ಮುಂಬೈ: ವಿಕೆಟ್ ಕೀಪರ್-ಬ್ಯಾಟರ್ ರಿಚಾ ಘೋಷ್ (34 ರನ್, 28 ಎಸೆತ, 2 ಬೌಂಡರಿ, 3 ಸಿಕ್ಸರ್) ಬಿರುಸಿನ ಆಟವಾಡಿ ಮೊತ್ತ ಏರಿಸಿದ ನಡುವೆಯೂ ಭಾರತ ತಂಡ ಮಹಿಳೆಯರ ಟಿ20 ಸರಣಿಯ 3ನೇ ಹಾಗೂ ಅಂತಿಮ ಪಂದ್ಯದಲ್ಲಿ ಪ್ರವಾಸಿ ಆಸ್ಟ್ರೆಲಿಯಾ ಎದುರು 7 ವಿಕೆಟ್ಗಳಿಂದ ಶರಣಾಗಿದೆ. ಇದರೊಂದಿಗೆ ಹರ್ಮಾನ್ಪ್ರೀತ್ ಕೌರ್ ಪಡೆ 1-2ರಿಂದ ಸರಣಿ ಸೋಲು ಅನುಭವಿಸಿದೆ. ಸರಣಿಯ ಆರಂಭಿಕ ಪಂದ್ಯ ಗೆದ್ದಿದ್ದ ಭಾರತ ನಂತರದಲ್ಲಿ ಲಯ ತಪ್ಪಿತು.
ಡಾ. ಡಿವೈ ಪಾಟೀಲ್ ಅಕಾಡೆಮಿ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಭಾರತ, ಒಂದು ಹಂತದಲ್ಲಿ 66 ರನ್ಗಳಿಗೆ 4 ವಿಕೆಟ್ ಕಳೆದುಕೊಂಡು ಪರದಾಡಿತು. ಬಳಿಕ ರಿಚಾ ಸಾಹಸದಿಂದ 6 ವಿಕೆಟ್ಗೆ 147 ರನ್ ಪೇರಿಸುವಲ್ಲಿ ಸಲವಾಯಿತು. ಆದರೆ ಆಸೀಸ್ ನಾಯಕಿ ಅಲಿಸ್ಸಾ ಹೀಲಿ (55 ರನ್, 38 ಎಸೆತ, 9 ಬೌಂಡರಿ, 1 ಸಿಕ್ಸರ್) ಪವರ್ಪ್ಲೇನಲ್ಲಿ ಬಿರುಸಿನ ಆಟವಾಡಿ ಗೆಲುವಿನ ಹಾದಿ ಸುಗಮಗೊಳಿಸಿದರು. ಅಂತಿಮವಾಗಿ ಆಸೀಸ್ 18.4 ಓವರ್ಗಳಲ್ಲಿ 3 ವಿಕೆಟ್ಗೆ 149 ರನ್ ಗಳಿಸಿ ಗೆಲುವಿನ ದಡ ಸೇರಿತು.
ಭಾರತ: 6 ವಿಕೆಟ್ಗೆ 147 (ಶೆಫಾಲಿ 26, ಸ್ಮೃತಿ 29, ಜೆಮೀಮಾ 2, ಹರ್ಮಾನ್ಪ್ರೀತ್ 3, ರಿಚಾ 34, ದೀಪ್ತಿ 14, ಅಮನ್ಜೋತ್ 17*, ಪೂಜಾ 7*, ಸುದರ್ಲ್ಯಾಂಡ್ 12ಕ್ಕೆ 2, ವರೆಹ್ಯಾಂ 24ಕ್ಕೆ 2). ಆಸ್ಟ್ರೆಲಿಯಾ: 18.4 ಓವರ್ಗಳಲ್ಲಿ 3 ವಿಕೆಟ್ಗೆ 149 (ಅಲಿಸ್ಸಾ ಹೀಲಿ 55, ಬೆತ್ ಮೂನಿ 52*, ತಹ್ಲಿಯಾ 20, ಲಿಚ್ಫೀಲ್ಡ್ 17*, ಪೂಜಾ 26ಕ್ಕೆ 2).