ಬೆಂಗಳೂರು: ಬೆಂಗಳೂರಿನಲ್ಲಿ ದೇಶದ ಅತಿದೊಡ್ಡ ಕರಾಟೆ ಶಾಲೆ ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾ ನಡೆಸಿದ ಅಂತಾರಾಷ್ಟ್ರೀಯ ಕರಾಟೆ ಚಾಂಪಿಯನ್ಷಿಪ್ ಭರ್ಜರಿ ಯಶಸ್ಸು ಕಂಡಿದೆ.
ಈ ವರ್ಷದ ಗಣರೋಜ್ಯೋತ್ಸವ ದಿನ ಆರಂಭಗೊಂಡ ಈ ಕರಾಟೆ ಸ್ಪರ್ಧೆಯಲ್ಲಿ ಕರ್ನಾಟಕ, ಅಸ್ಸಾಂ, ಪಶ್ಚಿಮ ಬಂಗಾಲ ಹಾಗೂ ಶ್ರೀಲಂಕಾ ಸೇರಿದಂತೆ ಹಲವು ತಂಡಗಳು ಭಾಗವಹಿಸಿದ್ದವು. ಇದರಲ್ಲಿ, ಕರ್ನಾಟಕದ ತಂಡದ ಸ್ಪರ್ಧಿಗಳೇ ಮೇಲುಗೈ ಸಾಧಿಸಿದರು.
ನಗರದ ಬನಶಂಕರಿ ಬಳಿಯಿರುವ ನ್ಯಾಷನಲ್ ಪಬ್ಲಿಕ್ ಸ್ಕೂಲ್ನಲ್ಲಿ ಆಯೋಜನೆಗೊಂಡಿದ್ದ ಈ ಕರಾಟೆ ಚಾಂಪಿಯನ್ಷಿಪ್ ಒಟ್ಟು 3 ದಿನಗಳ ಕಾಲ ನಡೆದಿದ್ದು, ಮಿಸ್ ಜಪಾನ್ ಖ್ಯಾತಿಯ ನವೋಕಾ ಓಹಾರಾ ಅಧ್ಯಕ್ಷತೆ ವಹಿಸಿದ್ದರು. ವಿಶ್ವ ಕರಾಟೆ ಫೆಡೆರೇಷನ್ ಜಡ್ಜ್ ಶಿವದಾಸ್, ಓಎಸ್ಕೆ ಫೆಡೆರೇಷನ್ ಆಫ್ ಇಂಡಿಯಾದ ಅಧ್ಯಕ್ಷ ಸುರೇಶ್ ಕೆನಿಚಿರಾ ಸೇರಿದಂತೆ 100ಕ್ಕೂ ಹೆಚ್ಚು ಅಧಿಕಾರಿಗಳು ಈ ಚಾಂಪಿಯನ್ಷಿಪ್ನಲ್ಲಿ ಭಾಗವಹಿಸಿದ್ದರು.