ದುಬೈ: 14ನೇ ಐಪಿಎಲ್(ಇಂಡಿಯನ್ ಪ್ರೀಮಿಯರ್ ಲೀಗ್) ಫೈನಲ್ ಪಂದ್ಯದಲ್ಲಿ ಕೆಕೆಆರ್ ವಿರುದ್ಧ 27 ರನ್‌ಗಳಿಂದ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್(ಸಿಎಸ್‌ಕೆ) ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ದುಬೈ ಕ್ರಿಕೆಟ್ ಸ್ಟೇಡಿಯಂನಲ್ಲಿ ಶುಕ್ರವಾರ ಪಂದ್ಯದ ಬಳಿಕ ಮಾತನಾಡಿದ ಎಂ.ಎಸ್. ಧೋನಿ, ಐಪಿಎಲ್ 2021ರಲ್ಲಿ ಉತ್ತಮ ಪ್ರದರ್ಶನ ನೀಡಿದ ಕೋಲ್ಕತ್ತಾ ನೈಟ್ ರೈಡರ್ಸ್ ಅನ್ನು ಶ್ಲಾಘಿಸಿದದ್ದಾರೆ. ಈ ವರ್ಷದ ಐಪಿಎಲ್ ಗೆಲ್ಲಲು ಯಾವುದೇ ತಂಡ ಅರ್ಹವಾಗಿದ್ದರೆ ಅದು ಕೆಕೆಆರ್ ಎಂದಿದ್ದಾರೆ.
'ನಾನು ಸಿಎಸ್‌ಕೆ ಬಗ್ಗೆ ಮಾತನಾಡಲು ಪ್ರಾರಂಭಿಸುವ ಮೊದಲು ಕೆಕೆಆರ್ ಬಗ್ಗೆ ಮಾತನಾಡುವುದು ಮುಖ್ಯ' ಎಂದ ಧೋನಿ, ಐಪಿಎಲ್‌ನ ಮೊದಲಾರ್ಧದಲ್ಲಿ ಕೆಕೆಆರ್ ಇದ್ದ ಸ್ಥಾನ, ಆ ನಂತರ ಕಮ್ ಬ್ಯಾಕ್ ಆಗಿ ಸಾಧಿಸಿದ್ದನ್ನು ನೋಡಿದ್ರೆ ನಿಜವಾಗಿಯೂ ಐಪಿಎಲ್ ಗೆಲ್ಲಲು ಅರ್ಹವಾಗಿದ್ದ ತಂಡ ಅಂದ್ರೆ ಅದು ಕೆಕೆಆರ್ ಎಂದು ಭಾವಿಸುತ್ತೇನೆ' ಎಂದರು.
ಮಹೇಂದ್ರ ಸಿಂಗ್ ಧೋನಿ ಪಡೆ ಐಪಿಎಲ್ 14ನೇ ಆವೃತ್ತಿಯ ಫೈನಲ್ ಹಣಾಹಣಿಯಲ್ಲಿ ಕೋಲ್ಕತ ನೈಟ್ ರೈಡರ್ಸ್ ತಂಡವನ್ನು 27 ರನ್‌ಗಳಿಂದ ಮಣಿಸಿತು. 7 ವರ್ಷಗಳ ಬಳಿಕ 3ನೇ ಪ್ರಶಸ್ತಿ ಜಯಿಸುವ ಕನಸಿನಲ್ಲಿದ್ದ ಕೆಕೆಆರ್ ನಿರಾಸೆ ಅನುಭವಿಸಿತು.