ಭಾಗವಾಗಿ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ನಡೆದ ಐದನೇ ಟೆಸ್ಟ್ ಪಂದ್ಯದಲ್ಲಿಯೂ ವಿರಾಟ್​ ಕೊಹ್ಲಿ ತಮ್ಮ ಕಳಪೆ ಬ್ಯಾಟಿಂಗ್ ಪ್ರದರ್ಶನವನ್ನು ಮುಂದುವರಿಸಿರುವುದು ಸದ್ಯ ಕ್ರಿಕೆಟ್ ಪ್ರಿಯರಲ್ಲಿ ಭಾರೀ ಬೇಸರ ತಂದಿದೆ. ಇಂದು (ಜ.03) ಸಿಡ್ನಿಯಲ್ಲಿ ನಡೆದ ಕಡೆಯ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕನ ಸ್ಥಾನದಿಂದ ಹಿಂದೆ ಸರಿದ ರೋಹಿತ್ ಶರ್ಮ, ವೇಗಿ ಜಸ್​ಪ್ರೀತ್​ ಬುಮ್ರಾಗೆ ನಾಯಕತ್ವ ಹಸ್ತಾಂತರಿಸಿದರು. ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಬುಮ್ರಾಗೆ ತಂಡದ ಸ್ಟಾರ್​ ಬ್ಯಾಟರ್​ಗಳೇ ಕೈಕೊಟ್ಟಿದ್ದು, ಗೆಲುವಿನ ಭರವಸೆಯಿಂದ ದೂರ ಉಳಿಯುವಂತೆ ಮಾಡಿದೆ.

ಆಸೀಸ್ ವಿರುದ್ಧ ಬ್ಯಾಟಿಂಗ್ ಆರಂಭಿಸಿದ ಭಾರತ ಸತತವಾಗಿ ವಿಕೆಟ್ ಕಳೆದುಕೊಂಡಿತು. ಇದರಿಂದಾಗಿ ಮೊದಲ ಇನ್ನಿಂಗ್ಸ್​ನಲ್ಲಿ 72.2 ಓವರ್​ಗಳಲ್ಲಿ 185 ರನ್​ಗೆ ಆಲೌಟ್​ ಆಯಿತು. ಈ ವೇಳೆ ಕ್ರೀಸ್​ಗೆ ಬಂದಿದ್ದ ವಿರಾಟ್​ ಕೊಹ್ಲಿ, ಕಡೆಯ ಪಂದ್ಯದಲ್ಲಾದರೂ ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡುತ್ತಾರೆ ಎಂದೇ ಎಲ್ಲರೂ ಊಹಿಸಿದ್ದರು. ಆದ್ರೆ, ಅಂತಿಮವಾಗಿ ಅದೇ ರಾಗ ಅದೇ ಹಾಡು ಎನ್ನುವಂತೆ ವಿರಾಟ್​ ಸ್ಲಿಪ್​ ಆಡಲು ಹೋಗಿ, ತಮ್ಮ ಬಹುಮುಖ್ಯ ವಿಕೆಟ್​ ಕೈಚೆಲ್ಲಿದರು. ಇದು ಅಪಾರ ಸಂಖ್ಯೆಯ ಕ್ರಿಕೆಟ್ ಅಭಿಮಾನಿಗಳನ್ನು ಕೆರಳಿಸಿತು. ಸದ್ಯ ಕೊಹ್ಲಿ ಎಂದಿನಂತೆ ಇಂದು ಕೂಡ ವಿಕೆಟ್​ ಕಳೆದುಕೊಂಡ ರೀತಿಯನ್ನು ಆಸ್ಟ್ರೇಲಿಯಾದ ಮಾಜಿ ಆಟಗಾರ ಪರೋಕ್ಷವಾಗಿ ಲೇವಡಿ ಮಾಡಿದ್ದಾರೆ. ​

ವಿರಾಟ್​ರ ಬ್ಯಾಟಿಂಗ್ ವೀಕ್​ನೆಸ್​

“ಇಂದು ವಿರಾಟ್ ಕೊಹ್ಲಿ ಕ್ರೀಸ್​ಗೆ ಗಟ್ಟಿಯಾಗಿ ಅಂಟಿ ನಿಂತಿರುವಂತೆ ಕಂಡರು. ಆದರೆ ಆಫ್ ಸ್ಟಂಪ್‌ನ ವೈಡ್‌ನಲ್ಲಿ ಪಿಚ್ ಮಾಡಿದ ಬಾಲ್​ಗೆ ಆಡುವ ಪ್ರಲೋಭನೆಗೆ ಬಿದ್ದದ್ದು ಆಶ್ಚರ್ಯವೇ. ನಮ್ಮ ಬೌಲರ್​ಗಳು ವಿರಾಟ್​ರ ಬ್ಯಾಟಿಂಗ್ ವೀಕ್​ನೆಸ್​ ಪ್ರದೇಶಗಳನ್ನೇ ಅಟ್ಯಾಕ್ ಮಾಡಿದರು. ಅದೇ ಪ್ರದೇಶವನ್ನು ಗುರಿಯಾಗಿಸಿ, ಬೌಲಿಂಗ್ ಮಾಡುತ್ತಿದ್ದರು. ಕಡೆಗೂ ಸ್ಲಿಪ್​ಗೆ ಹಾಕಿದ ಬಾಲ್​ಗೆ ಕೊಹ್ಲಿ ಆಡಲು ಯತ್ನಿಸಿ, ತಮ್ಮ ವಿಕೆಟ್ ಕಳೆದುಕೊಂಡರು" ಎಂದು ಜಸ್ಟೀನ್ ಲ್ಯಾಂಗರ್ ಹೇಳಿದರು.

"ಕೊಹ್ಲಿಯ ವಿಕೆಟ್ ಕಬಳಿಸಿದ ಗೆಲುವು ಆಸ್ಟ್ರೇಲಿಯನ್ ಬೌಲರ್‌ಗಳಿಗೆ ಸಲ್ಲುತ್ತದೆ. ಆಸ್ಟ್ರೇಲಿಯಾದಲ್ಲಿ ಸ್ಲಿಪ್‌ಗಳಿಗೆ ಆಡಿದರೆ ನೀವು ಆಹಾರ ಆಗುತ್ತೀರಾ ಎಂಬ ಅರಿವು ನಿಮಗಿರಬೇಕು. ನಮ್ಮ ವೇಗಿಗಳ ಸ್ಲಿಪ್​ ಸೈಡ್​ ಬೌಲಿಂಗ್​​ಗೆ ನೀವು ಎಚ್ಚರಿಕೆಯಿಂದ ಆಡದಿದ್ದರೆ ಖಂಡಿತ ಸಿಕ್ಕಿಬೀಳುತ್ತೀರಿ" ಎಂದು ​ ಅಭಿಪ್ರಾಯಿಸಿದ್ದಾರೆ,(ಏಜೆನ್ಸೀಸ್).