ಕ್ರೀಡೆ

Pushpa-2 ಸಿನಿಮಾದ 10 ಸಾವಿರ ಟಿಕೆಟ್​ ಗಿವ್​ಅವೇ ಘೋಷಿಸಿದ ABD; ಆದ್ರೆ ಇಲ್ಲಿದೆ ಒಂದು ಟ್ವಿಸ್ಟ್​

ನವದೆಹಲಿ: ಅಲ್ಲು ಅರ್ಜುನ್​-ರಶ್ಮಿಕಾ ಮಂದಣ್ಣ ನಟನೆಯ ಪುಷ್ಪ-2 (Pushpa-2) ಚಿತ್ರದ ಕ್ರೇಜ್ ದಿನ ಕಳೆದಂತೆ ಕ್ರೇಜ್​ ಹೆಚ್ಚಾಗುತ್ತಿದ್ದು, ಒಂದಿಲ್ಲೊಂದು ಕಾರಣಕ್ಕೆ ಸಿನಿರಸಿಕರ ಗಮನ ಸೆಳೆಯುತ್ತಿದೆ. ಇತ್ತ ಚಿತ್ರ ಬಿಡುಗಡೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ವಿಶ್ವಮಟ್ಟದಲ್ಲಿ ಅನೇಕ ಸೆಲೆಬ್ರಿಟಿಗಳು ಸಿನಿಮಾಗೆ ಬೆಂಬಲ ಸೂಚಿಸಿದ್ದಾರೆ. ಇದರಲ್ಲಿ ಪ್ರಮುಖವಾಗಿ ಆರ್​ಸಿಬಿ (RCB) ತಂಡದ ಮಾಜಿ ಆಟಗಾರ ಎಬಿ ಡಿವಿಲಿಯರ್ಸ್​ (ABD) 10 ಸಾವಿರ ಟಿಕೆಟ್​ಗಳನ್ನು ಗಿವ್​ಅವೇ ಮಾಡುವ ಮೂಲಕ ಗಮನ ಸೆಳೆದಿದ್ದು, ಇದಕ್ಕೆ ಸಂಬಂಧಿಸಿದ ಟ್ವೀಟ್​ ವೈರಲ್​ ಆಗುತ್ತಿದೆ.

ತಮ್ಮ ಸ್ಫೋಟಕ ಬ್ಯಾಟಿಂಗ್ ಮೂಲಕವೇ ಭಾರತದಲ್ಲಿ ಅಪಾರ ಸಂಖ್ಯೆಯ ಅಭಿಮಾನಿಗಳನ್ನು ಹೊಂದಿರುವ ಎಬಿ ಡಿವಿಲಿಯರ್ಸ್​ (ABD) ದೇಶದ ಬಗ್ಗೆ ಎಲ್ಲಿಲ್ಲದ ಒಲವನ್ನು ಹೊಂದಿದ್ದಾರೆ. ಇದೀಗ ಪುಷ್ಪ-2 ಚಿತ್ರದ 10 ಸಾವಿರ ಟಿಕೆಟ್​ಗಳನ್ನು ಗಿವ್​ ಅವೇ ಮಾಡುವ ಮೂಲಕ ಎಬಿಡಿ ಎಲ್ಲರ ಗಮನ ಸೆಳೆದಿದ್ದು, ಇಲ್ಲೊಂದು ಟ್ವಿಸ್ಟ್​ ಇಟ್ಟಿದ್ದಾರೆ.

Hey everyone! I have some exciting news for all the movie buffs out there. 🎥💥

The first 10,000 depositors who deposit INR 100 or more on @Wolf7Pay will get tickets to the year’s biggest blockbuster – Pushpa 2! 🔥

Don’t wait – campaign ends this Saturday. Play responsibly and… pic.twitter.com/QRqEOAUGbt

— AB de Villiers (@ABdeVilliers17) December 2, 2024

ಬೆಟ್ಟಿಂಗ್​ ಆ್ಯಪ್​ ಒಂದರ ಪ್ರಮೋಷನ್​ನಲ್ಲಿ ಟಿಕೆಟ್​ ಗಿವ್​ ಅವೇ ಬಗ್ಗೆ ಮಾತನಾಡಿರುವ ಎಬಿಡಿ 100 ರೂಪಾಯಿಗಿಂತ ಹೆಚ್ಚಿನ ಹಣ ಡಿಪೋಸಿಟ್ ಮಾಡಿದ ಮೊದಲ 10 ಸಾವಿರ ಮಂದಿಗೆ ‘ಪುಷ್ಪ 2’ ಟಿಕೆಟ್ ಕೊಡುವುದಾಗಿ ಹೇಳಿದ್ದಾರೆ. ಡಿಸೆಂಬರ್​ 07ರಂದು ಈ ಕ್ಯಾಂಪೇನ್​ ಪೂರ್ಣಗೊಳ್ಳಲಿದ್ದು, ಈ ಬೆಟ್ಟಿಂಗ್​ ಆ್ಯಪ್​ಅನ್ನು ಎಬಿಡಿ (ABD) ಪ್ರಮೋಟ್​ ಮಾಡಿದ್ದಾರೆ.

ಎಬಿಡಿ ಟ್ವೀಟ್​ ಮಾಡಿರುವ ವಿಡಿಯೋ ವೈರಲ್​ ಆಗುತ್ತಿದ್ದಂತೆ ಹಲವರು ಅಪಸ್ವರ ತೆಗೆದಿದ್ದು, ಬಹಳಷ್ಟು ಮಂದಿ ಪುಷ್ಪ-2 ಚಿತ್ರದ ಪ್ರಮೋಷನ್​ ಮಾಡಿದ್ದಕ್ಕಾಗಿ ಧನ್ಯವಾದಗಳು ಎಂದು ಹೇಳಿದ್ದಾರೆ. ಡಿಸೆಂಬರ್​ 05ರಂದು ಪುಷ್ಪ-2 ಚಿತ್ರ ವಿಶ್ವದಾದ್ಯಂತ ತೆರೆ ಕಾಣಲಿದ್ದು, ಡಿಸೆಂಬರ್​ 04ರಂದು ಚಿತ್ರದ ಪ್ರೀಮಿಯರ್​ ಶೋ ನಡೆಯಲಿದೆ.