ಭಾರತದ ಯುವ ಕ್ರಿಕೆಟಿಗ ವೈಭವ್ ಸೂರ್ಯವಂಶಿ ಅತ್ಯುತ್ತಮ ಫಾರ್ಮ್‌ನಲ್ಲಿ ಮುಂದುವರೆದಿದ್ದಾರೆ. ಇಂಗ್ಲೆಂಡ್ ವಿರುದ್ಧದ ಯೂತ್ ಏಕದಿನ ಪಂದ್ಯಗಳಲ್ಲಿ ಶನಿವಾರ 14ವರ್ಷದ ಈ ಆರಂಭಿಕ ಬ್ಯಾಟ್ಸ್‌ಮನ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದು, ಕೆಲವ 52 ಬಾಲ್ಗೆ 100 ರನ್ ಬಾರಿಸಿ U-19 ಏಕದಿನ ಕ್ರಿಕೆಟ್ನಲ್ಲಿ ಇತಿಹಾಸ ಬರೆದಿದ್ದಾರೆ.
ಇದನ್ನೂ ಓದಿ:ಕರ್ತವ್ಯದಲ್ಲಿದ್ದ ಎಎಸ್ಐ ಹೃದಯಾಘಾತಕ್ಕೆ ಬಲಿ
ಪಾಕಿಸ್ತಾನದ ಕಮ್ರಾಮ್ ಗುಲಾಮ್ ಅವರ ಹಿಂದಿನ ಅತ್ಯುತ್ತಮ ಶತಕವನ್ನು 53 ಎಸೆತಗಳಲ್ಲಿ ಮೀರಿಸಿದರು. ಸೂರ್ಯವಂಶಿ ಅಂತಿಮವಾಗಿ ಬೆನ್ ಮೇಯ್ಸ್ ಎಸೆತದಲ್ಲಿ 143 (78) ರನ್ ಗಳಿಸಿ ಔಟಾದರು. ವೈಭವ್ ತಮ್ಮ ಇನಿಂಗ್ಸ್‌ನಲ್ಲಿ 13 ಬೌಂಡರಿಗಳು ಮತ್ತು 10 ಸಿಕ್ಸರ್‌ಗಳನ್ನು ಬಾರಿಸಿದರು. ನಾಲ್ಕು ಪಂದ್ಯಗಳಲ್ಲಿ 306 ರನ್ ಗಳಿಸುವ ಮೂಲಕ ಅವರು ಸರಣಿಯಲ್ಲಿ ಇದುವರೆಗಿನ ಅತಿ ಹೆಚ್ಚು ರನ್ ಗಳಿಸಿದ ಆಟಗಾರರಾಗಿದ್ದಾರೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಅರ್ಧಾವಧಿಯ ವೇಳೆಗೆ 216 ರನ್ ಗಳಿಸಿತು. ನಾಯಕ ಮತ್ತು ಆರಂಭಿಕ ಆಟಗಾರ ಆಯುಷ್ ಮಾತ್ರೆ (5) ಮತ್ತೊಮ್ಮೆ ನಿರಾಸೆ ಮೂಡಿಸಿದರೆ, ವೈಭವ್ 78 ಎಸೆತಗಳಲ್ಲಿ 148 ರನ್ ಮತ್ತು ವಿಹಾನ್ ಮಲ್ಹೋತ್ರಾ 62 ಎಸೆತಗಳಲ್ಲಿ 47 ರನ್ ಗಳಿಸಿದರು.(ಏಜೆನ್ಸೀಸ್)