ಕ್ರೀಡೆ

ಗುಜರಾತ್​ ಜೈಂಟ್ಸ್ ಎದುರು ಗೆದ್ದ ಡೆಲ್ಲಿ ಕ್ಯಾಪಿಟಲ್ಸ್; ಡಬ್ಲ್ಯುಪಿಎಲ್​ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಲಗ್ಗೆ

ವಿಜಯವಾಣಿ ಸುದ್ದಿಜಾಲ ಬೆಂಗಳೂರು

ಆಸೀಸ್​ನ ಜೆಸ್​ ಜೊನಾಸೆನ್​ (61* ರನ್​, 32 ಎಸೆತ, 9 ಬೌಂಡರಿ, 2 ಸಿಕ್ಸರ್​, 24ಕ್ಕೆ 1 ವಿಕೆಟ್​) ಆಲ್ರೌಂಡ್​ ನಿರ್ವಹಣೆಯ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್​ ತಂಡ ಮೂರನೇ ಆವೃತ್ತಿಯ ವುಮೆನ್ಸ್​ ಪ್ರೀಮಿಯರ್​ ಲೀಗ್​ನಲ್ಲಿ (ಡಬ್ಲುಪಿಎಲ್​) ಗುಜರಾತ್​ ಜೈಂಟ್ಸ್​ ಎದುರು 6 ವಿಕೆಟ್​ಗಳ ಸುಲಭ ಗೆಲುವು ದಾಖಲಿಸಿದೆ. ಇದರೊಂದಿಗೆ ಮೆಗ್​ ಲ್ಯಾನಿಂಗ್​ ಬಳಗ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿದ ಗುಜರಾತ್​ ಜೈಂಟ್ಸ್​ ದ. ಆಫ್ರಿಕಾ ತಾರೆ ಮಾರಿಜಾನ್ನೆ ಕಾಪ್​ (17ಕ್ಕೆ 2) ಹಾಗೂ ಶಿಖಾ ಪಾಂಡೆ (18ಕ್ಕೆ 2) ದಾಳಿಗೆ ತತ್ತರಿಸಿ 60 ರನ್​ಗಳಿಗೆ 6 ವಿಕೆಟ್​ ಕೈ ಚೆಲ್ಲಿತು.ನಂತರ ಭಾರತಿ ಫುಲ್​ಮಲಿ (40* ರನ್​, 29 ಎಸೆತ, 4 ಬೌಂಡರಿ, 2 ಸಿಕ್ಸರ್​) ಆಸರೆಯಲ್ಲಿ ಅಂತಿಮವಾಗಿ 9 ವಿಕೆಟ್​ಗೆ 127 ರನ್​ಗಳ ಗೌರವಯುತ ಮೊತ್ತ ಪೇರಿಸಿತು. ಪ್ರತಿಯಾಗಿ ಶೆಫಾಲಿ ವರ್ಮ (44) ಹಾಗೂ ಜೊನಾಸೆನ್​ ನಡೆಸಿದ ಜತೆಯಾಟದ ಬಲದಿಂದ ಡೆಲ್ಲಿ ಕ್ಯಾಪಿಟಲ್ಸ್​ 15.1 ಓವರ್​ಗಳಲ್ಲಿ 4 ವಿಕೆಟ್​ಗೆ 131 ರನ್​ಗಳಿಸಿ ಗೆದ್ದು ಬೀಗಿತು. ಡೆಲ್ಲಿ ಕ್ಯಾಪಿಟಲ್ಸ್​ಗೆ ಇದು ಟೂರ್ನಿಯ ಒಟ್ಟಾರೆ ಮೂರನೇ ಗೆಲುವಾಗಿದೆ.

ಗುಜರಾತ್​ ಜೈಂಟ್ಸ್​: 9 ವಿಕೆಟ್​ಗೆ 127 (ಬೆಥ್​ ಮೂನಿ 10, ಹರ್ಲೀನ್​ ಡಿಯೋಲ್​ 5, ಲಿಚ್ಛೀಫಿಲ್ಡ್​ 0, ಆಶ್ಲೇ ಗಾರ್ಡ್​ನರ್​ 3, ಕಾಶ್ವಿ 0, ಡಿಯೆಂಡ್ರಾ 26, ತನುಜಾ 16, ಭಾರ್ತಿ 40*, ಸಿಮ್ರನ್​ 5, ಪ್ರಿಯಾ 0*, ಮಾರಿಜಾನ್ನೆ 17ಕ್ಕೆ 2, ಶಿಖಾ ಪಾಂಡೆ 18ಕ್ಕೆ 2, ಸುದರ್​ಲ್ಯಾಂಡ್​ 20ಕ್ಕೆ 2). ಡೆಲ್ಲಿ ಕ್ಯಾಪಿಟಲ್ಸ್​: 15.1 ಓವರ್​ಗಳಲ್ಲಿ 4 ವಿಕೆಟ್​ಗೆ 131 (ಮೆಗ್​ ಲ್ಯಾನಿಂಗ್​ 3, ಶೆಫಾಲಿ ವರ್ಮ 44, ಜೆಸ್​ ಜೊನಾಸೆನ್​ 61*, ಜೆಮೀಮಾ 5, ಸುದರ್​ಲ್ಯಾಂಡ್​ 1, ಮಾರಿಜಾನ್ನೆ 9*, ಕಾಶ್ವಿ 26ಕ್ಕೆ 2).