ಕ್ರೀಡೆ

ಒಂದೇ ಇನಿಂಗ್ಸ್​​ನಲ್ಲಿ 8 ಕ್ಯಾಚ್​ ಹಿಡಿದು ವಿಶ್ವದಾಖಲೆ ಸರಿಗಟ್ಟಿದ ಆಸೀಸ್​ ಕೀಪರ್​!

ಅಡಿಲೇಡ್​: ಆಸ್ಟ್ರೆಲಿಯಾ ಟೆಸ್ಟ್​ ತಂಡದ ವಿಕೆಟ್​ ಕೀಪರ್​ ಅಲೆಕ್ಸ್​ ಕ್ಯಾರಿ ದೇಶೀಯ ಏಕದಿನ ಪಂದ್ಯವೊಂದರಲ್ಲಿ 8 ಕ್ಯಾಚ್​ ಹಿಡಿಯುವ ಮೂಲಕ ವಿಶ್ವದಾಖಲೆಯನ್ನು ಸರಿಗಟ್ಟಿದ್ದಾರೆ.

ದಕ್ಷಿಣ ಆಸ್ಟ್ರೆಲಿಯಾ ತಂಡದ ಪರ ಪಂದ್ಯದಲ್ಲಿ ಅಲೆಕ್ಸ್​ ಕ್ಯಾರಿ, ಕ್ವೀನ್ಸ್​ಲ್ಯಾಂಡ್​ ವಿರುದ್ಧ ಈ ಸಾಧನೆ ಮಾಡಿದರು. ಜೋರ್ಡನ್​ ಬಕಿಂಗ್​ಹ್ಯಾಂ ಬೌಲಿಂಗ್​ನಲ್ಲೇ 5 ಕ್ಯಾಚ್​ ಹಿಡಿದ ಕ್ಯಾರಿ, ಇಂಗ್ಲೆಂಡ್​ನ ಸಾಮರ್​ಸೆಟ್​ ತಂಡದ ಡೆರೆಕ್​ ಟೇಲರ್​ (1982) ಮತ್ತು ವೋರ್ಸೆಸ್ಟರ್​ಶೈರ್​ನ ಜೇಮ್ಸ್​ ಪೈಪ್​ (2021) ವಿಶ್ವದಾಖಲೆ ಸರಿಗಟ್ಟಿದರು.