ಅಮೆರಿಕ ನಿನ್ನನ್ನು ತುಂಬಾ ಪ್ರೀತಿಸುತ್ತೇನೆ: ಇದು ಭಾರತದ ನಾರಿಯ ವಿದಾಯದ ಕಣ್ಣೀರಿನ ಕಥೆ | Indian Woman

untitled-design-2025-10-01t120500794-68dccb9e5b4f6
Published on

Indian Woman: ತಿಂಗಳುಗಟ್ಟಲೆ ಉದ್ಯೋಗ ಹುಡುಕಾಟ ನಡೆಸಿದರೂ ಸೂಕ್ತ ಉದ್ಯೋಗ ಸಿಗದ ಕಾರಣ ಅಮೆರಿಕವನ್ನು ತೊರೆಯುತ್ತಿರುವ ಭಾರತೀಯ ಮಹಿಳೆ ಅನನ್ಯ ಜೋಶಿಯ ಕಣ್ಣೀರಿನ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ಎಲ್ಲೆಡೆ ವೈರಲ್​ ಆಗಿದೆ.

ಸೋಮವಾರ (ಸೆಪ್ಟೆಂಬರ್ 29) ಅನನ್ಯ ಅಮೆರಿಕವನ್ನು ನಿರ್ಗಮಿಸುತ್ತಿದ್ದು, ಕಣ್ಣೀರು ಹಾಕುತ್ತಾ ಅಮೆರಿಕಕ್ಕೆ ಕೃತಜ್ಞತೆ ತಿಳಿಸಿದ್ದಾರೆ. ಹಾಗೆಯೇ ದೇಶವನ್ನು ತೊರೆಯುವುದು ತಮ್ಮ ಪ್ರಯಾಣದಲ್ಲಿ ಅತ್ಯಂತ ಕಠಿಣ ಹೆಜ್ಜೆ ಇದಾಗಿದೆ. ಆರ್ಥಿಕವಾಗಿ ಸ್ವತಂತ್ರ ವಯಸ್ಕರಾಗಿ ಅಮೆರಿಕ ನನ್ನ ಮೊದಲ ಮನೆ ಎಂದು ಭಾವನಾತ್ಮಕವಾಗಿ ಪೋಸ್ಟ್ ಮಾಡಿದ್ದಾರೆ.

ನನ್ನ ಇಲ್ಲಿಯವರೆಗಿನ ಪ್ರಯಾಣದಲ್ಲಿ ಇದು ಅತ್ಯಂತ ಕಠಿಣ ಹೆಜ್ಜೆ ಇದಾಗಿದೆ. ನಾನು ವಾಸ್ತವವನ್ನು ಒಪ್ಪಿಕೊಂಡಂತೆ ತೋರುತ್ತಿದ್ದರು. ಇಲ್ಲಿಂದ ಹೊರಡಲು ನಾನು ಸಾಧ್ಯವಿಲ್ಲ. ನೀವು ನನಗೆ ನೀಡಿದ ಜೀವನವನ್ನು ನಾನು ನಿಜವಾಗಿಯೂ ಪ್ರಶಂಶಿಸುತ್ತೇನೆ. ಅಮೆರಿಕ ನಾನು ನಿನ್ನನ್ನು ಪ್ರೀತಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

2024 ರಲ್ಲಿ ನಾರ್ತ್‌ವೆಸ್ಟರ್ನ್ ವಿಶ್ವವಿದ್ಯಾಲಯದಿಂದ ಜೈವಿಕ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆದ ಜೋಶಿ, F-1 ಐಚ್ಛಿಕ ಪ್ರಾಯೋಗಿಕ ತರಬೇತಿ ಕಾರ್ಯಕ್ರಮದ ಮೂಲಕ ಬಯೋಟೆಕ್ ಸ್ಟಾರ್ಟ್‌ಅಪ್‌ನಲ್ಲಿ ಕೆಲಸದ ಅನುಭವವನ್ನು ಪಡೆದಿದ್ದರು. ಇತ್ತೀಚೆಗೆ ಆಕೆಯನ್ನು ಆ ಕಂಪನಿಯಿಂದ ವಜಾಗೊಳಿಸಿದ ನಂತರ ಹೊಸ ಉದ್ಯೋಗವನ್ನು ಹುಡುಕಲು ಆರಂಭಿಸಿದರು.

ಕಂಪನಿಯಾದ್ಯಂತದ ಕಡಿತದ ಭಾಗವಾಗಿ ನನ್ನ ಹಿಂದಿನ ಕೆಲಸದಿಂದ ನನ್ನನ್ನು ವಜಾಗೊಳಿಸಲಾಗಿದೆ. ನಾನು ನನ್ನ ಮುಂದಿನ ಅವಕಾಶವನ್ನು ಹುಡುಕುತ್ತಿಲ್ಲ. ನನ್ನ STEM OPT ಗಡಿಯಾರವು ಟಿಕ್ ಟಿಕ್ ಎಂದು ಸಮಯವನ್ನು ಎಚ್ಚರಿಸುತ್ತಿದ್ದು, US ನಲ್ಲಿ ಉಳಿಯಲು ಮುಂದಿನ ತಿಂಗಳೊಳಗೆ ನಾನು ಒಂದು ಕೆಲಸವನ್ನು ಪಡೆದುಕೊಳ್ಳಬೇಕಾಗಿದೆ ಎಂದು ಅವರು ನಾಲ್ಕು ತಿಂಗಳ ಹಿಂದೆ LinkedIn ಪೋಸ್ಟ್‌ನಲ್ಲಿ ಬರೆದಿದ್ದಾರೆ.

ಆಕೆಯ ಸತತ ಪ್ರಯತ್ನಗಳ ಹೊರತಾಗಿಯೂ ಆಕೆಗೆ ಸೂಕ್ತವಾದ ಉದ್ಯೋಗ ಸಿಗಲಿಲ್ಲ. ಇದರಿಂದಾಗಿ ಅವರು ದೇಶವನ್ನು ತೊರೆದು ಬೇರೆಡೆ ಹೊಸ ಅವಕಾಶವನ್ನು ಹುಡುಕಾಡುವ ನಿರ್ಧಾರಕ್ಕೆ ಬಂದಿದ್ದೇನೆ ಎಂದು ತಿಳಿಸಿದ್ದಾರೆ. (ಏಜೆನ್ಸೀಸ್​)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net