ಚೆನ್ನೈ: ಇಲ್ಲಿನ ಎಂ.ಎ. ಚಿದಂಬರಂ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಹಾಗೂ ಬಾಂಗ್ಲಾದೇಶ ನಡುವಿನ ಟೆಸ್ಟ್ ಸರಣಿಯ ಮೊದಲ ಪಂದ್ಯದಲ್ಲಿ ಪ್ರವಾಸಿ ತಂಡದ ಬಿಗಿ ಬೌಲಿಂಗ್ ದಾಳಿಗೆ ಆತಿತೇಯರು ದಿಟ್ಟ ಪ್ರತಿರೋಧ ತೋರಿದ್ದು, ಬೃಹತ್ ಸ್ಕೋರ್ನತ್ತ ದಾಪುಗಾಲಿಟ್ಟಿದ್ದಾರೆ. ಆಲ್ರೌಂಡರ್ಗಳಾದ ರವೀಂದ್ ಜಡೇಜಾ ಹಾಗೂ ಆರ್. ಅಶ್ವಿನ್ ಕ್ರೀಸ್ನಲ್ಲಿದ್ದು, ಭಾರತಕ್ಕೆ ಚೇತರಿಕೆ ನೀಡಿದ್ದಾರೆ. ಆದರೆ, ರವೀಂದ್ರ ಜಡೇಜಾ ಮಾತ್ರ ಬ್ಯಾಟಿಂಗ್ ಮಾತ್ರವಲ್ಲದೇ ಈ ಒಂದು ಕಾರಣಕ್ಕೆ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾಗಿದ್ದು, ಕ್ರೀಡಾ ವಲಯದಲ್ಲಿ ಸಖತ್ ಸೌಂಡ್ ಮಾಡುತ್ತಿದ್ದಾರೆ.
ಬಾಂಗ್ಲಾದೇಶ ವಿರುದ್ಧದ ಸರಣಿಯ ಮೊದಲ ಪಂದ್ಯಕ್ಕೆ ಭಾರತ ತಂಡದ ಪ್ಲೇಯಿಂಗ್ 11 ಪ್ರಕಟವಾಗುತ್ತಿದ್ದಂರೆ ರವೀಂದ್ರ ಜಡೇಹಜಾ ಎಲ್ಲರ ಗಮನ ಸೆಳದರು. ಏಕೆಂದರೆ ಸಕ್ರಿಯ ಬಿಜೆಪಿ ಸದಸ್ಯರೊಬ್ಬರು ಭಾರತದ ಪರ ಟೆಸ್ಟ್ ಪಂದ್ಯವಾಡಿದ ಮೊಲದ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ವಿಶಿಷ್ಟ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಈ ಮೂಲಕ ಕ್ರೀಡಾ ವಲಯದಲ್ಲಿ ಎಲ್ಲರ ಗಮನ ಸೆಳೆಯುವಲ್ಲಿ ಯಶಸ್ವಿಯಾದರು.
ಇದನ್ನೂ ಓದಿ: ನಾಗಮಂಗಲ ಗಲಭೆ; ವಿಪಕ್ಷ ನಾಯಕರ ಮೇಲೆ FIR ಹಾಕಿರುವುದು ಹೇಡಿತನದ ಪರಮಾವಧಿ: ಸರ್ಕಾರದ ವಿರುದ್ಧ ಅಶೋಕ್ ಕಿಡಿ
ಈ ಹಿಂದೆ ಸೆಪ್ಟೆಂಬರ್ 3 ರಂದು ಜಡೇಜಾ ಅವರ ಪತ್ನಿ ರಿವಾಬಾ ಸಾಮಾಜಿಕ ಜಾಲತಾಣದಲ್ಲಿ ಸದಸ್ಯತ್ವ ಅಭಿಯಾನದ ಮೂಲಕ ತಮ್ಮ ಪತಿ ರವೀಂದ್ರ ಬಿಜೆಪಿ ಸೇರಿರುವುದಾಗಿ ಫೋಟೋವನ್ನು ಹಂಚಿಕೊಂಡಿದ್ದರು. ಇದರ ಬೆನ್ನಲ್ಲೇ ಅವರು ಟೆಸ್ಟ್ ಮಾದರಿಗೆ ನಿವೃತ್ತಿ ಘೋಷಿಸುತ್ತಾರೆ ಎಂದು ಹೇಳಲಾಗಿತ್ತಾದರೂ ಇದೀಗ ಭಾರತದ ಪರ ಆಡುವ ಮೂಲಕ ಮತ್ತೊಂದು ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ 300 ವಿಕೆಟ್ ಪಡೆದು 3,000 ರನ್ ಗಳಿಸಿರುವ ಅಗ್ರ 10 ಆಟಗಾರರ ಪಟ್ಟಿಯಲ್ಲಿ ರವೀಂದ್ರ ಜಡೇಜಾ ಕೂಡ ಸ್ಥಾನ ಪಡೆದಿದ್ದಾರೆ. ಪ್ರಸ್ತುತ, ಕಪಿಲ್ ದೇವ್ ಮತ್ತು ರವಿಚಂದ್ರನ್ ಅಶ್ವಿನ್ ಅವರ ಹೆಸರಿನಲ್ಲಿರುವ ಸಾಧನೆಯನ್ನು ಜಡೇಜಾಗೆ ಆರು ವಿಕೆಟ್ಗಳ ಅವಶ್ಯಕತೆಯಿದ್ದು, ಬಾಂಗ್ಲಾ ವಿರುದ್ಧದ ಸರಣಿಯಲ್ಲಿ ಇದು ಸಾಧ್ಯವಾಗಿಸಲಿದ್ದಾರಾ ಎಂದು ಕಾದು ನೋಡಬೇಕಿದೆ.