More

    ನಾಗಮಂಗಲ ಶಾಸಕ ಸುರೇಶ್‌ಗೌಡ ವಿರುದ್ಧ ಎಫ್​ಐಆರ್​! ಸಾಕ್ಷ್ಯವಾಗಿ ವಿಡಿಯೋ-ಫೋಟೋ ಸಲ್ಲಿಕೆ

    ಮಂಡ್ಯ: ನಾಗಮಂಗಲ ಶಾಸಕ ಸುರೇಶ್‌ಗೌಡ ಸೇರಿ 10 ಜನರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

    ಹಾಲ್ತಿ ಗ್ರಾಮದಲ್ಲಿ ಜಮೀನು ವಿವಾದಕ್ಕೆ ಸಂಬಂಧಿಸಿದಂತೆ ಆ.4ರಂದು ನಡೆದಿದ್ದ ಶಾಸಕ, ರೈತರು ಹಾಗೂ ಇಲಾಖೆ ಸಿಬ್ಬಂದಿ ನಡುವಿನ ಜಗಳಕ್ಕೆ ಸಂಬಂಧಿಸಿದಂತೆ ದೂರು ಆರ್‌ಎಫ್‌ಒ ಸತೀಶ್ ನೀಡಿದ್ದರು. ಈ ಹಿನ್ನೆಲೆಯಲ್ಲಿ ಶಾಸಕ ಸೇರಿ 10 ಜನರ ವಿರುದ್ಧ ಎಫ್​ಐಆರ್​ ದಾಖಲಾಗಿದೆ.

    ಅರಣ್ಯ ಇಲಾಖೆ ಸಿಬ್ಬಂದಿಗೆ ಪ್ರಾಣ ಬೆದರಿಕೆ, ಸರ್ಕಾರಿ ಕೆಲಸಕ್ಕೆ ಅಡ್ಡಿ ಹಾಗೂ ಅವ್ಯಾಚ್ಯ ಶಬ್ಧಗಳಿಂದ ನಿಂದನೆ ಕುರಿತು ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಫ್‌‌ಐಆರ್ ದಾಖಲಾಗಿದೆ. ಅರಣ್ಯ ಇಲಾಖೆಗೆ ಸೇರಿದ ಜಾಗದಲ್ಲಿ ಕೆಲವರು ಒತ್ತುವರಿ ಮಾಡಿಕೊಂಡಿರುವ ಆರೋಪವಿದ್ದು, ಒತ್ತುವರಿ ತೆರವು ಮಾಡಲು ಹೋದಾಗ ಶಾಸಕರು ಸರ್ಕಾರಿ ಕೆಲಸಕ್ಕೆ ಅಡ್ಡಿ ಮಾಡುವ ಜತೆಗೆ ಪ್ರಾಣ ಬೆದರಿಕೆ ಹಾಕಿದ್ದಾರೆ ಎಂದು ದೂರಲಾಗಿದೆ.

    ಆ.5ರಂದು ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ದೂರು ದಾಖಲಿಸಿದ್ದು, ಕಾನೂನು ಕ್ರಮಕ್ಕೆ ಆರ್‌ಎಫ್‌ಒ ಸತೀಶ್ ಒತ್ತಾಯಿಸಿದ್ದಾರೆ. ಅರಣ್ಯ ಸಂಪತ್ತನ್ನು ನಮ್ಮ ವಶಕ್ಕೆ ಕೊಡಿಸುವುದರ ಜತೆಗೆ ಅಧಿಕಾರಿ ಮತ್ತು ಸಿಬ್ಬಂದಿಗೆ ರಕ್ಷಣೆ ನೀಡಬೇಕೆಂದು ಮನವಿ ಮಾಡಿದ್ದಾರೆ. ದೂರಿನ‌ ಜತೆಗೆ ಸಾಕ್ಷ್ಯವಾಗಿ ಘಟನೆ ನಡೆದ ದಿನದ ವಿಡಿಯೋ, ಫೋಟೋಗಳನ್ನೂ ಸಲ್ಲಿಸಿದ್ದಾರೆ.

    ಸಿಎಂ ಬಸವರಾಜ ಬೊಮ್ಮಾಯಿಗೆ ಕರೊನಾ ಪಾಸಿಟಿವ್​: ಕೊನೇ ಕ್ಷಣದಲ್ಲಿ ದೆಹಲಿ ಪ್ರವಾಸ ರದ್ದು

    ಮನೆ-ಮನೆಗೂ ತಲಾ 5 ಸಾವಿರ ರೂಪಾಯಿ ದಾನ ಮಾಡ್ತೀನಿ: ಕೆಜಿಎಫ್​ ಬಾಬು ಘೋಷಣೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts