ಛಟ್ಟೋಗ್ರಾಮ್: ಆರಂಭಿಕರಾದ ರಹಮಾನುಲ್ಲಾ ಗುರ್ಬಜ್ (145) ಮತ್ತು ಇಬ್ರಾಹಿಂ ಜದ್ರಾನ್ (100) ಭರ್ಜರಿ ಶತಕಗಳ ನೆರವಿನಿಂದ ಅಫ್ಘಾನಿಸ್ತಾನ ತಂಡ ಆತಿಥೇಯ ಬಾಂಗ್ಲಾದೇಶ ವಿರುದ್ಧದ ಏಕದಿನ ಸರಣಿಯ 2ನೇ ಪಂದ್ಯದಲ್ಲಿ 142 ರನ್ಗಳಿಂದ ಗೆಲುವು ದಾಖಲಿಸಿದೆ. ಈ ಮೂಲಕ 3 ಪಂದ್ಯಗಳ ಸರಣಿಯನ್ನು 2-0ಯಿಂದ ವಶಪಡಿಸಿಕೊಂಡ ಅಫ್ಘಾನಿಸ್ತಾನ ತಂಡ, ಕಳೆದ 8 ವರ್ಷಗಳಲ್ಲಿ ಬಾಂಗ್ಲಾದೇಶದಲ್ಲಿ ಏಕದಿನ ಸರಣಿ ಗೆದ್ದ ಕೇವಲ 2ನೇ ತಂಡ ಎಂಬ ಐತಿಹಾಸಿಕ ಸಾಧನೆ ಮಾಡಿದೆ. ಈ ಮುನ್ನ ಕಳೆದ 8 ವರ್ಷಗಳಲ್ಲಿ ಇಂಗ್ಲೆಂಡ್ ಮಾತ್ರ ಬಾಂಗ್ಲಾದಲ್ಲಿ ಏಕದಿನ ಸರಣಿ ಜಯಿಸಿದೆ. ಭಾರತ ಸೇರಿದಂತೆ ಇನ್ನೂ ಕೆಲ ಪ್ರಮುಖ ತಂಡಗಳು ಇತ್ತೀಚೆಗೆ ಬಾಂಗ್ಲಾದಲ್ಲಿ ಏಕದಿನ ಸರಣಿ ಸೋತಿವೆ.
ಶನಿವಾರ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ಗೆ ಇಳಿದ ಆಫ್ಘನ್ ತಂಡ ಗುರ್ಬಜ್-ಜದ್ರಾನ್ ಜೋಡಿ ಮೊದಲ ವಿಕೆಟ್ಗೆ ಸೇರಿಸಿದ 256 ರನ್ ಜತೆಯಾಟದ ಬಲದಿಂದ 9 ವಿಕೆಟ್ಗೆ 331 ರನ್ ಪೇರಿಸಿತು. ಪ್ರತಿಯಾಗಿ ಬಾಂಗ್ಲಾದೇಶ ತಂಡ 43.2 ಓವರ್ಗಳಲ್ಲಿ 189 ರನ್ಗಳಿಗೆ ಸರ್ವಪತನ ಕಂಡಿತು.
ಅಫ್ಘಾನಿಸ್ತಾನ: 9 ವಿಕೆಟ್ಗೆ 331 (ರಹಮಾನುಲ್ಲಾ 145, ಇಬ್ರಾಹಿಂ ಜದ್ರಾನ್ 100, ರಹಮತ್ ಷಾ 2, ಮೊಹಮದ್ ನಬಿ 25*, ಮುಸ್ತಾಫಿಜುರ್ 60ಕ್ಕೆ 2, ಹಸನ್ ಮಹ್ಮುದ್ 70ಕ್ಕೆ 2, ಶಕೀಬ್ 50ಕ್ಕೆ 2, ಮೆಹದಿ ಹಸನ್ 60ಕ್ಕೆ 2), ಬಾಂಗ್ಲಾದೇಶ: 43.2 ಓವರ್ಗಳಲ್ಲಿ 189 (ಲಿಟನ್ ದಾಸ್ 13, ನಜ್ಮುಲ್ 1, ಶಕೀಬ್ 25, ಮುಶ್ಫಿಕರ್ ರಹೀಂ 69, ಮೆಹದಿ ಹಸನ್ 25, ಫಾರೂಖಿ 22ಕ್ಕೆ 3, ಮುಜೀಬ್ 40ಕ್ಕೆ 3, ರಶೀದ್ ಖಾನ್ 28ಕ್ಕೆ 2).