ಕ್ರೀಡೆ

ಪ್ರೇಕ್ಷಕರ ಮಧ್ಯೆ ಮಾರು ವೇಷದಲ್ಲಿ ಪಂದ್ಯ ವೀಕ್ಷಿಸಿದ ಎಬಿ ಡಿವಿಲಿಯರ್ಸ್​: ವಿಡಿಯೋ ವೈರಲ್​ | AB de Villiers

AB de Villiers ಸೌತ್​ ಆಫ್ರಿಕಾದ ಮಾಜಿ ಸ್ಫೋಟಕ ಬ್ಯಾಟ್ಸಮನ್​ ಮತ್ತು ಆರ್​ಸಿಬಿ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ ಅಗ್ಗಾಗೆ ಸೋಷಿಯಲ್​​ ಮೀಡಿಯಾದಲ್ಲಿ ಸದ್ದು ಮಾಡುತ್ತಿರುತ್ತಾರೆ.ಇದೀಗ ಮಾರು ವೇಶ ಹಾಕಿಕೊಂಡು ಪ್ರೇಕ್ಷಕರ ಜತೆ ಸಾಮಾನ್ಯರಂತೆ ಕ್ರಿಕೆಟ್​​ ನೋಡುವ ಮೂಲಕ ಮತ್ತೊಮ್ಮೆ ಸುದ್ದಿಯಲಿದ್ದಾರೆ ನಮ್ಮ ಮಿಸ್ಟರ್​ 360.

ಹೌದು, ಇತ್ತೀಚಿಗೆ ಸೌತ್​​ ಆಫ್ರಿಕಾದಲ್ಲಿ ನಡೆದ ಎಸ್​ಎ20 ಮ್ಯಾಚ್​ ಅನ್ನು ನೋಡಲು ಎಬಿಡಿ ಮಾರು ವೇಶಷದಲ್ಲಿ ತೆರಳಿ ಅಭಿಮಾನಿಗಳಿಗೆ ಆಶ್ಚರ್ಯಗೊಳಿಸಿದ್ದು, ತಮ್ಮ ವಿಡಿಯೋವನ್ನು ಇದೀಗ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಸಖತ್​ ವೈರಲ್​ ಆಗುತ್ತಿದೆ.

ವಿಡಿಯೋದಲ್ಲಿ ಏನಿದೆ.?

ಮಾಜಿ ಆಟಗಾರ ಎಬಿಡಿ ಪಂದ್ಯ ನಡೆಯುವ ವೇಳೆ ತಮಗೆ ನೀಡಿದ ಪ್ರತ್ಯೇಕ ರೂಮ್​ನಲ್ಲಿ ದೊಡ್ಡದಾದ ಮೀಸೆ, ಗಡ್ಡ ಹೊಂದಿರುವ ವಿಗ್​ ಮತ್ತು ಕೂಲಿಂಗ್​ ಗ್ಲಾಸ್​​ ಹಾಕಿಕೊಂಡು ಹೊರಬಂದಿದ್ದಾರೆ. ಯಾರಿಗೆ ತಿಳಿಯದಂತೆ ವಿಡಿಯೋ ರೆಕಾರ್ಡ್​ ಮಾಡಿಕೊಂಡಿದ್ದು, ಪ್ರಕ್ಷೇಕರ ಮಧ್ಯ ಹೋಗಿ ಸಾಮಾನ್ಯರಂತೆ ಆಟವನ್ನು ವಿಕ್ಷೀಸಿದ್ದಾರೆ. ಅಲ್ಲದೆ, ಮಧ್ಯೆ ಮಧ್ಯೆ ಜನರನ್ನು ಮಾತನಾಡಿಸುತ್ತ ಹಾಸ್ಯ ಚಟಾಕಿ ಹಾರಿಸಿದ್ದಾರೆ. ಈ ವಿಡಿಯೋವನ್ನು ತಾವೇ ಸ್ವತ ರೆಕಾರ್ಡ್​ ಮಾಡಿ ಸಾಮಾಜಿಕ ವೇದಿಕೆಯಲ್ಲಿ ಹಂಚಿಕೊಂಡಿದ್ದಾರೆ.

ಪಾರ್ಲ್ ರಾಯಲ್ಸ್‌ vs ಪ್ರಿಟೋರಿಯಾ ಕ್ಯಾಪಿಟಲ್ಸ್ ಪಂದ್ಯವನ್ನು ಎಬಿ ಡಿವಿಲಿಯರ್ಸ್ ವಿಕ್ಷೀಸಿದ್ದಾರೆ ಎಂದು ವರದಿಯಾಗಿದೆ.(ಏಜೆನ್ಸೀಸ್​)