ಕ್ರೀಡೆ

6,6,6,6,6,6,6.... ಯುವಿ ಭರ್ಜರಿ ಬ್ಯಾಟಿಂಗ್​; 2007ರ ವಿಶ್ವಕಪ್​ನಂತೆ ಮರುಕಳಿಸಿದ ವೈಭವ; ಇಲ್ಲಿದೆ ನೋಡಿ ವಿಡಿಯೋ.. | Repeat Of The Glory

Repeat Of The Glory : ದೇಶ ಕಂಡ ಅತ್ಯಂತ ಸ್ಫೋಟಕ ಮತ್ತು ಆಕರ್ಷಕ ಬ್ಯಾಟರ್​ಗಳಲ್ಲಿ ಒಬ್ಬರಾದ ಟೀಮ್​ ಇಂಡಿಯಾದ ಮಾಜಿ ಆಟಗಾರ ಯುವರಾಜ್​ ಸಿಂಗ್​ 2007 ವಿಶ್ವಕಪ್​ನಲ್ಲಿ ಇಂಗ್ಲೆಂಡ್​ ವಿರುದ್ಧ 6 ಬಾಲ್​ಗೆ 6 ಸಿಕ್ಸರ್​​ ಹೊಡೆಯುವ ಬ್ಯಾಟಿಂಗ್​ ಅನ್ನು ಮತ್ತೊಮ್ಮೆ ಗುರುವಾರ ಅಭಿಮಾನಿಗಳಿಗೆ ಉಣಬಡಿಸಿದರು.

ಹೌದು, ಗುರುವಾರ ರಾಯಪುರ್​ನಲ್ಲಿ ನಡೆದ ಇಂಡಿಯನ್ ಮಾಸ್ಟರ್ಸ್  ಲೀಗ್‌ನಲ್ಲಿ(International Masters League) ಯುವರಾಜ್ ಸಿಂಗ್ 30 ಎಸೆತಗಳಲ್ಲಿ 59 ರನ್ ಗಳಿಸಿದರು, 7 ಸಿಕ್ಸರ್‌ಗಳು ಮತ್ತು 1 ಬೌಂಡರಿಯೊಂದಿಗೆ ಭಾರತ ತಂಡವು ಆಸ್ಟ್ರೇಲಿಯಾವನ್ನು ಟೂರ್ನಿಯಿಂದ ಹೊರ ಹಾಕಿತು. ಇವರ ಆಮೋಘ ಸಿಕ್ಸರ್​ಗಳು 2007ರ ಐಸಿಸಿ ಟಿ-20 ವಿಶ್ವಕಪ್​ನಲ್ಲಿ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್ ವಿರುದ್ಧ ಒಂದೇ ಓವರ್‌ನಲ್ಲಿ 6 ಸಿಕ್ಸರ್‌ಗಳನ್ನು ಬಾರಿಸಿದ್ದ ಅವರ ಸಾಹಸವನ್ನು ಅಭಿಮಾನಿಗಳಿಗೆ ನೆನಪಿಸಿತು.

ಮಧ್ಯಮ ಕ್ರಮಾಂಕದಲ್ಲಿ ಬಂದ ಯುವಿ ಆಸ್ಟ್ರೇಲಿಯಾದ ಲೆಗ್-ಸ್ಪಿನ್ನರ್ ಮೆಕ್‌ಗೈನ್ ಅವರ ಒಂದೇ ಓವರ್‌ನಲ್ಲಿ ಮೂರು ಸಿಕ್ಸರ್‌ಗಳು ಹೊಡೆಯುವ ಮೂಲಕ ಬ್ಯಾಟಿಂಗ್​ ವೈಖರಿಯನ್ನು ಮತ್ತೊಮ್ಮೆ ಸಾಬೀತುಪಡಿಸಿತು.

ಈ ಪಂದ್ಯದಲ್ಲಿ ಸಚಿನ್ ತೆಂಡೂಲ್ಕರ್ ಕೂಡ ತಮ್ಮ ಶ್ರೇಷ್ಠ ಪ್ರದರ್ಶನ ನೀಡಿ 30 ಎಸೆತಗಳಲ್ಲಿ 7 ಬೌಂಡರಿಗಳ ನೆರವಿನಿಂದ 42 ರನ್ ಗಳಿಸಿದರು. ಇಂಡಿಯಾದ ಮಾಜಿ ಆಲ್‌ರೌಂಡರ್ ಸ್ಟುವರ್ಟ್ ಬಿನ್ನಿ 21 ಎಸೆತಗಳಲ್ಲಿ 36 ರನ್ ಗಳಿಸಿದರೆ, ಯೂಸುಫ್ ಪಠಾಣ್ 10 ಎಸೆತಗಳಲ್ಲಿ 23 ರನ್ ಗಳಿಸಿದರು. ಇರ್ಫಾನ್ ಪಠಾಣ್ ಕೂಡ 7 ಎಸೆತಗಳಲ್ಲಿ 19 ರನ್ ಗಳಿಸಿ ಉತ್ತಮ ಪ್ರದರ್ಶನ ನೀಡಿದರು.(ಏಜೆನ್ಸೀಸ್​)