ಬೆಂಗಳೂರು: ಏಕದಿನ ವಿಶ್ವಕಪ್ ವಿಜೇತ ಆಸ್ಟ್ರೆಲಿಯಾ ತಂಡದ ತಾರೆಯರಾದ ಟ್ರಾವಿಸ್ ಹೆಡ್, ನಾಯಕ ಪ್ಯಾಟ್ ಕಮ್ಮಿನ್ಸ್ ಮತ್ತು ಮಿಚೆಲ್ ಸ್ಟಾರ್ಕ್ ಸಹಿತ 1,166 ಆಟಗಾರರು ಮುಂಬರುವ ಐಪಿಎಲ್ 17ನೇ ಆವೃತ್ತಿಯ ಹರಾಜು ಪ್ರಕ್ರಿಯೆಗೆ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇದರಲ್ಲಿ 830 ಭಾರತೀಯರಾಗಿದ್ದರೆ, 336 ವಿದೇಶೀಯರಾಗಿದ್ದಾರೆ.
ಐಪಿಎಲ್ ಹರಾಜು ಪ್ರಕ್ರಿಯೆ ಡಿಸೆಂಬರ್ 19ರಂದು ದುಬೈನಲ್ಲಿ ನಡೆಯಲಿದ್ದು, 10 ತಂಡಗಳು ಒಟ್ಟಾರೆ ಗರಿಷ್ಠ 77 ಆಟಗಾರರನ್ನು ಖರೀದಿಸಲು ಅವಕಾಶವಿದೆ. 10 ತಂಡಗಳು ಒಟ್ಟು 262.95 ಕೋಟಿ ರೂ. ಬಜೆಟ್ ಕೂಡ ಹೊಂದಿವೆ.
ವಿಶ್ವಕಪ್ನಲ್ಲಿ ನ್ಯೂಜಿಲೆಂಡ್ ಪರ ಮಿಂಚಿದ ಬೆಂಗಳೂರು ಮೂಲದ ಯುವ ಆಲ್ರೌಂಡರ್ ರಚಿನ್ ರವೀಂದ್ರ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹರಾಜಿನಲ್ಲಿ ಅವರು ಇದಕ್ಕಿಂತ 15-20 ಪಟ್ಟು ಅಧಿಕ ಮೊತ್ತಕ್ಕೆ ಮಾರಾಟವಾಗುವ ನಿರೀಕ್ಷೆ ಇದೆ.ಮುಂಬೈ ತಂಡದಿಂದ ರಿಲೀಸ್ ಆಗಿರುವ ಇಂಗ್ಲೆಂಡ್ ವೇಗಿ ಜೋ್ರಾ ಆರ್ಚರ್ ಈ ಬಾರಿ ಹರಾಜಿಗೆ ಹೆಸರು ನೋಂದಾಯಿಸಿಕೊಂಡಿಲ್ಲ ಎನ್ನಲಾಗಿದೆ.
ಕನ್ನಡಿಗ ಮನೀಷ್ ಪಾಂಡೆಗೆ 50 ಲಕ್ಷ ರೂ. ಮೂಲಬೆಲೆ
ಡೆಲ್ಲಿ ತಂಡದಿಂದ ರಿಲೀಸ್ ಆಗಿರುವ ಕನ್ನಡಿಗ ಮನೀಷ್ ಪಾಂಡೆ 50 ಲಕ್ಷ ರೂ. ಮೂಲಬೆಲೆಯೊಂದಿಗೆ ಮತ್ತೆ ಅದೃಷ್ಟ ಪರೀಸಲಿದ್ದಾರೆ. ಆರ್ಸಿಬಿಯಿಂದ ಹೊರಬಿದ್ದಿರುವ ವೇಗಿ ಹರ್ಷಲ್ ಪಟೇಲ್, ಕೆಕೆಆರ್ ತಂಡದಿಂದ ಹೊರಬಿದ್ದಿರುವ ಶಾರ್ದೂಲ್ ಠಾಕೂರ್ ಸಹಿತ ಟೀಮ್ ಇಂಡಿಯಾ ಪರ ಆಡಿರುವ 18 ಆಟಗಾರರು ಹರಾಜಿನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಭಾರತದ ಉಳಿದೆಲ್ಲರೂ ದೇಶೀಯ ಆಟಗಾರರಾಗಿದ್ದಾರೆ.
2 ಕೋಟಿ ರೂ. ಮೂಲಬೆಲೆ ಆಟಗಾರರು
ಹರ್ಷಲ್ ಪಟೇಲ್, ಕೇದಾರ್ ಜಾಧವ್, ಶಾರ್ದೂಲ್ ಠಾಕೂರ್, ಉಮೇಶ್ ಯಾದವ್ (ಭಾರತ), ಪ್ಯಾಟ್ ಕಮ್ಮಿನ್ಸ್, ಟ್ರಾವಿಸ್ ಹೆಡ್, ಸ್ಟೀವನ್ ಸ್ಮಿತ್, ಮಿಚೆಲ್ ಸ್ಟಾರ್ಕ್, ಜೋಶ್ ಹ್ಯಾಸಲ್ವುಡ್, ಸೀನ್ ಅಬೋಟ್, ಜೋಶ್ ಇಂಗ್ಲಿಸ್ (ಆಸ್ಟ್ರೆಲಿಯಾ), ಹ್ಯಾರಿ ಬ್ರೂಕ್, ಬೆನ್ ಡಕೆಟ್, ಆದಿಲ್ ರಶೀದ್, ಡೇವಿಡ್ ವಿಲ್ಲಿ, ಕ್ರಿಸ್ ವೋಕ್ಸ್, ಜೇಮಿ ಓವರ್ಟನ್, ಟಾಮ್ ಬ್ಯಾಂಟನ್ (ಇಂಗ್ಲೆಂಡ್), ರಿಲೀ ರೋಸೌ, ವಾನ್ ಡರ್ ಡುಸೆನ್, ಗೆರಾಲ್ಡ್ ಕೋಟ್ಜೀ (ದಣ ಆಫ್ರಿಕಾ), ಲಾಕಿ ಫಗ್ಯುರ್ಸನ್ (ನ್ಯೂಜಿಲೆಂಡ್), ಮುಜೀಬ್ ಉರ್ ರೆಹಮಾನ್ (ಅಫ್ಘಾನಿಸ್ತಾನ), ಏಂಜೆಲೊ ಮ್ಯಾಥ್ಯೂಸ್ (ಶ್ರೀಲಂಕಾ), ಮುಸ್ತಾಫಿಜುರ್ ರೆಹಮಾನ್ (ಬಾಂಗ್ಲಾದೇಶ).
1.5 ಕೋಟಿ ರೂ. ಮೂಲಬೆಲೆ ಆಟಗಾರರು
ಮೊಹಮದ್ ನಬಿ, ಮೊಯ್ಸಸ್ ಹೆನ್ರಿಕ್ಸ್, ಕ್ರಿಸ್ ಲ್ಯಾನ್, ಕೇನ್ ರಿಚರ್ಡ್ಸನ್, ಡೇನಿಯಲ್ ಸ್ಯಾಮ್ಸ್, ಡೇನಿಯಲ್ ವೊರೆಲ್, ಟಾಮ್ ಕರನ್, ಮರ್ಚೆಂಟ್ ಡಿ ಲಾಂಗ್, ಕ್ರಿಸ್ ಜೋರ್ಡನ್, ಡೇವಿಡ್ ಮಲಾನ್, ಟೈಮಲ್ ಮಿಲ್ಸ್, ಫಿಲ್ ಸಾಲ್ಟ್, ಕೋರಿ ಆಂಡರ್ಸನ್, ಕಾಲಿನ್ ಮನ್ರೋ, ಜಿಮ್ಮಿ ನೀಶಾಮ್, ಟಿಮ್ ಸೌಥಿ, ಕಾಲಿನ್ ಇನ್ಗ್ರಾಂ, ವಾನಿಂದು ಹಸರಂಗ, ಜೇಸನ್ ಹೋಲ್ಡರ್, ಶೆರ್ಫಾನ್ ರುದರ್ಪೋರ್ಡ್.
1 ಕೋಟಿ ರೂ. ಮೂಲಬೆಲೆ ಆಟಗಾರರರು
ಆಶ್ಟನ್ ಅಗರ್, ರಿಲೀ ಮೆರಿಡಿತ್, ಡಾರ್ಸಿ ಶಾರ್ಟ್, ಆಶ್ಟನ್ ರ್ಟನರ್, ಗಸ್ ಅಟ್ಕಿನ್ಸನ್, ಸ್ಯಾಮ್ ಬಿಲ್ಲಿಂಗ್ಸ್, ಮಿಚೆಲ್ ಬ್ರೇಸ್ವೆಲ್, ಮಾರ್ಟಿನ್ ಗುಪ್ಟಿಲ್, ಕೈಲ್ ಜೇಮಿಸನ್, ಆಡಂ ಮಿಲ್ನೆ, ಡೆರಿಲ್ ಮಿಚೆಲ್, ವೇಯ್ನ್ ಪಾರ್ನೆಲ್, ಡ್ವೇನ್ ಪ್ರಿಟೋರಿಯಸ್, ಅಲ್ಜಾರಿ ಜೋಸೆಫ್, ರೋವ್ಮನ್ ಪೊವೆಲ್, ಡೇವಿಡ್ ವೈಸ್.