ಕ್ರೀಡೆ

ಚಿನ್ನದ ಹುಡುಗ ಅರ್ಷದ್​​ ನದೀಮ್​ಗೆ ಉಡುಗೊರೆಯಾಗಿ ಬಂದ ಕಾರಿನ ವಿಶೇಷತೆ ಏನು ಗೊತ್ತಾ?

ಇಸ್ಲಾಮಾಬಾದ್​​: ಇತ್ತೀಚೆಗೆ ಮುಕ್ತಾಯಗೊಂಡ ಪ್ಯಾರಿಸ್​ ಒಲಿಂಪಕ್ಸ್​​ನಲ್ಲಿ ಚಿನ್ನದ ಪದಕ ಗೆದ್ದ ಜಾವೆಲಿನ್​ ಥ್ರೋ ಚಾಂಪಿಯನ್​ ಅರ್ಷದ್​ ನದೀಮ್​ ಅವರಿಗೆ ಸಾಕಷ್ಟು ಉಡುಗೊರೆಗಳ ಮಹಾಪೂರವೆ ಹರಿದು ಬರುತ್ತಿದೆ. ಅದರಲ್ಲಿ ಅರ್ಷದ್ ನದೀಮ್​ ಸಾಧನೆಗೆ ಮೆಚ್ಚಿ ಪಂಜಾಬ್​ ಸರ್ಕಾರ ಅವರಿಗೆ ಮಂಗಳವಾರ(ಆಗಸ್ಟ್​​ 13) 1 ಕೋಟಿ ರೂಪಾಯಿ ಹಾಗೂ ಹೊಸ ಕಾರನ್ನು ನೀಡಿದೆ.

ಅರ್ಷದ್​​ ನದೀಮ್ ಮತ್ತು ಅವರ ಕುಟುಂಬವನ್ನು ಭೇಟಿ ಮಾಡಲು ಮಿಯಾನ್​​ ಚುನ್ನುನಲ್ಲಿರುವ ಅವರ ಗ್ರಾಮಕ್ಕೆ ​ಪಂಜಾಬ್​ ಮುಖ್ಯಮಂತ್ರಿ ಮರ್ಯಮ್​ ನವಾಜ್​ ಹೋದಾಗ ನಗದು ಬಹುಮಾನ ಮತ್ತು ಕಾರಿನ ಕೀಯನ್ನು ಹಸ್ತಾಂತರಿಸಿದರು. ಬಳಿಕ ಮಾತನಾಡಿದದ ಅವರು ಅರ್ಷದ್​​ ಈ ಎಲ್ಲ ಸನ್ಮಾನವನ್ನು ಪಡೆಯಲು ಅರ್ಹರಾಗಿದ್ದಾರೆ. ಏಕೆಂದರೆ ಅವರು ಅವರ ರಾಷ್ಟ್ರಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಹೇಳಿದರು.

40 ವರ್ಷಗಳಲ್ಲಿ ಪಾಕಿಸ್ತಾನಕ್ಕೆ ಮೊದಲ ವೈಯಕ್ತಿಕ ಒಲಿಂಪಿಕ್​ ಚಿನ್ನದ ಪದಕ ಗೆದ್ದುಕೊಂಡರು ಮಾತ್ರವಲ್ಲದೆ, ಆಗಸ್ಟ್ 8ರಂದು ಪ್ಯಾರಿಸ್‌ನಲ್ಲಿ ಚಿನ್ನ ಗೆದ್ದಾಗ ಅರ್ಷದ್​ ನದೀಮ್​ ಜಾವೆಲಿನ್​ ಅನ್ನು 92.97 ಮೀಟರ್​​ ಎಸೆಯುವ ಮೂಲಕ ಹೊಸ ಒಲಿಂಪಿಕ್ ದಾಖಲೆ ಸೃಷ್ಟಿಸಿದರು. ಈ ಸಾಧನೆಯ ಗುರುತಾಗಿ ನೀಡಿರವು ಕಾರಿನಲ್ಲೂ ವಿಶೇಷತೆ ಇದೆ.

ಅರ್ಷದ್​​ ನದೀಮ್​ ಅವರಿಗೆ ಹಸ್ತಾಂತರಿಸಿದ ಕಾರನ್ನು ವಿಶೇಷವಾಗಿ ನೋಂದಾಯಿಸಲಾಗಿದೆ. ಅದೆನೆಂದರೆ ಅರ್ಷದ್ ಅವರ ಕಾರಿನ ಸಂಖ್ಯೆ PAK-92.97. ಒಲಿಂಪಿಕ್​ನಲ್ಲಿ ಅವರ ಮೇಕಿಂಗ್​ ಥ್ರೋ ಹಾಗೂ ಅವರ ಕಾರಿನ ಸಂಖ್ಯೆ ಎರಡು ಒಂದೆ ಆಗಿದೆ.

ಇದಲ್ಲದೆ ಮರ್ಯಮ್​ ನವಾಜ್ ಅವರು ಅರ್ಷದ್​ ಕೋಚ್​​ ಸಲ್ಮಾನ್​ ಇಕ್ಬಾಲ್​ ಬಟ್​ ಅವರಿಗೆ 50 ಲಕ್ಷ ರೂಪಾಯಿ ಚೆಕ್​ ಹಸ್ತಾಂತರಿಸಿ, ಅವರು ನೀಡಿದ ತರಬೇತಿಯನ್ನು ಶ್ಲಾಷಿಸಿದ್ದಾರೆ. (ಏಜೆನ್ಸೀಸ್​)