ಇಂಡೋ-ಪಾಕ್​ ಏಷ್ಯನ್​ ಗೇಮ್ಸ್​ ಫೈನಲ್​ಗೆ ಬರಲ್ವಂತೆ ಟ್ರೋಫಿ ಕಳ್ಳ ಮೊಹ್ಸಿನ್​ ನಖ್ವಿ! ಹೀಗಿದೆ ಕಾರಣ | IND-PAK Final 
ಏಷ್ಯನ್​ ಗೇಮ್ಸ್

ಇಂಡೋ-ಪಾಕ್​ ಏಷ್ಯನ್​ ಗೇಮ್ಸ್​ ಫೈನಲ್​ಗೆ ಬರಲ್ವಂತೆ ಟ್ರೋಫಿ ಕಳ್ಳ ಮೊಹ್ಸಿನ್​ ನಖ್ವಿ! ಹೀಗಿದೆ ಕಾರಣ | IND-PAK Final

ಈ ಮಧ್ಯೆ, ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಂದ ಟ್ರೋಫಿ ಕಳ್ಳ ಎಂದೇ ಹಣೆಪಟ್ಟಿ ಪಡೆದಿರುವ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಎಂಟ್ರಿ ಬಗ್ಗೆ ಹೊಸ ಮಾಹಿತಿ ಲಭ್ಯವಾಗಿದೆ.

IND-PAK Final: ಪ್ರಸಕ್ತ ಆತಿಥೇಯ ಜಪಾನ್​ನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್​ ಕ್ರೀಡಾಕೂಟದಲ್ಲಿ ಭಾರತಕ್ಕೆ ಚಿನ್ನ, ಬೆಳ್ಳಿ ಮತ್ತು ಕಂಚು ಪದಕಗಳ ಸುರಿಮಳೆಯೇ ಹರಿದುಬರುತ್ತಿದ್ದು, ನಾಳೆ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರಿಕೆಟ್​ ಫೈನಲ್​ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಚಿನ್ನಕ್ಕಾಗಿ ಭಾರಿ ಪೈಪೋಟಿ ನಡೆಸಲು ಸಜ್ಜಾಗಿವೆ. ಈ ಮಧ್ಯೆ, ಭಾರತೀಯ ಕ್ರಿಕೆಟ್​ ಅಭಿಮಾನಿಗಳಿಂದ ಟ್ರೋಫಿ ಕಳ್ಳ ಎಂದೇ ಹಣೆಪಟ್ಟಿ ಪಡೆದಿರುವ ಎಸಿಸಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಎಂಟ್ರಿ ಬಗ್ಗೆ ಹೊಸ ಮಾಹಿತಿ ಲಭ್ಯವಾಗಿದೆ.

ನಖ್ವಿ ಬರಬೇಕಿತ್ತು! ಆದ್ರೆ...

ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ACC) ಹಾಗೂ ಪಾಕಿಸ್ತಾನ ಕ್ರಿಕೆಟ್​ ಮಂಡಳಿಯ ಅಧ್ಯಕ್ಷರೂ ಆಗಿರುವ ಸಚಿವ ಮೊಹ್ಸಿನ್ ನಖ್ವಿ, ಇದೇ ಶನಿವಾರ ನಡೆಯಲಿರುವ ಏಷ್ಯನ್ ಗೇಮ್ಸ್ ಕ್ರಿಕೆಟ್ ಫೈನಲ್ ಪಂದ್ಯಕ್ಕೆ ಹಾಜರಾಗುವುದಿಲ್ಲ ಎಂಬ ಸುದ್ದಿ ಹೊರಬಿದ್ದಿದೆ. ಇದಕ್ಕೆ ಸ್ಪಷ್ಟ ಕಾರಣವನ್ನೂ ತಿಳಿಸಲಾಗಿದೆ. ಈ ಮುಂಚೆಯೇ ಕೆಲವು ಕಾರ್ಯಕ್ರಮಗಳನ್ನು ಒಪ್ಪಿಕೊಂಡಿರುವ ಹಿನ್ನೆಲೆ ಅದೇ ದಿನದಂದು ಏಷ್ಯನ್​ ಗೇಮ್ಸ್​ಗೆ ಬರಲು ಆಗೋದಿಲ್ಲ ಎಂದು ತಿಳಿಸಿರುವುದಾಗಿ ಎಸಿಸಿ ಸ್ಪಷ್ಟಪಡಿಸಿದೆ.

ಇತ್ತೀಚೆಗಷ್ಟೇ ಭಾರತ ಮಹಿಳಾ ತಂಡವು ಏಷ್ಯಾಕಪ್​ ಟ್ರೋಫಿ ವಿಜೇತರಾಗಿ ಹೊರಹೊಮ್ಮಿದರೂ ಇದೇ ಮೊಹ್ಸಿನ್​ ನಖ್ವಿಯಿಂದ ಪ್ರಶಸ್ತಿ ಪಡೆಯಲು ಮುಂದಾಗಲಿಲ್ಲ. ಇದು ಬಿಸಿಸಿಐನ ಕಟು ನಿರ್ಧಾರ ಕೈಗೊಂಡಿದ್ದ ಕಾರಣ, ಮಹಿಳಾ ತಂಡ ಯಾವುದೇ ಕಾರಣಕ್ಕೂ ಟ್ರೋಫಿ ಪಡೆಯುವುದು ಬೇಡವೆಂದೇ ಇಚ್ಛಿಸಿತ್ತು. ಈ ಅನುಭವ ಪುರುಷರ ಏಷ್ಯಾಕಪ್​ ಗೆದ್ದ ಸೂರ್ಯಕುಮಾರ್ ಯಾದವ್​ ಪಡೆಗೂ ಆಗಿತ್ತು. ಆದರೀಗ, ನಖ್ವಿ ಬರೋದಿಲ್ಲ ಎಂಬ ಮಾಹಿತಿ ಸದ್ಯ ಭಾರತೀಯ ಕ್ರಿಕೆಟ್​ ಪ್ರೇಮಿಗಳ ಅತೀವ ಸಂತಸಕ್ಕೆ ಕಾರಣವಾಗಿದೆ.

ನಖ್ವಿ ಬಂದ್ದಿದ್ರೆ ಪದಕದ ಕಥೆ?

ಆದಾಗ್ಯೂ, ಒಲಿಂಪಿಕ್ ಕೌನ್ಸಿಲ್ ಆಫ್ ಏಷ್ಯಾ (OCA) ಅಧಿಕೃತವಾಗಿ ಜವಾಬ್ದಾರಿ ವಹಿಸಿಕೊಂಡರೆ, ಟೀಮ್ ಇಂಡಿಯಾ ಏನಾದರೂ ಗೆಲುವು ಸಾಧಿಸಿದರೆ ಖಂಡಿತವಾಗಿ ಆಟಗಾರರು ನಖ್ವಿ ಅವರಿಂದಲೇ ಪದಕಗಳನ್ನು ಸ್ವೀಕರಿಸಲೇ ಬೇಕಿತ್ತು ಎಂದು ಒಂದಷ್ಟು ವರದಿಗಳು ಮೊದಲೇ ತಿಳಿಸಿತ್ತು. ಸದ್ಯ ಇವೆಲ್ಲವೂ ಇದೀಗ ಉಲ್ಟಾ ಹೊಡೆದಿದೆ,(ಏಜೆನ್ಸೀಸ್).