ಕ್ರೀಡೆ

ಢಾಕಾದಲ್ಲಿ ಎಸಿಸಿ ಸಭೆ; ಏಷ್ಯಾ ಕಪ್ ಬಹಿಷ್ಕರಿಸುತ್ತೇನೆಂದ ಭಾರತ; ಬಿಸಿಸಿಐ ಪರ ನಿಂತ ಅಫ್ಘಾನಿಸ್ತಾನ | bcci

ಈ ಬಾರಿಯ ಏಷ್ಯನ್ ಕ್ರಿಕೆಟ್ ಕೌನ್ಸಿಲ್​ನ ವಾರ್ಷಿಕ ಮಹಾಸಭೆಯನ್ನು ಢಾಕಾದಲ್ಲಿ ಆಯೋಜಿಸಲು ನಿರ್ಧರಿಸಲಾಗಿದೆ. ಆದರೆ ಭಾರತ ಮತ್ತು ಬಾಂಗ್ಲಾದೇಶ ನಡುವೆ ರಾಜಕೀಯ ಬಿಕ್ಕಟ್ಟು ಮುಂದುವರೆದಿದ್ದು, ಹೀಗಾಗಿ ಢಾಕಾದಿಂದ ವಾರ್ಷಿಕ ಮಹಾಸಭೆಯನ್ನು ಸ್ಥಳಾಂತರಿಸಬೇಕೆಂದು ಬಿಸಿಸಿಐ ಮನವಿ ಮಾಡಿದೆ.

Asia Cup 2025; ಜುಲೈ 24 ರಂದು ನಿಗದಿಯಂತೆ ಢಾಕಾದಲ್ಲಿ ನಡೆಯಲಿರುವ ಮುಂಬರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ (ಎಸಿಸಿ) ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಅಂಗೀಕರಿಸಲಾದ ನಿರ್ಣಯಗಳನ್ನು ಬಹಿಷ್ಕರಿಸುವುದಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹೇಳಿದೆ.

ಎಸಿಸಿಯ ಮುಖ್ಯಸ್ಥರಾಗಿರುವ ಪಾಕಿಸ್ತಾನ ಕ್ರಿಕೆಟ್ ಮಂಡಳಿಯ ಮುಖ್ಯಸ್ಥ ಮೊಕ್ಸಿನ್ ನವ್ವ ಅವರಿಗೆ ಬಿಸಿಸಿಐ ಈಗಾಗಲೇ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿದೆ. ಒಂದು ವೇಳೆ ಎಸಿಸಿ ಸಭೆಯನ್ನು ಢಾಕಾದಲ್ಲಿ ನಡೆಸಿದರೆ, ತಾವು ಅದರಲ್ಲಿ ಭಾಗಿಯಾಗುವುದಿಲ್ಲ ಎಂದು ಬಿಸಿಸಿಐ ತಿಳಿಸಿದೆ. ಶ್ರೀಲಂಕಾ, ಒಮಾನ್ ಮತ್ತು ಅಫ್ಘಾನಿಸ್ತಾನದ ಕ್ರಿಕೆಟ್ ಮಂಡಳಿಗಳೂ ಭಾರತದ ಈ ನಡೆಯನ್ನು ಬೆಂಬಲಿಸಿದೆ. ಇಷ್ಟೆಲ್ಲಾ ವಿರೋಧದ ನಡುವೆಯೂ ಢಾಕಾದಲ್ಲಿಯೇ ಸಭೆ ನಡೆಸಲು ಮೊಕ್ಸಿನ್ ನಖಿ ಮುಂದಾಗಿದ್ದಾರೆ ಎನ್ನಲಾಗಿದೆ.

ಬಾಂಗ್ಲಾದೇಶದಲ್ಲಿನ ಪ್ರಸ್ತುತ ಪರಿಸ್ಥಿತಿಯನ್ನು ಉಲ್ಲೇಖಿಸಿ, ಸಭೆಯ ಸ್ಥಳವನ್ನು ಬದಲಾಯಿಸುವಂತೆ ಭಾರತೀಯ ಮಂಡಳಿಯು ಎಸಿಸಿಯನ್ನು ಔಪಚಾರಿಕವಾಗಿ ವಿನಂತಿಸಿತ್ತು. ಆದರೆ ಎಸಿಸಿ ನಾಯಕತ್ವದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಬಿಸಿಸಿಐನ ಹಿರಿಯ ಅಧಿಕಾರಿಯೊಬ್ಬರು ಬಹಿರಂಗಪಡಿಸಿದ್ದಾರೆ.

(ಏಜೆನ್ಸೀಸ್)

ಸಭೆಗೆ ಕೇವಲ ಐದು ದಿನಗಳು ಬಾಕಿಯಿದ್ದು, ಸ್ಥಳ ಬದಲಾವಣೆಯ ಬಗ್ಗೆ ಇದುವರೆಗೂ ಯಾವುದೇ ನಿರ್ಧಾರ ಮಾಡಲಾಗಿಲ್ಲ. ಢಾಕಾದಿಂದ ಬೇರೊಂದು ನಗರಕ್ಕೆ, ಅಂದರೆ ಬಾಂಗ್ಲಾದೇಶ ಹಾಗೂ ಪಾಕಿಸ್ತಾನವನ್ನು ಹೊರತುಪಡಿಸಿ ಏಷ್ಯಾದ ಇತರೆ ನಗರಗಳಲ್ಲಿ ಸಭೆಯನ್ನು ಆಯೋಜಿಸಿದರೆ ಮಾತ್ರ ಬಿಸಿಸಿಐ ಭಾಗವಹಿಸಲಿದೆ. ಇಲ್ಲದಿದ್ದರೆ ಈ ಬಾರಿಯ ಏಷ್ಯಾಕಪ್​ನಿಂದ ಟೀಮ್ ಇಂಡಿಯಾ ಹೊರಗುಳಿಯುವ ಸಾಧ್ಯತೆ ಹೆಚ್ಚಿದೆ.