ಕ್ರೀಡೆ

ನ್ಯೂಜಿಲೆಂಡ್​ ವಿರುದ್ಧ ಟೀಂ ಇಂಡಿಯಾಗೆ 372 ರನ್​ಗಳ ಭರ್ಜರಿ ಗೆಲುವು

ಮುಂಬೈ: ಭಾರತ ಮತ್ತು ನ್ಯೂಜಿಲೆಂಡ್​ ನಡುವಿನ 2ನೇ ಟೆಸ್ಟ್​ ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ. 1-0 ಅಂತರದಲ್ಲಿ ಸರಣಿ ವಶಪಡಿಸಿಕೊಂಡು ಐತಿಹಾಸಿಕ ಸಾಧನೆ ಮಾಡಿದೆ.

ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆದ ಭಾರತ ಹಾಗೂ ನ್ಯೂಜಿಲೆಂಡ್ ನಡುವಣ ಅಂತಿಮ 2ನೇ ಟೆಸ್ಟ್​ ಪಂದ್ಯದಲ್ಲಿ ಭಾರತ ಬರೋಬ್ಬರಿ 372 ರನ್​ಗಳ ಅಮೋಘ ಗೆಲುವು ಕಾಣುವ ಮೂಲಕ ಟೆಸ್ಟ್ ಸರಣಿ ವಶಪಡಿಸಿಕೊಂಡಿದೆ. ಇದು ಭಾರತ ದಾಖಲಿಸಿದ ಮತ್ತೊಂದು ದೊಡ್ಡ ಮೊತ್ತದ ಗೆಲುವಾಗಿದೆ.

ಪಂದ್ಯದ ಆರಂಭದಿಂದಲೂ ಉತ್ತಮ ಪದರ್ಶನ ಕೊಟ್ಟ ಭಾರತ, 540 ರನ್​ಗಳ ಗುರಿಯನ್ನ ಪ್ರವಾಸಿ ತಂಡ ನ್ಯೂಜಿಲೆಂಡ್​ಗೆ ನೀಡಿತ್ತು. ಈ ಸವಾಲಿನ ಬೆನ್ನಟ್ಟಿದ್ದ ನ್ಯೂಜಿಲೆಂಡ್​, ಮೂರನೇ ದಿನದಂತ್ಯಕ್ಕೆ 5 ವಿಕೆಟ್‌ಗೆ 138 ರನ್ ಪೇರಿಸಿತ್ತು. ಜಯ ದಾಖಲಿಸಲು ಇನ್ನೂ 402 ರನ್ ಗಳಿಸಬೇಕಿತ್ತು. ಸೋಮವಾರ ನಡೆದ 4ನೇ ದಿನದಾಟದಲ್ಲಿ ಟೀಮ್ ಇಂಡಿಯಾ ಬೌಲಿಂಗ್ ಬಿರುಗಾಳಿಗೆ ತತ್ತರಿಸಿದ ಕಿವೀಸ್ ಬ್ಯಾಟರ್​ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಹಾದಿ ಹಿಡಿದು ಎರಡನೇ ಇನ್ನಿಂಗ್ಸ್​ನಲ್ಲಿ ಕೇವಲ 171 ರನ್​ಗೆ ಆಲೌಟ್ ಆದರು.

ಭಾರತ ಮೊದಲ ಇನ್ನಿಂಗ್ಸ್: 109.5 ಓವರ್​ಗಳಲ್ಲಿ 325 ರನ್​ಗೆ ಆಲ್ಔಟ್

ನ್ಯೂಜಿಲೆಂಡ್ ಮೊದಲ ಇನ್ನಿಂಗ್ಸ್: 28.1 ಓವರ್​ಗಳಲ್ಲಿ 62 ರನ್​ಗಳಿಗೆ ಆಲ್ಔಟ್

ಭಾರತ ಎರಡನೇ ಇನಿಂಗ್ಸ್: 70 ಓವರ್​ನಲ್ಲಿ 7 ವಿಕೆಟ್​ಗೆ 276 ರನ್ ಡಿಕ್ಲೇರ್​ (ಮಯಾಂಕ್ ಅಗರ್ವಾಲ್ 62, ಪೂಜಾರ 47, ಶುಭಮಾನ್ ಗಿಲ್ 47, ಕೊಹ್ಲಿ 36, ಅಕ್ಷರ್ ಪಟೇಲ್41*, ಅಜಾಜ್ ಪಟೇಲ್ 106ಕ್ಕೆ 4, ರಚಿನ್ ರವೀಂದ್ರ 56ಕ್ಕೆ 3).

ನ್ಯೂಜಿಲೆಂಡ್ 2ನೇ ಇನಿಂಗ್ಸ್: 45 ಓವರ್​ಗಳಲ್ಲಿ 5 ವಿಕೆಟ್​ಗೆ 140 ರನ್ (ಡೆರಿಲ್ ಮಿಚೆಲ್ 60, ಹೆನ್ರಿ ನಿಕೋಲಸ್ 36, ಆರ್.ಅಶ್ವಿನ್ 27ಕ್ಕೆ 3, ಅಕ್ಷರ್ ಪಟೇಲ್ 42ಕ್ಕೆ 1).