ಕ್ರೀಡೆ

5 ಅಲ್ಲ, 500 ಹುಡುಗಿಯರು… ಸಾನಿಯಾ ವಿಚ್ಛೇದನದ ನಂತರ ವೈರಲ್ ಆದ ಶೋಯೆಬ್ ಮಲಿಕ್ ವಿಡಿಯೋ

ನವದೆಹಲಿ: ಪಾಕಿಸ್ತಾನಿ ಕ್ರಿಕೆಟಿಗ ಶೋಯೆಬ್ ಮಲಿಕ್ ಕೆಲವೊಮ್ಮೆ ಅವರ ಬೌಲಿಂಗ್‌ನಿಂದಾಗಿ, ಮತ್ತೆ ಕೆಲವೊಮ್ಮೆ ಬ್ಯಾಟಿಂಗ್‌ನಿಂದಾಗಿ ಸುದ್ದಿಯಲ್ಲಿರುತ್ತಿದ್ದರು. ಆದರೆ ಈಗ ಪರಿಸ್ಥಿತಿ ಸ್ವಲ್ಪ ಬದಲಾಗಿದೆ. ಈ ಪಾಕಿಸ್ತಾನಿ ಆಟಗಾರ ಈಗ ಸುದ್ದಿಯಲ್ಲಿರುವುದು ಕ್ರಿಕೆಟ್‌ನಿಂದಲ್ಲ, ಬದಲಾಗಿ ಅವರ ವೈಯಕ್ತಿಕ ಜೀವನದಿಂದಾಗಿ. ಇತ್ತೀಚೆಗಷ್ಟೇ ಶೋಯೆಬ್ ಮಲಿಕ್ ಸಾನಿಯಾ ಮಿರ್ಜಾರಿಂದ ವಿಚ್ಛೇದನ ಪಡೆದಿದ್ದು, ಅವರು ಮೂರನೇ ಬಾರಿಗೆ ವಿವಾಹವಾಗಿದ್ದಾರೆ. ಮದುವೆಯ ನಂತರ, ಶೋಯೆಬ್ ಮಲಿಕ್ ಅವರ ಹಳೆಯ ವಿಡಿಯೋಗಳು ನಿರಂತರವಾಗಿ ವೈರಲ್ ಆಗುತ್ತಿದ್ದು, ಇವರ ಒಂದು ವಿಡಿಯೋ ಈಗ ಚರ್ಚೆಗೆ ಗ್ರಾಸವಾಗಿದೆ.

ಶೋಯೆಬ್ ಮಲಿಕ್ ಅವರ ಈ ವಿಡಿಯೋ ಟಾಕ್ ಶೋನಿಂದ ಹೊರಬಂದಿದ್ದು, ಇದರಲ್ಲಿ ಶೋಯೆಬ್ ಅಖ್ತರ್ ಅವರಿಗೆ ಕೆಲವು ಪ್ರಶ್ನೆಗಳನ್ನು ಕೇಳಲಾಯಿತು. ಶೋಯೆಬ್ ಅಖ್ತರ್​​​​​ಗೆ ಯಾವುದೇ ಕ್ಷೇತ್ರದ ಯಾವುದೇ ಹುಡುಗಿ ತಮ್ಮ ಹೃದಯವನ್ನು ಗೆದ್ದಿದ್ದಾರೆಯೇ ಅಥವಾ ಆಕರ್ಷಿತರಾಗಿದ್ದೀರಾ ಎಂದು ಪ್ರಶ್ನಿಸಲಾಗಿದೆ. ಇದಕ್ಕೆ ಉತ್ತರವಾಗಿ ಶೋಯೆಬ್, ಎಲ್ಲಾ ಹುಡುಗಿಯರು ನನ್ನ ಹೃದಯವನ್ನು ಗೆದ್ದಿದ್ದಾರೆ ಎಂದು ತಿಳಿಸಿದ್ದಾರೆ.

ಆ ನಂತರ ಯಾವುದೇ ಕ್ಷೇತ್ರದ ಐವರು ಮಹಿಳೆಯರನ್ನು ಹೆಸರಿಸಲು ಕೇಳಿದಾಗ ಅದಕ್ಕೆ ಶೋಯೆಬ್, 5 ಅಲ್ಲ, 500 ಹುಡುಗಿಯರು ಎಂದು ಉತ್ತರಿಸುತ್ತಾರೆ. ನೀವು ಯಾವುದೇ 5 ಹುಡುಗಿಯರ ಹೆಸರನ್ನು ತೆಗೆದುಕೊಂಡರೆ ಉಳಿದವರಿಗೆ ಬೇಸರವಾಗುತ್ತದೆ. ಅಷ್ಟೇ ಅಲ್ಲ, ಹುಡುಗರಿಗಿಂತ ಹುಡುಗಿಯರೊಂದಿಗೆ ಹೆಚ್ಚು ಸ್ನೇಹ ಹೊಂದಿದ್ದೇನೆ ಎಂದು ಶೋಯೆಬ್ ಹೇಳಿದ್ದಾರೆ.

ಮೂರು ವರ್ಷಗಳಿಂದ ಸನಾ ಜೊತೆ ಅಫೇರ್! ಇತ್ತೀಚೆಗೆ, ಶೋಯೆಬ್ ಮಲಿಕ್ ಕಳೆದ ಮೂರು ವರ್ಷಗಳಿಂದ ಸನಾ ಜಾವೇದ್ ಜೊತೆ ಸಂಬಂಧ ಹೊಂದಿದ್ದರು ಎಂದು ಪಾಕಿಸ್ತಾನಿ ಮಾಧ್ಯಮ ವರದಿಯಲ್ಲಿ ಬಹಿರಂಗವಾಗಿದೆ. ಅಚ್ಚರಿಯ ಸಂಗತಿ ಎಂದರೆ ಮೂರು ವರ್ಷಗಳ ಹಿಂದೆಯಷ್ಟೇ ಸನಾ ಮದುವೆಯಾಗಿದ್ದರು. ಅರ್ಥಾತ್, ಮದುವೆಯಾದ ತಕ್ಷಣ ಅಥವಾ ಅದಕ್ಕಿಂತ ಸ್ವಲ್ಪ ಮೊದಲು, ಆಕೆ ಶೋಯೆಬ್ ಮಲಿಕ್ ಅನ್ನು ಪ್ರೀತಿಸಲು ಪ್ರಾರಂಭಿಸಿದರು. ಕಳೆದ ಮೂರು ವರ್ಷಗಳ ಶೋಯೆಬ್ ಮಲಿಕ್ ನಡೆಗಳ ಬಗ್ಗೆ ಸಾನಿಯಾ ಮತ್ತು ಅವರ ಕುಟುಂಬಕ್ಕೆ ತಿಳಿದಿತ್ತು ಎಂದು ವರದಿ ಹೇಳಿದೆ. ಕಳೆದ ವರ್ಷವಷ್ಟೇ ಶೋಯೆಬ್ ಕುಟುಂಬಕ್ಕೆ ಈ ವಿಷಯ ಗೊತ್ತಾಗಿತ್ತು. ಶೋಯೆಬ್‌ ಸಾಕಷ್ಟು ವಿವರಣೆ ನೀಡಿದರೂ ಅವರು ಒಪ್ಪಲಿಲ್ಲ. ಕೊನೆಯಲ್ಲಿ ಅವರು ಸಾನಿಯಾರಿಂದ ಬೇರ್ಪಟ್ಟರು.