ಕೊಲಂಬಿಯಾ: 20 ವರ್ಷದೊಳಗಿನವರ ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್ಷಿಪ್ನ ತ್ರಿಪಲ್ ಜಂಪಿಂಗ್ ಸ್ಪರ್ಧೆಯಲ್ಲಿ ಭಾರತದ ಸೆಲ್ವ ಪಿ. ತಿರುಮಾರನ್ ಬೆಳ್ಳಿ ಪದಕಕ್ಕೆ ಮುತ್ತಿಟ್ಟಿದ್ದಾರೆ.
17 ವರ್ಷದ ಸೆಲ್ವ, 16.15 ಮೀ. ದೂರ ಜಿಗಿದು ದ್ವಿತೀಯ ಸ್ಥಾನ ಪಡೆದರು. ಜಮೈಕಾದ ಹಿಬ್ಬರ್ಟ್ ಅವರು 17.27 ಮೀ. ದೂರ ಜಿಗಿಯುವ ಮೂಲಕ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇನ್ನು ಎಸ್ಟೋನಿಯಾದ ವಿಕ್ಟರ್ ಮೊರೊಜೊವ್ ಅವರು ಸೆಲ್ವ ಅವರಿಗಿಂತ 2 ಸೆಂ.ಮೀ. ಕಡಿಮೆ ಜಿಗಿದು 3ನೇ ಸ್ಥಾನಕ್ಕಿಳಿದರು.