ಬೆಂಗಳೂರು: ಕರ್ನಾಟಕದ ಆಟಗಾರ್ತಿ ಅರ್ಚನಾ ಕಾಮತ್ ವಡೋದರದಲ್ಲಿ ನಡೆದ ರಾಷ್ಟ್ರೀಯ ರ್ಯಾಂಕಿಂಗ್ ಟೇಬಲ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಮಹಿಳಾ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿದ್ದಾರೆ.
ಪಿಎಸ್ಪಿಬಿ ಪ್ರತಿನಿಧಿಸಿದ ಅರ್ಚನಾ ಶುಕ್ರವಾರ ನಡೆದ ಫೈನಲ್ ಪಂದ್ಯದಲ್ಲಿ ಆರ್ಬಿಐ ತಂಡದ ಐಹಿಕಾ ಮುಖರ್ಜಿ ವಿರುದ್ಧ 4-0ಯಿಂದ ಗೆದ್ದರು. ಇದಕ್ಕೆ ಮುನ್ನ ಸೆಮೀಸ್ನಲ್ಲಿ ತಮಿಳುನಾಡಿನ ಕಾವ್ಯಶ್ರೀ ಭಾಸ್ಕರ್ ಮತ್ತು ಕ್ವಾರ್ಟರ್ಫೈನಲ್ನಲ್ಲಿ ಅಗ್ರ ಶ್ರೇಯಾಂಕಿತೆ ಶ್ರೀಜಾ ಅಕುಲಾ ಎದುರು ಗೆಲುವು ಸಾಧಿಸಿದ್ದರು.
ಅರ್ಚನಾ ಕಾಮತ್ ಇತ್ತೀಚೆಗೆ ಗೋವಾದಲ್ಲಿ ನಡೆದ 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕವನ್ನು ಪ್ರತಿನಿಧಿಸಿ ಚಿನ್ನದ ಪದಕವನ್ನು ಗೆದ್ದುಕೊಂಡಿದ್ದರು.