ಕ್ರೀಡೆ

Paris Olympics 2024: ಅಶಿಸ್ತು ಪ್ರದರ್ಶಿಸಿದ ಕುಸ್ತಿಪಟು ಅಂತಿಮ್ ಪಂಘಲ್​ಗೆ 3 ವರ್ಷ ನಿಷೇಧ!

ಪ್ಯಾರೀಸ್​: ಪ್ಯಾರಿಸ್ ಒಲಿಂಪಿಕ್​​ನಲ್ಲಿ ಭಾರತದ ಕುಸ್ತಿಪಟು ವಿನೇಶ್‌ ಫೋಗಟ್‌ ಅವರು ಮಹಿಳೆಯರ 50 ಕೆಜಿ ವಿಭಾಗದಿಂದ ಅನರ್ಹಗೊಂಡಿದ್ದಾರೆ. ಇದರ ಬೆನ್ನಲ್ಲೇ ಇದೀಗ ಮತ್ತೊಬ್ಬ ಕುಸ್ತಿಪಟು ಒಲಿಂಪಕ್​​​​​​ನಿಂದ ಹೊರಗೆ ಕಳಿಸಿದೆ.

ಹೌದು...ಪ್ಯಾರೀಸ್ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಅಶಿಸ್ತು ಪ್ರದರ್ಶಿಸಿದ ಭಾರತದ ಕುಸ್ತಿಪಟು ಅಂತಿಮ್ ಪಂಘಲ್ ಅವರಿಗೆ ಭಾರತೀಯ ಒಲಿಂಪಿಕ್ಸ್ ಸಂಸ್ಥೆ 3 ವರ್ಷಗಳ ಕಾಲ ನಿಷೇಧ ಹೇರುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿರುವುದಾಗಿ ಪಿಟಿಐ ವರದಿ ಮಾಡಿದೆ.

ತನ್ನ ಅಕ್ರೆಡಿಟೇಶನ್ ಕಾರ್ಡ್ ಮೂಲಕ ತಮ್ಮ ಸಹೋದರಿಗೆ ಅಥ್ಲೀಟ್‌ಗಳ ಗ್ರಾಮಕ್ಕೆ ಪ್ರವೇಶವನ್ನು ಸುಲಭಗೊಳಿಸಲು ಪ್ರಯತ್ನಿಸುವ ಮೂಲಕ ಭಾರತೀಯ ಒಲಿಂಪಿಕ್ ತಂಡಕ್ಕೆ ಮುಜುಗರ ಉಂಟುಮಾಡಿದ ಹಿನ್ನೆಲೆಯಲ್ಲಿ ಕುಸ್ತಿಪಟು ಆಂಟಿಮ್ ಪಂಗಲ್ ಅವರ ವಿರುದ್ಧ ಐಒಎ ಕ್ರಮ ಕೈಗೊಳ್ಳಲಿದೆ ಎಂದು ತಿಳಿದು ಬಂದಿದೆ.

ಬುಧವಾರ (ಆಗಸ್ಟ್ 7) ನಡೆದ ಮಹಿಳೆಯರ 53 ಕೆಜಿ ವಿಭಾಗದ ಆರಂಭಿಕ ಬೌಟ್​ನಲ್ಲೇ ಸೋತು ಕ್ರೀಡಾಕೂಟದಂದ ನಿರ್ಗಮಿಸಿದ್ದರು.

ಕುಸ್ತಿಪಟು ಅಂತಿಮ್ ಪಂಘಲ್ ಅವರು ಭಾರತಕ್ಕೆ ಆಗಮಿಸಿದ ಬಳಿಕ ನಿಷೇಧದ ಕುರಿತಂತೆ ಆದೇಶ ಹೊರಬರಲಿದೆ ಎಂದು ಮೂಲಗಳು ತಿಳಿಸಿವೆ.

ಪಂಘಲ್ ಅಶಿಸ್ತು ಕುರಿತಂತೆ ಫ್ರೆಂಚ್ ಅಧಿಕಾರಿಗಳು ಭಾರತೀಯ ಒಲಿಂಪಿಕ್ ಅಸೋಸಿಯೇಷನ್ ಗಮನಕ್ಕೆ ತಂದಿದ್ದು, ಪಂಘಾಲ್ ಮತ್ತು ಅವರ ಸಹಾಯಕ ಸಿಬ್ಬಂದಿಗೆ ನಿಷೇಧ ಹೇರಲು ಐಒಎ ಮುಂದಾಗಿದೆ.

ಬುಧವಾರ 53 ಕೆ.ಜಿ. ವಿಭಾಗದ ಆರಂಭಿಕ ಬೌಟ್​ನಲ್ಲೇ ಸೋತ ಬಳಿಕ ಅಂತಿಮ್ ಫಂಘಾಲ್ ಅಥ್ಲೆಟ್ಸ್​ ವಿಲೇಜ್​ಗೆ ತೆರಳದೆ ತನ್ನ ಕೋಚ್​ಗಳಿದ್ದ ಹೋಟೆಲ್​​ಗೆ ಬಂದಿದ್ದರು. ಆದರೆ ಅಂತಿಮ್ ಫಂಘಾಲ್ ಗೇಮ್ಸ್ ವಿಲೇಜ್‌ನಲ್ಲಿ ತಮ್ಮ ಬ್ಯಾಗ್​​​ ಬಿಟ್ಟ ಕಾರಣ, ತನ್ನ ಸಹೋದರಿ ನಿಶಾ ಅವರಿಗೆ ತಮ್ಮ ಕಾರ್ಡ್‌ ನೀಡಿ ಬ್ಯಾಗ್​​ ತರಲು ಹೇಳಿದ್ದಾರೆ. ಆದರೆ ಸಹೋದರಿಯನ್ನು ಪ್ರವೇಶದ ಸಂದರ್ಭದಲ್ಲಿ ಹಿಡಿದ ಭದ್ರತಾ ಸಿಬ್ಬಂದಿ ಸ್ಥಳೀಯ ಪೊಲೀಸ್​ ಠಾಣೆಗೆ ಕರೆದೊಯ್ದು ಹೇಳಿಕೆ ದಾಖಲಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.