Sourav Ganguly : 2024-25ರ ರಣಜಿ ಟ್ರೋಫಿಯ ಎರಡನೇ ಲೀಗ್ ಪಂದ್ಯಗಳು ನಿನ್ನೆ (ಜನವರಿ 23)ಯಿಂದ ಪ್ರಾರಂಭವಾಗಿವೆ. ರವೀಂದ್ರ ಜಡೇಜಾ (ಐದು ವಿಕೆಟ್‌ಗಳು) ಹೊರತುಪಡಿಸಿ, ಎಲ್ಲ ಭಾರತೀಯ ಆಟಗಾರರು ಮೊದಲ ದಿನದಂದು ನಿರೀಕ್ಷಿತ ಪ್ರದರ್ಶನ ತೋರುವಲ್ಲಿ ವಿಫಲರಾದರು. ಆದರೆ, ಹಲವಾರು ದೇಶೀಯ ಆಟಗಾರರು (ಗುಜರಾತ್ ಬೌಲರ್ ಸಿದ್ಧಾರ್ಥ್ ದೇಸಾಯಿ ಅವರ ಒಂಬತ್ತು ವಿಕೆಟ್‌ಗಳ ಪ್ರದರ್ಶನ) ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸಿದರು. ನಿನ್ನೆ ಪ್ರಾರಂಭವಾದ ಪಂದ್ಯಗಳಲ್ಲಿ, 10ನೇ ತರಗತಿಯಲ್ಲಿ ಓದುತ್ತಿರುವ ಹುಡುಗನೊಬ್ಬ ಭಾರತದ ಮಾಜಿ ನಾಯಕ ಸೌರವ್ ಗಂಗೂಲಿ ಅವರ ದಾಖಲೆಯನ್ನು ಮುರಿದಿದ್ದಾನೆ.
ನಿನ್ನೆ ಆರಂಭವಾದ ಹರಿಯಾಣ ವಿರುದ್ಧದ ಪಂದ್ಯದಲ್ಲಿ 15 ವರ್ಷದ ಅಂಕಿತ್ ಚಟರ್ಜಿ ಪಶ್ಚಿಮ ಬಂಗಾಳ ಪರ ಪಾದರ್ಪಣೆ ಮಾಡಿದರು. ಬಂಗಾಳ ಪರ ರಣಜಿಯಲ್ಲಿ ಪಾದರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಇದಕ್ಕೂ ಮೊದಲು, ಈ ದಾಖಲೆಯನ್ನು ಬಿಸಿಸಿಐನ ಮಾಜಿ ಅಧ್ಯಕ್ಷ ಸೌರವ್ ಗಂಗೂಲಿ ಹೊಂದಿದ್ದರು. ಗಂಗೂಲಿ 17ನೇ ವಯಸ್ಸಿನಲ್ಲಿ ರಣಜಿಗೆ ಪಾದರ್ಪಣೆ ಮಾಡಿದರು. ಅಂಕಿತ್ ಪ್ರಸ್ತುತ 10ನೇ ತರಗತಿಯಲ್ಲಿ ಓದುತ್ತಿದ್ದಾನೆ. ಕ್ಲಬ್ ಮಟ್ಟದ ಕ್ರಿಕೆಟ್‌ನಲ್ಲಿ ಅಂಕಿತ್ ಅವರ ಅದ್ಭುತ ಪ್ರದರ್ಶನವು ಅವರಿಗೆ ರಣಜಿ ತಂಡದಲ್ಲಿ ಸ್ಥಾನ ತಂದುಕೊಟ್ಟಿದೆ.
ನಿನ್ನೆ ಪ್ರಾರಂಭವಾದ ಹರಿಯಾಣ ವಿರುದ್ಧದ ಪಂದ್ಯದಲ್ಲಿ, ಅಂಕಿತ್ 20 ಎಸೆತಗಳಲ್ಲಿ ಬೌಂಡರಿ ಸಹಾಯದಿಂದ 5 ರನ್ ಗಳಿಸಿ ಅಜೇಯರಾಗಿ ಉಳಿದರು. ಮೊದಲ ದಿನದ ಆಟದ ಅಂತ್ಯದ ವೇಳೆಗೆ, ಅಂಕಿತ್ ಪ್ರತಿನಿಧಿಸುವ ಬಂಗಾಳವು ಒಂದು ವಿಕೆಟ್ ನಷ್ಟಕ್ಕೆ 6 ರನ್ ಗಳಿಸಿತ್ತು. ಇದಕ್ಕೂ ಮೊದಲು, ಹರಿಯಾಣ ತನ್ನ ಮೊದಲ ಇನ್ನಿಂಗ್ಸ್‌ನಲ್ಲಿ 157 ರನ್‌ಗಳಿಗೆ ಆಲೌಟ್ ಆಗಿತ್ತು. ಬಂಗಾಳದ ಯುವ ಬೌಲರ್ ಸೂರಜ್ ಸಿಂಧು ಜೈಸ್ವಾಲ್ ಆರು ವಿಕೆಟ್ ಪಡೆದು ಹರಿಯಾಣಕ್ಕೆ ನೆರವಾದರು. ಮುಖೇಶ್ ಕುಮಾರ್ ಮತ್ತು ಟೀಮ್ ಇಂಡಿಯಾ ವೇಗಿ ಮೊಹಮ್ಮದ್ ಶಮಿ ಅವರ ಕಿರಿಯ ಸಹೋದರ ಮೊಹಮ್ಮದ್ ಕೈಫ್ ತಲಾ ಎರಡು ವಿಕೆಟ್ ಪಡೆದರು. ಹರಿಯಾಣ ಇನ್ನಿಂಗ್ಸ್‌ನಲ್ಲಿ ನಾಯಕ ಅಂಕಿತ್ ಕುಮಾರ್ (57) ಗರಿಷ್ಠ ಸ್ಕೋರರ್ ಎನಿಸಿಕೊಂಡರು.
ಅಂಕಿತ್ ಚಟರ್ಜಿ ಬಂಗಾಳ ಪರ ರಣಜಿಗೆ ಪಾದಾರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ. ಆದರೆ, ಒಟ್ಟಾರೆ ರಣಜಿಗೆ ಪಾದರ್ಪಣೆ ಮಾಡಿದ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆ ವೈಭವ್ ಸೂರ್ಯವಂಶಿ ಅವರ ಹೆಸರಿನಲ್ಲಿದೆ. 12ನೇ ವಯಸ್ಸಿನಲ್ಲಿ ಬಿಹಾರ ಪರ ರಣಜಿಗೆ ಪಾದಾರ್ಪಣೆ ಮಾಡಿದರು. ಮುಂಬೈ ವಿರುದ್ಧದ ತಮ್ಮ ಮೊದಲ ಪಂದ್ಯದಲ್ಲಿ ವೈಭವ್ ಉತ್ತಮ ಪ್ರದರ್ಶನ ನೀಡಿದರು. 19 ವರ್ಷದೊಳಗಿನವರ ಭಾರತ ತಂಡದಲ್ಲಿ ಅತ್ಯಂತ ಕಿರಿಯ ಆಟಗಾರ ಎಂಬ ದಾಖಲೆಯೂ ವೈಭವ್ ಅವರ ಹೆಸರಿನಲ್ಲಿದೆ. (ಏಜೆನ್ಸೀಸ್)