ಮ್ಯಾಡ್ರಿಡ್: ಕ್ರೀಡೆಯಲ್ಲಿ ಸಂಭ್ರಮಾಚರಣೆಗೆ ಬರವಿಲ್ಲ. ನೆಚ್ಚಿನ ತಂಡ ಗೆದ್ದರಂತೂ ಅಭಿಮಾನಿಗಳ ಸಂಭ್ರಮ ಹೇಳತೀರದು. ಎರಡು ತಂಡಗಳ ಅಭಿಮಾನಿಗಳ ನಡುವಿನ ಜಿದ್ದಾಜಿದ್ದಿಯನ್ನು ಎಷ್ಟೋ ಬಾರಿ ನೋಡಿದ್ದೇವೆ. ನೆಚ್ಚಿನ ತಂಡ ಜಯಿಸಿದ ಬೆನ್ನಲ್ಲೇ ಸಂಭ್ರಮಿಸುತ್ತಿದ್ದ 14 ವರ್ಷದ ಬಾಲಕ ಪ್ರಾಣ ಕಳೆದುಕೊಂಡ ಘಟನೆ ಸ್ಪೇನ್ನಲ್ಲಿ ನಡೆದಿದೆ. ಅಥ್ಲೆಟಿಕೊ ಮ್ಯಾಡ್ರಿಡ್ಸ್ ತಂಡ ಪ್ರತಿಷ್ಠಿತ ಲಾ ಲೀಗಾ ಪ್ರಶಸ್ತಿ ಗೆದ್ದ ಬೆನ್ನಲ್ಲೆ ಈ ದುರ್ಟನೆ ನಡೆದಿದೆ.
ಅಥ್ಲೆಟಿಕೊ ಮ್ಯಾಡ್ರಿಡ್ಸ್ ತಂಡ ಕಾರು ನಿಲ್ದಾಣದಲ್ಲಿ ಸಂಭ್ರಮಿಸುತ್ತಿದ್ದಾಗ 14 ವರ್ಷದ ಅಭಿಮಾನಿ ನಿಧನರಾದರು. ಸಂಭ್ರಮಿಸುತ್ತಿದ್ದ ಬರದಲ್ಲಿ ತಲೆ ಗೋಡೆಗೆ ಬಡಿದಾಗ ಸ್ಥಳದಲ್ಲೇ ಪ್ರಾಣಬಿಟ್ಟಿದ್ದಾರೆ. ತಕ್ಷಣವೇ ತುರ್ತುಚಿಕಿತ್ಸೆ ನೀಡಿದರೂ ಫಲಕಾರಿಯಾಗಲಿಲ್ಲ. ಲೀಗ್ನಲ್ಲಿ 11ನೇ ಬಾರಿಗೆ ಪ್ರಶಸ್ತಿ ಜಯಿಸಿದ ಅಥ್ಲೆಟಿಕೊ ತಂಡದ ಅಭಿಮಾನಿಗಳ ಸಂಭ್ರಮ ಮುಗಿಲು ಮುಟ್ಟಿತು. ಸುಮಾರು 2 ಸಾವಿರದಷ್ಟು ಪ್ರೇಕ್ಷಕರು ಸಂಭ್ರಮಿಸುತ್ತಿದ್ದರು.
ಇದನ್ನೂ ಓದಿ: ಎಫ್ಐಎಚ್ ಅಧ್ಯಕ್ಷರಾಗಿ ನರೀಂದರ್ ಬಾತ್ರಾ ಪುನರಾಯ್ಕೆ
ಕೋವಿಡ್-19 ಮಾರ್ಗಸೂಚಿಯಂತೆ ಸಾರ್ವಜನಿಕವಾಗಿ ಸಂಭ್ರಮಾಚರಣೆಯನ್ನು ನಿಷೇಧಿಸಲಾಗಿತ್ತು. ಭಾನುವಾರ ತಂಡದ ಅಭಿಮಾನಿಗಳು ಸಂಭ್ರಮದ ಅಂಗವಾಗಿ ಸಾರ್ವಜನಿಕವಾಗಿ ಪರೇಡ್ ನಡೆಸಲು ತೀರ್ಮಾನಿಸಿದ್ದಾರೆ.