4x400 ಮೀ ಮಿಕ್ಸ್ಡ್​ ರಿಲೇಯಲ್ಲಿ ಬೆಳ್ಳಿ 
ಕ್ರೀಡೆ

4x400 ಮೀ ಮಿಕ್ಸ್ಡ್​ ರಿಲೇಯಲ್ಲಿ ಬೆಳ್ಳಿ, ಕಂಚು ಗೆದ್ದ ಸೀಮಾ! ಏಷ್ಯನ್​ ಗೇಮ್ಸ್​ನಲ್ಲಿ 17ಕ್ಕೆ ಏರಿದ ಭಾರತದ ಪದಕ ಬೇಟೆ | Asian Games

ದಿನದ ಆರಂಭದಲ್ಲೇ ರೋಯಿಂಗ್‌ನ ಪುರುಷರ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಸತ್ನಾಮ್ ಸಿಂಗ್ ಮತ್ತು ಸಲ್ಮಾನ್ ಖಾನ್ ಜೋಡಿ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು.

Asian Games: ಪ್ರಸಕ್ತ ಆತಿಥೇಯ ಜಪಾನ್​ನಲ್ಲಿ ನಡೆಯುತ್ತಿರುವ ಏಷ್ಯನ್​ ಗೇಮ್ಸ್​ ಕ್ರೀಡಾಕೂಟದಲ್ಲಿ ಭಾರತದ ಪದಕಗಳ ಸಂಖ್ಯೆ ಇಂದಿಗೆ 17ಕ್ಕೆ ಏರಿದೆ. ಗುರುವಾರ ಒಂದೇ ದಿನ ವಿವಿಧ ಸ್ಪರ್ಧೆಗಳಲ್ಲಿ ಐದು ಮೆಡಲ್ ಬಾಚಿಕೊಂಡಿರುವ ಭಾರತೀಯ ಕ್ರೀಡಾಪಟುಗಳು, ವಿದೇಶಿ ನೆಲದಲ್ಲಿ ತ್ರಿವರ್ಣ ಧ್ವಜವನ್ನು ಎತ್ತರಕ್ಕೆ ಹಾರಿಸಿದ್ದಾರೆ.

ಗುರುವಾರ ನಡೆದ ವಿವಿಧ ಸ್ಪರ್ಧೆಗಳಲ್ಲಿ ಭಾರತ 5 ಪದಕಗಳನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಒಟ್ಟು ಪದಕಗಳ ಸಂಖ್ಯೆಯನ್ನು 17ಕ್ಕೆ ಕೊಂಡೊಯ್ದಿದೆ. ದಿನದ ಆರಂಭದಲ್ಲೇ ರೋಯಿಂಗ್‌ನ ಪುರುಷರ ಡಬಲ್ ಸ್ಕಲ್ಸ್ ವಿಭಾಗದಲ್ಲಿ ಸತ್ನಾಮ್ ಸಿಂಗ್ ಮತ್ತು ಸಲ್ಮಾನ್ ಖಾನ್ ಜೋಡಿ ಅದ್ಭುತ ಪ್ರದರ್ಶನ ನೀಡಿ ಭಾರತಕ್ಕೆ ಕಂಚಿನ ಪದಕ ಗೆದ್ದುಕೊಟ್ಟರು.

ವೂಷು ಕ್ರೀಡೆಯ ಮಹಿಳೆಯರ 60 ಕೆಜಿ ಸಾಂಡಾ ವಿಭಾಗದ ಫೈನಲ್‌ನಲ್ಲಿ ಚೀನಾದ ಝಾಂಗ್ ಕ್ಸಿಯಾವೋಯು ವಿರುದ್ಧ ಹೋರಾಡಿದ ರೋಷಿಬಿನಾ ದೇವಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟರು. ಇದು ಏಷ್ಯನ್ ಗೇಮ್ಸ್‌ನಲ್ಲಿ ರೋಷಿಬಿನಾ ಗಳಿಸಿದ ಸತತ 3ನೇ ಪದಕ (2018ರಲ್ಲಿ ಕಂಚು, 2023ರಲ್ಲಿ ಬೆಳ್ಳಿ ಹಾಗೂ ಈಗ 2026ರಲ್ಲೂ ಬೆಳ್ಳಿ). ಗೆದ್ದಿದ್ದಾರೆ. ಇನ್ನು, ಮಧ್ಯಾಹ್ನ ನಡೆದ ಶೂಟಿಂಗ್‌ ವಿಭಾಗದಲ್ಲಿ ಅನಂತ್‌ಜೀತ್ ಸಿಂಗ್ ನರುಕಾ ಮತ್ತು ಪರೀನಾಜ್ ಧಲಿವಾಲ್ ಜೋಡಿ ಭಾರತದ ಖಾತೆಗೆ ಮತ್ತೊಂದು ಕಂಚಿನ ಪದಕ ಸೇರಿಸಿತು.

ಮಹಿಳೆಯರ 10 ಸಾವಿರ ಮೀಟರ್ ಫೈನಲ್ ರೇಸ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸೀಮಾ ಅವರು ಕಂಚಿನ ಪದಕ ಗೆದ್ದರೆ, 4x400 ಮೀಟರ್​ ಮಿಕ್ಸೆಡ್ ರಿಲೇಯಲ್ಲಿ ವಿತ್ಯಾ ರಾಮರಾಜ್, ಪೊವಮ್ಮ ಎಂ ಮತ್ತು ಮನು ಟಿ ಅವರನ್ನೊಳಗೊಂಡ ಭಾರತೀಯ ತಂಡವು ಬೆಳ್ಳಿ ಪದಕಕ್ಕೆ ಮುತ್ತಿಕ್ಕಿತು. ಪುರುಷರ 100 ಮೀ. ಸ್ಪ್ರಿಂಟ್​ ಸ್ಪರ್ಧೆಯಲ್ಲಿ ಭಾರತದ ಸ್ಟಾರ್​ ಸ್ಪ್ರಿಂಟರ್‌ಗಳಾದ ಅನಿಮೇಶ್ ಕುಜೂರ್ ಮತ್ತು ಗುರ್ವಿಂದರ್ ಸಿಂಗ್ ಕ್ರಮವಾಗಿ 3 ಮತ್ತು 2ನೇ ಸ್ಥಾನ ಪಡೆದು ಸೆಮಿಫೈನಲ್ ಹಂತಕ್ಕೆ ಅರ್ಹತೆ ಪಡೆದಿದ್ದಾರೆ. ಇನ್ನು, ಮಹಿಳಾ ತ್ರಿಪಲ್​ ಜಂಪ್​ ಫೈನಲ್‌ನಲ್ಲಿ ಕಣಕ್ಕಿಳಿದಿದ್ದ ಆಶಾ ಇಲಂಗೋ 4ನೇ ಸ್ಥಾನ ಹಾಗೂ ನಿಹಾರಿಕಾ ವಸಿಷ್ಠ 10ನೇ ಸ್ಥಾನ ಪಡೆಯುವ ಮೂಲಕ ಏಷ್ಯನ್​ ಗೇಮ್ಸ್​ ಮುಕ್ತಾಯಗೊಳಿಸಿದ್ದಾರೆ,(ಏಜೆನ್ಸೀಸ್).