Asia Cup 2025: ಸೆ.14ರಂದು ದುಬೈ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಭಾರತ ಎದುರು ಮಂಡಿಯೂರಿದ ಪಾಕಿಸ್ತಾನ, ನಮ್ಮ ಆಗ್ರಹಕ್ಕೆ ಐಸಿಸಿ ಸ್ಪಂದಿಸದಿದ್ದರೆ ಏಷ್ಯಾಕಪ್ ಟೂರ್ನಿಯಿಂದ ಹೊರಹೋಗ್ತೀವಿ ಎಂದಿತ್ತು. ಹೀಗೆ ಹೇಳಿ 24 ಗಂಟೆಗಳು ಸಹ ಕಳೆದಿಲ್ಲ. ಅಷ್ಟು ಬೇಗ ತನ್ನ ನಿರ್ಧಾರವನ್ನು ಬದಲಿಸಿದೆ. ಸದ್ಯ ಇದೇ ಹಲವರ ಟೀಕೆ, ಟಿಪ್ಪಣಿಗೆ ಕಾರಣವಾಗಿದೆ.
ಇದನ್ನೂ ಓದಿ: ಈ ವಾರ ಒಟಿಟಿಗೆ ಎಂಟ್ರಿಕೊಟ್ಟ ಚಿತ್ರಗಳಿವು! ಯಾವೆಲ್ಲ ಸಿನಿಮಾಗಳು ರಿಲೀಸ್? ಇಲ್ಲಿದೆ ಪಟ್ಟಿ | OTT Films
ಟೀಮ್ ಇಂಡಿಯಾ ವಿರುದ್ಧ ಹೀನಾಯ ಸೋಲುಂಡ ಪಾಕ್ಗೆ ತಮ್ಮ ದೇಶದಿಂದಲೇ ವ್ಯಾಪಕ ಛೀಮಾರಿ, ಟೀಕೆಗಳು ವ್ಯಕ್ತವಾಯಿತು. ಇದರ ಮಧ್ಯೆ ಪಂದ್ಯಕ್ಕೂ ಮೊದಲು ಮತ್ತು ಗೆದ್ದ ಬಳಿಕ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್, ಎದುರಾಳಿ ತಂಡದ ಆಟಗಾರರೊಂದಿಗೆ ಹಸ್ತಲಾಘವ ಮಾಡಲಿಲ್ಲ. ಈ ನಡೆಯಿಂದ ತೀರ ಅಸಮಾಧಾನಗೊಂಡ ಪಾಕ್, ಟಾಸ್ ಸಮಯದಲ್ಲಿ ಎರಡು ತಂಡಗಳ ನಾಯಕರಿಂದ ಕೈಕುಲಕುವ ಸಂಪ್ರದಾಯವನ್ನು ಅಂಪೈರ್ ಮಾಡಬೇಕಿತ್ತು. ಆದರೆ, ಅವರಿಂದ ಅದು ಆಗಿಲ್ಲ. ಹೀಗಾಗಿ, ಐಸಿಸಿ ಕೂಡಲೇ ಮುಂಬರುವ ಪಂದ್ಯಗಳಿಂದ ಅಂಪೈರ್ನನ್ನು ಕಿತ್ತುಬಿಸಾಡಬೇಕು ಎಂದು ಆಗ್ರಹಿಸಿತು. ಇದಕ್ಕೆ ಕಿಂಚಿತ್ತು ಒತ್ತುಕೊಡದ ಐಸಿಸಿ, ಪಾಕಿಸ್ತಾನ ಮನವಿಯನ್ನು ಕಡೆಗಣಿಸಿತು.
ಪಂದ್ಯದ ಅಂಪೈರ್ ಆ್ಯಂಡಿ ಪೈಕ್ರೊಫ್ಟ್ಸ್ ವಜಾಗೊಳಿಸುವಿಕೆ ಮನವಿಯನ್ನು ಪರಿಗಣಿಸದ ಐಸಿಸಿ ವಿರುದ್ಧ ಕಿಡಿಕಾರಿದ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಇಷ್ಟೆಲ್ಲ ಆದ ಮೇಲೆ ಏಷ್ಯಾಕಪ್ನಲ್ಲಿ ಮುಂದುವರಿಯಲು ನಮಗೆ ಆಸಕ್ತಿಯಿಲ್ಲ ಎಂದು ತಿಳಿಸಿತು. ಮೊದಲಿಗೆ, ಮುಂಬರುವ ಯುಎಇ ಪಂದ್ಯವನ್ನು ಆಡಲು ಬಯಸುವುದಿಲ್ಲ ಎಂದಿದ್ದ ಪಾಕ್, ನಂತರದಲ್ಲಿ ಟೂರ್ನಿಯಿಂದ ಹೊರಗುಳಿಯುವುದಾಗಿ ಎಚ್ಚರಿಸಿತು. ಇದೀಗ ಈ ನಿರ್ಧಾರದಿಂದಲೂ ದಿಢೀರ್ ಯೂ-ಟರ್ನ್ ಹೊಡೆದಿರುವ ಪಿಸಿಬಿ, ಐಸಿಸಿ ವಿಧಿಸುವ ಸಂಭವನೀಯ ನಿರ್ಬಂಧಕ್ಕೆ ಹೆದರಿ, ಹೊರಹೋಗುವ ನಿಲುವನ್ನು ಬದಲಿಸಿದೆ,(ಏಜೆನ್ಸೀಸ್).