ಕ್ರೀಡೆ

IPL ಜಾತ್ರೆಗೂ ಮುನ್ನ ಮಹತ್ವದ ಬದಲಾವಣೆ: CSK ನಾಯಕತ್ವಕ್ಕೆ ಧೋನಿ ಗುಡ್​ ಬೈ! ಜಡೇಜಾಗೆ ಕ್ಯಾಪ್ಟನ್​ ಪಟ್ಟ

ಬೆಂಗಳೂರು: ಇನ್ನೆರಡು ದಿನದಲ್ಲಿ ಐಪಿಎಲ್​ (ಇಂಡಿಯನ್​ ಪ್ರೀಮಿಯರ್​ ಲೀಗ್​) ಹಂಗಾಮ ಶುರುವಾಗತ್ತೆ. ಐಪಿಎಲ್​ ಜಾತ್ರೆ ಆರಂಭಕ್ಕೂ ಮುನ್ನವೇ ಸಿಎಸ್​ಕೆ ತಂಡದಲ್ಲಿ ಮಹತ್ವದ ಬದಲಾವಣೆ ಆಗಿದೆ. ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಕ್ಯಾಪ್ಟನ್​ ಪಟ್ಟವನ್ನು ಎಂ.ಎಸ್​. ಧೋನಿ ತ್ಯಜಿಸಿದ್ದಾರೆ. ಗುರುವಾರ ನಾಯಕತ್ವಕ್ಕೆ ಧೋನಿ ರಾಜೀನಾಮೆ ಕೊಟ್ಟಿದ್ದು, ಉತ್ತರಾಧಿಕಾರಿ ಆಗಿ ರವೀಂದ್ರ ಜಡೇಜಾ ಆಯ್ಕೆಯಾಗಿದ್ದಾರೆ.

ಧೋನಿ ನೇತೃತ್ವದಲ್ಲೇ 9 ಬಾರಿ ಸಿಎಸ್​ಕೆ ತಂಡ ಫೈನಲ್​ ಹಂತ ಪ್ರವೇಶಿಸಿತ್ತು. ಧೋನಿ ನೇತೃತ್ವದಲ್ಲಿ 4 ಬಾರಿ ಸಿಎಸ್​ಕೆ ತಂಡಕ್ಕೆ ಐಪಿಎಲ್ ಚಾಂಪಿಯನ್​ ಪಟ್ಟ ಸಿಕ್ಕಿತ್ತು. ಶನಿವಾರದಿಂದ(ಮಾ.26) 15ನೇ ಆವೃತ್ತಿಯ ಐಪಿಎಲ್​ ಹಬ್ಬ ಶುರುವಾಗಲಿದ್ದು, ಈ ನಡುವೆ ಸಂಭವಿಸಿದ ಮಹತ್ತರ ಬೆಳವಣಿಗೆಯಲ್ಲಿ ಸಿಎಸ್​ಕೆ ತಂಡದ ಕ್ಯಾಪ್ಟನ್ ಪಟ್ಟ ರವೀಂದ್ರ ಜಡೇಜಾಗೆ ಒಲಿದಿದೆ.