ಲಂಡನ್: ಕ್ರೀಡೆಯಲ್ಲಿ ಪ್ರತಿಭೆ ಜತೆಗೆ ಅದೃಷ್ಟವೂ ಮುಖ್ಯವಾಗುತ್ತದೆ. ದೇಶೀಯ ಕ್ರಿಕೆಟ್ ಟೂರ್ನಿಗಳಲ್ಲಿ ಸಾವಿರಗಟ್ಟಲೇ ರನ್ ಕಲೆಹಾಕಿದ್ದರೂ ರಾಷ್ಟ್ರೀಯ ತಂಡದಲ್ಲಿ ಅವಕಾಶವೇ ಸಿಕ್ಕಿರದ ಎಷ್ಟೋ ಆಟಗಾರರು ವಿಶ್ವ ಕ್ರಿಕೆಟ್‌ನಲ್ಲಿ ಸಿಗುತ್ತಾರೆ. ಇದೀಗ ಇಂಗ್ಲೆಂಡ್‌ನ ಮಾಜಿ ಆಟಗಾರ ಅಲೆನ್ ಜಾನ್ಸ್ 50 ವರ್ಷಗಳ ಹಿಂದೆ ಆಡಿದ್ದ ಏಕೈಕ ಟೆಸ್ಟ್ ಪಂದ್ಯಕ್ಕೆ ಮಾನ್ಯತೆ ಗಿಟ್ಟಿಸಿಕೊಂಡಿದ್ದಾರೆ. ಇದರೊಂದಿಗೆ 5 ದಶಕಗಳಿಂದ ಇಂಗ್ಲೆಂಡ್ ಪ್ರತಿನಿಧಿಸದ ಕೊರಗಿನಲ್ಲಿದ್ದ ಅಲೆನ್ ಪಾಲಿಗೆ ನೆಮ್ಮದಿ ಸಿಕ್ಕಂತಾಗಿದೆ. ಇಂಗ್ಲೆಂಡ್ ಕ್ರಿಕೆಟ್ ಮಂಡಳಿ (ಇಸಿಬಿ) 81 ವರ್ಷದ ಹಿರಿಯ ಕ್ರಿಕೆಟಿಗನಿಗೆ ಟೆಸ್ಟ್ ಕ್ಯಾಪ್ ನೀಡುವ ಮೂಲಕ ನ್ಯಾಯ ದೊರಕಿಸಿಕೊಟ್ಟಿದೆ.
ಇದನ್ನೂ ಓದಿ: ಕ್ರಿಕೆಟ್ಗೆ ಎಸ್.ಶ್ರೀಶಾಂತ್ ವಾಪಸ್..!
1961 ರಿಂದ 1983ರವರೆಗೆ ಸತತ 23 ವರ್ಷಗಳ ಕಾಲ ಕೌಂಟಿ ಚಾಂಪಿಯನ್‌ಷಿಪ್ ಆಡಿದ್ದ ಅಲೆನ್, ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 36,049 ರನ್ ಪೇರಿಸಿದ್ದಾರೆ. ಇದರಿಂದ 56 ಶತಕಗಳು ಒಳಗೊಂಡಿವೆ. ನಾನೀಗ ಇಂಗ್ಲೆಂಡ್ ಆಟಗಾರ ಎಂದು ಹೆಮ್ಮೆಯಿಂದ ಹೇಳಿಕೊಳ್ಳುವೆ ಎಂದು ಜಾನ್ಸ್ ಹೇಳಿದ್ದಾರೆ.