More

    ಆವಾಂತರ ಸೃಷ್ಟಿಸಿದ ಜೋರು ಮಳೆ

    ಮೈಸೂರು: ಮುಂಗಾರು ಆರಂಭದ ಮಳೆ ಜೋರಾಗಿಯೇ ಇದ್ದು, ಬುಧವಾರ ಕೂಡ ಆವಾಂತರವನ್ನೇ ಸೃಷ್ಟಿಸಿದೆ.
    ಜೋರು ಬಿರುಗಾಳಿಯೊಂದಿಗೆ ನಾಲ್ಕು ದಿನಗಳ ಹಿಂದೆ ಸುರಿದ ಮಳೆಯಿಂದ ನೂರಾರು ಮರಗಳು, 50ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲ ಕಚ್ಚಿದ್ದವು. ಬುಧವಾರ ರಾತ್ರಿ ಸುರಿದ ಮಳೆಯಿಂದಲೂ ಹಲವು ಮರಗಳ ರೆಂಬೆ, ಕೊಂಬೆಗಳು ಉರುಳಿ ವಿದ್ಯುತ್ ಕಂಬಗಳ ಮೇಲೆ ಬಿದ್ದಿವೆ. ಇದರಿಂದ ಕೆಲ ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಅದೃಷ್ಟವಶಾತ್ ಯಾವುದೇ ಅನಾಹುತವಾಗಿಲ್ಲ.
    ನಗರದ ಜೆಎಲ್‌ಬಿ ರಸ್ತೆ ಸೇರಿದಂತೆ ಕೆಲ ಭಾಗಗಳಲ್ಲಿ ಮರಗಳು ಉರುಳಿ ಬಿದ್ದಿವೆ. ಚಾಮುಂಡಿಪುರಂ ವೃತ್ತದಲ್ಲಿ ಬಿರುಗಾಳಿಗೆ ಮರ ಉರುಳಿ ಸರಣಿಯಾಗಿ ವಿದ್ಯುತ್ ಕಂಬಗಳು ಬಿದ್ದಿವೆ. ಮರ ಹಾಗೂ ವಿದ್ಯುತ್ ಕಂಬಗಳು ಕಾರು, ಸ್ಕೂಟರ್, ಬೈಕ್ ಮೇಲೆ ಬಿದ್ದಿದ್ದು, ಕೆಲ ವಾಹನಗಳು ಜಖಂಗೊಂಡಿವೆ.
    ವಿವಿಧ ಭಾಗಗಳಲ್ಲಿ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ನಗರಪಾಲಿಕೆಯ ಅಭಯ ತಂಡ, ಸೆಸ್ಕ್ ಸಿಬ್ಬಂದಿ ಮುರಿದು ಬಿದ್ದ ಮರದ ರೆಂಬೆ, ಕೊಂಚೆ, ಹಾಗೂ ವಿದ್ಯುತ್ ಕಂಬಗಳನ್ನು ತೆರವುಗೊಳಿಸುವ ಕಾರ್ಯ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts