More

    ಎಫ್ಐಎಚ್ ಅಧ್ಯಕ್ಷರಾಗಿ ನರೀಂದರ್ ಬಾತ್ರಾ ಪುನರಾಯ್ಕೆ

    ನವದೆಹಲಿ: ಭಾರತದ ನರೀಂದರ್ ಬಾತ್ರಾ, ಅಂತಾರಾಷ್ಟ್ರೀಯ ಹಾಕಿ ಫೆಡರೇಷನ್‌ಗೆ (ಎಫ್ಐಎಚ್) ಸತತ 2ನೇ ಬಾರಿಗೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶನಿವಾರ ವರ್ಚುವಲ್ ಮೂಲಕ ನಡೆದ ಎಫ್ಐಎಚ್ ನ 47ನೇ ಸಭೆಯಲ್ಲಿ ನರೀಂದರ್ ಬಾತ್ರಾ ಕೇವಲ 2 ಮತಗಳಿಂದ ಬೆಲ್ಜಿಯಂನ ಮಾರ್ಕ್ ಕೌಡ್ರೊನ್ ಅವರನ್ನು ಸೋಲಿಸಿದರು. ನರೀಂದರ್ ಬಾತ್ರಾ, ಭಾರತೀಯ ಒಲಿಂಪಿಕ್ ಸಂಸ್ಥೆಯ (ಐಒಎ) ಹಾಲಿ ಅಧ್ಯಕ್ಷರಾಗಿದ್ದು, ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿಯ (ಐಒಸಿ) ಸದಸ್ಯರಾಗಿದ್ದಾರೆ. ಬೆಲ್ಜಿಯಂ ಹಾಕಿ ಫೆಡರೇಷನ್‌ನ ಮುಖ್ಯಸ್ಥರೂ ಆಗಿರುವ ಮಾರ್ಕ್ ಕೌಡ್ರೊನ್ ಬಾತ್ರಾಗೆ ಪ್ರಬಲ ಪೈಪೋಟಿ ನೀಡಿದ್ದರು.

    ಇದನ್ನೂ ಓದಿ: ಕ್ರಿಕೆಟ್​ ಮಂಡಳಿ ವಿರುದ್ಧವೇ ಮುನಿಸಿಕೊಂಡ ಶ್ರೀಲಂಕಾ ಕ್ರಿಕೆಟಿಗರು,

    ಬಾತ್ರಾ 63 ಮತ ಪಡೆದರೆ, ಎದುರಾಳಿ ಮಾರ್ಕ್ ಕೌಡ್ರೊನ್ 61 ಮತಗಳಿಸಿದರು. 124 ಸದಸ್ಯರೂ ಆನ್‌ಲೈನ್ ಮೂಲಕ ಮತ ಚಲಾಯಿಸಿದರು. ಪ್ರಮಾಣಕ್ಕೆ ನಿಷೇಧವಿರುವ ಹಿನ್ನೆಲೆಯಲ್ಲಿ ಎಫ್ಐಎಚ್ ಕಾಂಗ್ರೆಸ್ ಸಭೆಯೂ ವರ್ಚುವಲ್ ಮೂಲಕ ಜರುಗಿತು. ಬಾತ್ರಾ 2024ವರೆಗೂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಲಿದ್ದಾರೆ. ಕಳೆದ ವರ್ಷದ ಸಭೆಯಲ್ಲಿ ಅಧ್ಯಕ್ಷರ ಅವಧಿಯನ್ನು 4 ವರ್ಷಗಳ ಬದಲಾಗಿ 3 ವರ್ಷಕ್ಕಿಳಿಸಲಾಗಿತ್ತು.

    ಇದನ್ನೂ ಓದಿ: ಐಪಿಎಲ್​ನಿಂದ ಹೊರಹೋಗಲು ನಿರ್ಧರಿಸಿದ್ದರಂತೆ ಆರ್​ಸಿಬಿ ಸ್ಪಿನ್ನರ್​ ಯಜುವೇಂದ್ರ ಚಾಹಲ್​

    ಈ ಮೊದಲು ಸಭೆಯೂ ಕಳೆದ ಡಿಸೆಂಬರ್‌ನಲ್ಲಿ ನವದೆಹಲಿಯಲ್ಲಿ ನಿಗದಿಯಾಗಿತ್ತು. ಆದರೆ, ಕೋವಿಡ್‌ನಿಂದ ಸಭೆಯನ್ನು ಮುಂದೂಡಲಾಗಿತ್ತು. 2016ರಲ್ಲಿ ಮೊದಲ ಬಾರಿಗೆ ಅಧ್ಯಕ್ಷರಾಗಿ ಬಾತ್ರಾ ಆಯ್ಕೆಯಾಗಿದ್ದರು. ಬಾತ್ರಾ, 92 ವರ್ಷದ ಎಫ್ಐಎಚ್ನಲ್ಲಿ ಈ ಹುದ್ದೆ ಅಲಂಕರಿಸಿದ ಏಷ್ಯಾದ ಮೊದಲ ವ್ಯಕ್ತಿ ಎನಿಸಿಕೊಂಡಿದ್ದಾರೆ.

    ಮಹಿಳಾ ತಂಡದ ಕೋಚ್​ ಹುದ್ದೆಯಿಂದ ರಾಮನ್​ ಪದಚ್ಯುತಿಗೆ ಬೇಸರ ಹೊರಹಾಕಿದ ಸೌರವ್​ ಗಂಗೂಲಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts