ಕ್ರೀಡೆ

ಕಾಮನ್ವೆಲ್ತ್​ ಗೇಮ್ಸ್​ನಲ್ಲಿ ಪದಕ ಬೇಟೆ ಆರಂಭಿಸಿದ ಭಾರತ: ಬೆಳ್ಳಿಗೆ ಮುತ್ತಿಟ್ಟ ಸಂಕೇತ್​ ಸರ್ಗರ್​

ಬರ್ಮಿಂಗ್​ಹ್ಯಾಂ: ಈ ಬಾರಿಯ ಕಾಮನ್ವೆಲ್ತ್​ ಕ್ರೀಡಾಕೂಟದಲ್ಲಿ ಮೊದಲ ದಿನವೇ ಭಾರತ ಬೆಳ್ಳಿ ಪದಕ ಪಡೆಯುವ ಮೂಲಕ ಖಾತೆ ಆರಂಭಿಸಿದೆ. 55 ಕೆಜಿ ವಿಭಾಗದ ವೇಯ್ಟ್​ ಲಿಪ್ಟಿಂಗ್​ ಸ್ಪರ್ಧೆಯಲ್ಲಿ ಸಂಕೇತ್​ ಸರ್ಗರ್​ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ.

22ನೇ ಆವೃತ್ತಿಯ ಕಾಮನ್ವೆಲ್ತ್​ ಕ್ರೀಡಾಕೂಟಕ್ಕೆ ಗುರುವಾರ ರಾತ್ರಿ ಬರ್ಮಿಂಗ್​ಹ್ಯಾಂನಲ್ಲಿ ಅದ್ದೂರಿ ಚಾಲನೆ ಸಿಕ್ಕಿದೆ. 72 ದೇಶ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಕ್ರೀಡಾಕೂಟದಲ್ಲಿ ಭಾಗವಹಿಸಿವೆ.

ಫೈನಲ್ ಪಂದ್ಯದ ಮೊದಲ ಸುತ್ತಿನಲ್ಲಿ 107 ಕೆಜಿ, ಎರಡನೇ ಸುತ್ತಿನಲ್ಲಿ 111 ಕೆಜಿ ಭಾರ ಎತ್ತಿದ್ದ ಸಂಕೇತ್, ಕೊನೆಯ ಸುತ್ತಿನಲ್ಲಿ 113 ಕೆಜಿ ಭಾರ ಎತ್ತುವ ಮೂಲಕ 2ನೇ ಸ್ಥಾನ ಪಡೆದರು. ಚಿನ್ನದ ಪದಕ ಮಲೇಷ್ಯಾದ ಮೊಹಮ್ಮದ್​ರ ಪಾಲಾಯಿತು.