More

    ಬಸವಣ್ಣ ತತ್ವ, ಸಿದ್ಧಾಂತ ಅಳವಡಿಸಿಕೊಳ್ಳಿ

    ಸೋಮವಾರಪೇಟೆ: ಬಸವಣ್ಣ ಅವರ ತತ್ವ, ಸಿದ್ಧಾಂತಗಳನ್ನು ಪ್ರತಿಯೊಬ್ಬರು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಪಾಲನೆ ಮಾಡಬೇಕು ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಹೇಳಿದರು.

    ಬಸವ ಜಯಂತಿ ಅಂಗವಾಗಿ ಕಕ್ಕೆಹೊಳೆ ಸೇತುವೆ ಸಮೀಪ ಇರುವ ಬಸವೇಶ್ವರರ ಪ್ರತಿಮೆಗೆ ಶುಕ್ರವಾರ ಪುಷ್ಪನಮನ ಸಲ್ಲಿಸಿ ಮಾತನಾಡಿ, 12 ನೇ ಶತಮಾನದಲ್ಲಿಯೇ ಬಸವಣ್ಣ ಜಾತಿ, ಮತ, ಭೇದ ತೊಡೆದು ಎಲ್ಲರೂ ಒಂದೇ ಎಂದು ಸಮಾನತೆ ಸಾರಿದ ಮಹಾನ್ ಪುರುಷ, ಅವರ ತತ್ವ ಆದರ್ಶಗಳನ್ನು ಇಂದಿನ ಜನಾಂಗ ಅವುಗಳನ್ನು ಅನುಸರಿಸಿಕೊಂಡರೆ ಉತ್ತಮ ಸಮಾಜ ನಿರ್ಮಾಣವಾಗುತ್ತದೆ ಎಂದರು.

    ಹಟ್ಟಿಹೊಳೆ ಚರ್ಚ್ ನ ಧರ್ಮ ಗಿಲ್ಬರ್ಟ್ ಡಿಸಿಲ್ವಾ ಮಾತನಾಡಿ, ಬಸವಣ್ಣ ಈ ನಾಡಿನ ಸಾಂಸ್ಕೃತಿಕ ನಾಯಕ, ಅವರು ಸಮಾನತೆ ಸಾರಿದ್ದರಿಂದಲೇ ಇಂದು ನಾವೆಲ್ಲಾ ಒಟ್ಟಿಗೆ ಸೇರುವಂತಾಗಿದೆ ಎಂದರು.

    ಪಟ್ಟಣದ ಜಲಾಲಿಯಾ ಮಸೀದಿಯ ಧರ್ಮಗುರು ಹಮೀದ್ ಸಖಾಫಿ ಮಾತನಾಡಿ, 900 ವರ್ಷಗಳ ಹಿಂದೆಯೇ ಬಸವಣ್ಣ ಅವರು ಸಮಾನತೆಯ ಮೂಲಕ ಸುಭಿಕ್ಷಾ ಸಮಾಜದ ನಿರ್ಮಾಣಕ್ಕಾಗಿ ಹೋರಾಡಿದವರು. ಕಂದಾಚಾರ, ಜಾತೀಯತೆ ಸಮಾಜಕ್ಕೆ ಮಾರಕವೆಂದು ತಿಳಿ ಹೇಳಿದವರು. ಅವರ ತತ್ವವನ್ನು ನಾವುಗಳು ಪಾಲಿಸಿದರೆ ಅಪರಾಧ ಮುಕ್ತ ಸಮಾಜ ನಿರ್ಮಾಣ ವಾಗುತ್ತದೆ ಎಂದರು.

    ಮಾಜಿ ಸಚಿವ ಎಂ.ಪಿ.ಅಪ್ಪಚ್ಚು ರಂಜನ್ ಮಾತನಾಡಿ, ಬಸವಣ್ಣ ಅವರು 12 ನೇ ಶತಮಾನದಲ್ಲಿಯೇ ಅನುಭವ ಮಂಟಪ ಸ್ಥಾಪಿಸಿ ಇಂದಿನ ಪ್ರಜಾಪ್ರಭುತ್ವ ವ್ಯವಸ್ಥೆಗೆ ಅಡಿಪಾಯ ಹಾಕಿದವರು ಎಂದು ಹೇಳಿದರು.

    ತಹಸೀಲ್ದಾರ್ ನವೀನ್ ಕುಮಾರ್, ಕಾರ್ಯಕ್ರಮದ ಸಂಯೋಜಕ ಹಿರಿಯ ಪತ್ರಕರ್ತ ಎಸ್.ಮಹೇಶ್, ಮುದ್ದಿನಕಟ್ಟೆ ಮಠದ ಅಭಿನವ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಸೋಮವಾರಪೇಟೆ ವಿರಕ್ತ ಮಠದ ನಿಶ್ಚಲನಿರಂಜನ ದೇಶಿಕೇಂದ್ರ ಸ್ವಾಮೀಜಿ, ಬೆಂಗಳೂರು ಸೋನೆನ ಹಳ್ಳಿ ಬೌದ್ಧ ಗುರುಪೀಠದ ಮುನಿರಾಜಪ್ಪ ಬಂತೇಜಿ, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts