ನೈರೋಬಿ: ಭಾರತೀಯ ಕ್ರೀಡಾಪಟುಗಳ ಯಶೋಗಾಥೆ ಒಲಿಂಪಿಕ್ಸ್ಗೇ ಸೀಮಿತವಾಗಿಲ್ಲ. ಇದೀಗ ಕೀನ್ಯಾದ ನೈರೋಬಿಯಲ್ಲಿ ನಡೆಯುತ್ತಿರುವ ವರ್ಲ್ಡ್ ಅಥ್ಲೆಟಿಕ್ಸ್ ಅಂಡರ್ 20 ಚ್ಯಾಂಪಿಯನ್ಶಿಪ್ಸ್ನಲ್ಲೂ ನಮ್ಮ ಕ್ರೀಡಾಪಟುಗಳು ಪದಕಗಳನ್ನು ಗಳಿಸುತ್ತಿದ್ದಾರೆ.
ಇಂದು ನಡೆದ 10,000 ಮೀಟರ್ ರೇಸ್ ವಾಕ್ನಲ್ಲಿ ಭಾರತದ ಅಮಿತ್ ಕುಮಾರ್ ಎರಡನೇ ಸ್ಥಾನ ಗಳಿಸಿ, ಬೆಳ್ಳಿ ಪದಕ ಗೆದ್ದಿದ್ದಾರೆ. ನೈರೋಬಿಯ ಕಸರನಿ ಕ್ರೀಡಾಂಗಣದಲ್ಲಿ ನಡೆದ ಈ ಸ್ಪರ್ಧೆಯಲ್ಲಿ 42 ನಿಮಿಷ 17:94 ಸೆಕೆಂಡುಗಳ ಸಮಯದಲ್ಲಿ ಅವರು, ನಡಿಗೆ ಸ್ಪರ್ಧೆಯನ್ನು ಪೂರ್ಣಗೊಳಿಸಿದ್ದಾರೆ. ಕೀನ್ಯಾದ ಹರಿಸ್ಟೋನ್ ವಾನ್ಯೋನ್ಯಿ ಚಿನ್ನದ ಪದಕ ಗೆದ್ದರೆ, ಪೌಲ್ ಮೆಕ್ಗ್ರತ್ ಕಂಚು ಗಳಿಸಿದರು.
ಈ ಚ್ಯಾಂಪಿಯನ್ಶಿಪ್ಸ್ನಲ್ಲಿ ಇದು ಭಾರತಕ್ಕೆ ಲಭಿಸಿರುವ ಎರಡನೇ ಪದಕವಾಗಿದೆ. ಬುಧವಾರ ಆರಂಭವಾದ ಕ್ರೀಡಾಕೂಟದಲ್ಲಿ ಮೊದಲನೇ ದಿನವೇ ಭಾರತದ ಮಿಕ್ಸಡ್ ರಿಲೇ ತಂಡವು ಮೂರನೇ ಸ್ಥಾನ ಗಳಿಸಿ, ಕಂಚಿನ ಪದಕ ಗೆದ್ದಿತ್ತು. (ಏಜೆನ್ಸೀಸ್)