ಕ್ರೀಡೆ

ಏಷ್ಯಾಕಪ್​ ಟ್ರೋಫಿ ನಿಮ್ಮ ಆಸ್ತಿಯಲ್ಲ! ಕಪ್​, ಮೆಡಲ್​ ಹೊತ್ತೊಯ್ದ ಮೊಹ್ಸಿನ್​ ನಖ್ವಿಗೆ ಬಿಸಿಸಿಐ ಖಡಕ್​ ವಾರ್ನಿಂಗ್ | Asia Cup Trophy

Asia Cup Trophy: ಸೆ.28ರಂದು ದುಬೈನಲ್ಲಿ ನಡೆದ ಏಷ್ಯಾಕಪ್ ಟಿ20 ಟೂರ್ನಿಯ ಫೈನಲ್​ ಪಂದ್ಯವನ್ನು ಭಾರತ ಗೆದ್ದಿದ್ದೇ ಆದರೂ ಟ್ರೋಫಿ ಮತ್ತು ಮೆಡಲ್​ಗಳು ಮಾತ್ರ ಇನ್ನೂ ಆಟಗಾರರಿಗೆ ಸಿಕ್ಕಿಲ್ಲ. ಅದಕ್ಕೆ ಮೂಲ ಕಾರಣ, ಎಸಿಸಿ ಮುಖ್ಯಸ್ಥ ಮೊಹ್ಸಿನ್ ನಖ್ವಿಯ ನಡೆ.

ಫೈನಲ್​ಗೆ ಬರುವ ಮೊದಲೇ ನಾವು ಫೈನಲ್​ನಲ್ಲಿ ಗೆದ್ದರೆ, ಖಂಡಿತ ಮೊಹ್ಸಿನ್ ನಖ್ವಿ ಅವರಿಂದ ಟ್ರೋಫಿಯನ್ನು ಸ್ವೀಕರಿಸುವುದಿಲ್ಲ ಎಂದು ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಹೇಳಿದ್ದರು. ಅಂತೆಯೇ, ಅಂತಿಮ ಹಣಾಹಣಿಯಲ್ಲಿ ಪಾಕ್​ನ ಮಣಿಸಿದ ಭಾರತ ತಂಡ, ಟ್ರೋಫಿಯನ್ನು ಪಡೆಯಲು ವೇದಿಕೆ ಮೇಲೆ ಹೋಗಲಿಲ್ಲ. ಬದಲಿಗೆ ಮೈದಾನದಲ್ಲೇ ಮೊಬೈಲ್ ನೋಡುತ್ತ ಕುಳಿತ್ತಿತ್ತು. ಇದು ಮೊಹ್ಸಿನ್​ ನಖ್ವಿ ಕೋಪಕ್ಕೆ ಕಾರಣವಾಯಿತು. ಕೂಡಲೇ ಏಷ್ಯಾಕಪ್ ಟ್ರೋಫಿ ಮತ್ತು ಮೆಡಲ್​ಗಳನ್ನು ತನ್ನೊಂದಿಗೆ ಹೊತ್ತೊಯ್ದ ನಖ್ವಿ, ಇಲ್ಲಿಯವರೆಗೂ ಅದನ್ನು ಆಟಗಾರರಿಗೆ ವಾಪಾಸ್​ ಕೊಡದೆ, ಷರತ್ತು ವಿಧಿಸಿರುವುದು ಸದ್ಯ ಬಿಸಿಸಿಐ ಪಿತ್ತವನ್ನು ನೆತ್ತಿಗೇರಿಸಿದೆ.

ಈ ಮಧ್ಯೆ ಮತ್ತೊಂದು ಟೀಮ್ ಇಂಡಿಯಾವನ್ನು ದೂಷಿಸಿ ಮಾತನಾಡಿರುವ ನಖ್ವಿ, ಫೈನಲ್​ ಪಂದ್ಯದ ವೇದಿಕೆಯಲ್ಲಿ ಸೂರ್ಯಕುಮಾರ್ ಯಾದವ್ ಮತ್ತು ಅವರ ಆಟಗಾರರು ನನ್ನನ್ನು ಕಾರ್ಟೂನ್ ರೀತಿ ಮಾಡಿದ್ರು. ನನ್ನಿಂದ ಭಾರತ ತಂಡ ಟ್ರೋಫಿಯನ್ನು ಪಡೆಯುವುದಿಲ್ಲ ಎಂಬ ವಿಚಾರದ ಬಗ್ಗೆ ನನಗ್ಯಾರು ಮಾಹಿತಿ ನೀಡಿಲ್ಲ. ಈ ಕುರಿತಾಗಿ ಬಿಸಿಸಿಐ ಕೂಡ ಸ್ಪಷ್ಟವಾಗಿ ತಿಳಿಸಿಲ್ಲ. ಹೀಗಾಗಿ, ಟ್ರೋಫಿಯನ್ನು ಹಸ್ತಾಂತರಿಸಲು ನಾನು ವೇದಿಕೆಗೆ ಹೋದೆ. ಆದರೆ, ಟೀಮ್ ಇಂಡಿಯಾ ಆಟಗಾರರು ನನ್ನನ್ನು ನಡೆಸಿಕೊಂಡ ರೀತಿ ನನಗೆ ಇಷ್ಟವಾಗಲಿಲ್ಲ ಎಂದಿದ್ದಾರೆ.

ನಖ್ವಿಯ ಈ ಮಾತಿಗೆ ಸಿಡಿದೆದ್ದ ಬಿಸಿಸಿಐ, ​ಈ ವಿಚಾರವಾಗಿ ನಾವು ಐಸಿಸಿಗೆ ದೂರ ನೀಡಿದ್ದೇವೆ. ಶೀಘ್ರವೇ ನಮಗೆ ಟ್ರೋಫಿ ಮತ್ತು ಮೆಡಲ್​ಗಳು ಹಸ್ತಾಂತರವಾಗಬೇಕು. ಟ್ರೋಫಿ ಮತ್ತು ಮೆಡಲ್​ಗಳು ನಖ್ವಿ ಮನೆಯ ಆಸ್ತಿಯಲ್ಲ. ಏಷ್ಯಾಕಪ್​ ಟ್ರೋಫಿಯನ್ನು ದುಬೈನಲ್ಲಿರುವ ಎಸಿಸಿ ಕಚೇರಿಯಲ್ಲಿ ಇರಿಸಿ, ಅಲ್ಲಿಂದ ನಾವು ಅದನ್ನು ಟೀಮ್ ಇಂಡಿಯಾಗೆ ತಲುಪಿಸುತ್ತೇವೆ ಎಂದು ಖಡಕ್​ ಆಗಿ ತಿಳಿಸಿದೆ,(ಏಜೆನ್ಸೀಸ್).