More

    ಚಾಮರಾಜೇಶ್ವರಿ ಅಕ್ಕನ ಬಳಗದಿಂದ ವಚನಗಾರ್ತಿ ಅಕ್ಕಮಹಾದೇವಿ ಸ್ಮರಣೆ

    ಮೈಸೂರು:ನಗರದ ಜೆಎಸ್‌ಎಸ್ ಕಾನೂನು ಕಾಲೇಜು ಸಭಾಂಗಣದಲ್ಲಿ ಚಾಮರಾಜೇಶ್ವರಿ ಅಕ್ಕನ ಬಳಗದ ವತಿಯಿಂದ ವಚನಗಾರ್ತಿ ಅಕ್ಕಮಹಾದೇವಿ ಜಯಂತಿ ಆಚರಿಸಲಾಯಿತು.
    ಮೈಸೂರು ಮುಕ್ತ ವಿವಿ ಅಕ್ಕಮಹಾದೇವಿ ಸಂಶೋಧನಾ ಮತ್ತು ವಿಸ್ತರಣಾ ಪೀಠದ ನಿರ್ದೇಶಕಿ ಪ್ರೊ.ಕವಿತಾ ರೈ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶರಣೆ ಅಕ್ಕಮಹಾದೇವಿ ಅವರ ವಚನಗಳು ಇತರ ವಚನಕಾರರ ವಚನಗಳಿಗಿಂತ ಭಿನ್ನವಾಗಿ ನಿಲ್ಲುವಂತಹವು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
    ಅಕ್ಕಮಹಾದೇವಿ ಅವರದ್ದು ಅನುಭಾವದ ವೈರಾಗ್ಯ, ಶ್ರೀಮಂತಿಕೆಯ ಲೌಕಿಕ ಜೀವನವನ್ನು ತೊರೆದು ಚನ್ನಮಲ್ಲಿಕಾರ್ಜುನನ್ನು ಅರಸಿ ವೈರಾಗ್ಯಪರಳಾಗಿ ಕದಳಿ ವನ ಹೊಕ್ಕವರು ಅಕ್ಕಮಹಾದೇವಿ ಎಂದರಲ್ಲದೆ, ಅಕ್ಕಮಹಾದೇವಿಯ ಸಾಧನೆ, ಸಿದ್ಧಿಯನ್ನು ವಿವರಿಸಿದರು.
    ಸಮಾರಂಭದಲ್ಲಿ ರುದ್ರಭೂಮಿಯಲ್ಲಿ ಕಾಯಕ ನಿರ್ವಹಿಸುವ ನೀಲಮ್ಮ ಅವರನ್ನು ಸನ್ಮಾನಿಸಲಾಯಿತು.
    ಬಳಗದ ಅಧ್ಯಕ್ಷೆ ಮಾದಲಾಂಬಿಕಾ ನಂಜುಂಡಸ್ವಾಮಿ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಮೈಸೂರು ಕದಳಿ ವೇದಿಕೆ ಅಧ್ಯಕ್ಷೆ ಶಾರದಾ ಶಿವಲಿಂಗಸ್ವಾಮಿ, ಬಸವ ಬಳಗಗಳ ಒಕ್ಕೂಟದ ಅಧ್ಯಕ್ಷ ಪ್ರದೀಪ್ ಕುಮಾರ್, ಉಪಾಧ್ಯಕ್ಷೆ ಮಂಜುಳಾ ನಂಜುಂಡಸ್ವಾಮಿ, ಕಾರ್ಯದರ್ಶಿ ಪ್ರತಿಮಾ ಮಂಜುನಾಥ್, ಹಿರಿಯ ಸಲಹೆಗಾರರಾದ ಮಂಗಳಾ ಮುದ್ದುಮಾದಪ್ಪ, ವಿಜಯಾ ಚಿನ್ನಸ್ವಾಮಿ, ಇಂದಿರಾ ಪರಮಶಿವಯ್ಯ ಹಾಗೂ ಬಳಗದ ಪದಾಧಿಕಾರಿಗಳು, ಸದಸ್ಯರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts